ಅಂತರಾಷ್ಟ್ರೀಯ

ವಿಶ್ವದ ಅತಿ ವೇಗದ ರೈಲು ಮ್ಯಾಗ್ಲೆವ್; ಗಂಟೆಗೆ 603 ಕೀ.ಮೀ.

Pinterest LinkedIn Tumblr

Maglevtrain

ಇಷ್ಟೊಂದು ವೇಗದಲ್ಲಿ ಸಾಗುವ ರೈಲೊಂದನ್ನು ನಿಮ್ಮಿಂದ ಊಹಿಸಲು ಸಾಧ್ಯವೇ? ಅಬ್ಬಬ್ಬಾ ಜಪಾನ್ ಮ್ಯಾಗ್ಲೆವ್ ರೈಲು ವಿಶ್ವ ದಾಖಲೆಯ ಮೇಲೆ ವಿಶ್ವ ದಾಖಲೆ ಬರೆಯುತ್ತಲೇ ಸಾಗುತ್ತಿದೆ.

ಕಳೆದ ವಾರ ಗಂಟೆಗೆ ದಾಖಲೆಯ 590 ಕೀ.ಮೀ. ವೇಗದಲ್ಲಿ ಸಂಚರಿಸಿದ್ದ ಮ್ಯಾಗ್ಲೆವ್ ರೈಲು ಇದೀಗ ಗಂಟೆಗೆ ಭರ್ಜರಿ 603 ಕೀ.ಮೀ. ವೇಗವನ್ನು ಕ್ರಮಿಸುವ ಮೂಲಕ ಇಡೀ ವಿಶ್ವವನ್ನೇ ಬೆರಗುಗೊಳಿಸಿದೆ.

ಇಲ್ಲಿಗೂ ತಮ್ಮ ಪ್ರಯತ್ನವನ್ನು ನಿಲ್ಲಿಸದ ಜಪಾನ್‍ನ ರೈಲ್ವೆ ಅ„ಕಾರಿಗಳು ಒಂದು ವಾರದೊಳಗೆ ಮೌಂಟ್ ಫ್ಯೂಜಿ ಟೆಸ್ಟ್ ಪಯಣದಲ್ಲಿ ಗಂಟೆಗೆ 600 ಕೀ.ಮೀ. ವೇಗವನ್ನು ತಲುಪುವ ಮೂಲಕ ನೂತನ ದಾಖಲೆಗೆ ಮುತ್ತಿಕ್ಕಿದ್ದಾರೆ.

ಮ್ಯಾಗ್ಲೆವ್ ರೈಲು ಆಯಸ್ಕಾಂತೀಯ ತೇಲುವಿಕೆ ರೈಲು ಹಳಿ ಮೇಲ್ಗಡೆಯಲ್ಲಿ ಸಂಚರಿಸುತ್ತದೆ. ಈ ವ್ಯವಸ್ಥೆಯು ಬುಲೆಟ್ ರೈಲಿಗಿಂತಲೂ ಹೆಚ್ಚಿನ ವೇಗ, ಕಡಿಮೆ ಸದ್ದು, ಸುಗಮತೆಯನ್ನು ನೀಡಲು ಸಮರ್ಥವಾಗಿದೆ.

Write A Comment