ಅಂತರಾಷ್ಟ್ರೀಯ

ಮ್ಯಾಕ್ ಡೋನಾಲ್ಡ್ ಬರ್ಗರ್‍ನಲ್ಲಿ ಜಿರಳೆ! ಮ್ಯಾಕ್ ಡೋನಾಲ್ಡ್ ವಿರುದ್ಧ ದೂರು

Pinterest LinkedIn Tumblr

cockroach-burger

ವೆಲ್ಲಿಂಗ್ಟನ್: ನೀವು ಪಾಸ್ಟ್‍ಫುಡ್ ಪ್ರಿಯರೇ, ಬರ್ಗರ್ ತಿನ್ನಬೇಕೆಂದು ರೆಸ್ಟೋರೆಂಟ್‍ಗಳಿಗೆ ಮುಗಿಬೀಳುತ್ತೀರಾ, ಹಾಗಾದರೆ ಪಾಸ್ಟ್‍ಫುಡ್ ಸಂಬಂಧಿಸಿದಂತೆ ಅಘಾತಕಾರಿ ಘಟನೆಯೊಂದು ದೂರಾದ ನ್ಯೂಜಿಲ್ಯಾಂಡ್‍ನಲ್ಲಿ ನಡೆದಿದೆ. ಫಾಸ್ಟ್‍ಫುಡ್ ನೀಡುವುದರಲ್ಲಿ ಪ್ರಖ್ಯಾತಿ ಹೊಂದಿರುವ ಅಂತಾರಾಷ್ಟ್ರೀಯ ಬ್ರ್ಯಾಂಡ್ ಮ್ಯಾಕ್ ಡೋನಾಲ್ಡ್‍ನಲ್ಲಿ ಕಂಪೆನಿಯ ಬರ್ಗರ್‍ನಲ್ಲಿ ಜಿರಳೆ ಪತ್ತೆಯಾಗಿದೆ.

ಹೌದು, ಬರ್ಗರ್ ಪ್ರಿಯರಿಗೆ ಕೇಳಲು ಅಸಹ್ಯವಾಗುವ ಸಂಗತಿ ಈಗ ಬಯಲಾಗಿದೆ. ನ್ಯೂಜಿಲ್ಯಾಂಡ್‍ನ ಮಹಿಳೆಯೊಬ್ಬರಿಗೆ ಬರ್ಗರ್‍ನಲ್ಲಿ ಜಿರಳೆ ಸಿಕ್ಕಿದೆ. ಶನಿವಾರ ಐಲ್ಯಾಂಡ್‍ನ ರೆಸ್ಟೋರೆಂಟ್ ಒಂದರಲ್ಲಿ ಅನ್ನಾ ಸೋಫಿಯಾ ಎಂಬವರು ಬರ್ಗರ್ ಖರೀದಿ ಮಾಡಿದ್ದಾರೆ. ಮನೆಗೆ ಬಂದು ತಿನ್ನುತ್ತಿದ್ದಾಗ ಆಕೆಗೆ ಜಿರಳೆ ಸಿಕ್ಕಿದೆ. ಇದರಿಂದ ಸಿಟ್ಟಿಗೆದ್ದ ಮಹಿಳೆಯ ಮ್ಯಾಕ್ ಡೋನಾಲ್ಡ್ ವಿರುದ್ಧ ದೂರು ದಾಖಲಿಸಿದ್ದಾಳೆ.

ಫೇಸ್‍ಬುಕ್‍ನಲ್ಲಿ ಮಾಹಿತಿ: ಮೊದಲಿಗೆ ಸೋಫಿಯಾ ಬರ್ಗರ್‍ನಲ್ಲಿ ಇರುವುದು ಜಿರಳೆ ಎಂದು ಗೊತ್ತಾಗದೆ ಅದನ್ನು ತಿನ್ನಲು ಹೊರಟಿದ್ದಾಳೆ. ನಂತರ ಆಕೆ ತಿನ್ನುವಾಗ ವಿಚಿತ್ರವಾಗಿ ಅನುಭವವಾಗಿದೆ. ನಂತರ ಬಾಯಿಂದ ಹೊರತೆಗೆದು ನೋಡಿದಾಗ ಬರ್ಗರ್‍ನಲ್ಲಿ ಜಿರಳೆ ಇರುವುದು ಗೊತ್ತಾಗಿದೆ. ಆದರೆ ಈ ಬಗ್ಗೆ ಸೋಫಿಯಾ ರೆಸ್ಟೋರೆಂಟ್‍ಗೆ ಮಾಹಿತಿ ನೀಡಿಲ್ಲ, ಬದಲಾಗಿ ಜಿರಳೆಯ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಫೋಸ್ಟ್‍ಮಾಡಿ ಫಾಸ್ಟ್‍ಫುಡ್ ಪ್ರಿಯರಿಗೆ ಜಾಗೃತಿ ಮೂಡಿಸಿದ್ದಾಳೆ.

ಈ ಬಗ್ಗೆ ಫೇಸ್‍ಬುಕ್‍ನಲ್ಲಿ ಸುದ್ದಿಹರಡುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಬ್ಲೆನ್‍ಹೀಮ್ ನಗರದ ಮ್ಯಾಕ್ ಡೋನಾಲ್ಡ್‍ನ ಸಿಬ್ಬಂದಿಗಳು ಸೋಫಿಯಾರನ್ನು ಸಂಪರ್ಕಿಸಲು ಪ್ರಯತ್ನಿಸಿದೆ. ಆದರೆ ಅಷ್ಟರಲ್ಲಾಗಲೇ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಹೋಗಿ ರೆಸ್ಟೋರೆಂಟ್ ವಿರುದ್ದ ಕಟು ಟೀಕೆ ವ್ಯಕ್ತವಾಗಿತ್ತು.

ಸೋಫಿಯಾ ದೂರಿನ ನಂತರ ಅರ್ಧ ಬರ್ಗರನ್ನು ತನಿಖೆಗಾಗಿ ಮ್ಯಾಕ್ ಡೋನಾಲ್ಡ್‍ಗೆ ಹಿಂದಿರುಗಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಜಿರಳೆ ಸಿಕ್ಕಿದ್ದ ಐಲ್ಯಾಂಡ್ ರೆಸ್ಟೋರೆಂಟ್‍ಗೆ ಆರೋಗ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Write A Comment