ಅಂತರಾಷ್ಟ್ರೀಯ

ಮತ್ತೆ 30 ಕ್ರೈಸ್ತರ ಶಿರಚ್ಛೇದ: ವಿಡಿಯೊ ಬಿಡುಗಡೆ ಮಾಡಿದ ‘ಐಎಸ್‌’

Pinterest LinkedIn Tumblr

08

ಟ್ರಿಪೊಲಿ: ಇಥಿಯೋಪಿಯಾದ 30 ಕ್ರೈಸ್ತರನ್ನು ಲಿಬಿಯಾದಲ್ಲಿ ಶಿರಚ್ಛೇದ ಮಾಡಿದ ವಿಡಿಯೊವನ್ನು ಇಸ್ಲಾಮಿಕ್‌ ಸ್ಟೇಟ್‌ ಉಗ್ರರು ಭಾನುವಾರ ಬಿಡುಗಡೆ ಮಾಡಿದ್ದಾರೆ.

29 ನಿಮಿಷ ಅವಧಿಯ ವಿಡಿಯೊದಲ್ಲಿ ಎರಡು ಗುಂಪುಗಳು ಹತ್ಯೆ ಮಾಡಿರುವುದು ಸ್ಪಷ್ಟವಾಗಿದ್ದು, ಶತ್ರುಗಳು ಇಥಿಯೋಪಿನ್‌  ಚರ್ಚ್‌ನ ಅನುಯಾಯಿಗಳು’ ಎಂಬ ಅಕ್ಷರಗಳನ್ನು  ಅದರಲ್ಲಿ ನಮೂದಿಸಿದ್ದಾರೆ.

ಮುಖಕ್ಕೆ ಕಪ್ಪು ಬಟ್ಟೆ ಸುತ್ತಿಕೊಂಡು ಕೈಯಲ್ಲಿ ಪಿಸ್ತೂಲ್‌ ಹಿಡಿದುಕೊಂಡಿರುವ ಉಗ್ರರು, ‘ಇಸ್ಲಾಂ ಧರ್ಮಕ್ಕೆ ಕ್ರೈಸ್ತರು ಮತಾಂತರಗೊಳ್ಳುವವರೆಗೂ ಹತ್ಯೆ ನಿಲ್ಲದು’ ಎಂಬ ಹೇಳಿಕೆ ನೀಡಿದ್ದು, ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

ಒಂದು ಗುಂಪು 12 ಜನರನ್ನು ಬೀಚ್‌ನಲ್ಲಿ ಕರೆದುಕೊಂಡು ಹೋಗುವ ದೃಶ್ಯ ಕಾಣಿಸಿದರೆ, ಇನ್ನೊಂದು ವಿಡಿಯೊದಲ್ಲಿ 16 ಜನರನ್ನು ಮರಳಿನಲ್ಲಿ ನಿಲ್ಲಿಸಿಕೊಂಡಿರುವ ದೃಶ್ಯ ಇದೆ.

ಆದರೆ, ಈ ಸಮಯದಲ್ಲಿ ಎಷ್ಟು ಮಂದಿಯನ್ನು ಹತ್ಯೆ ಇಲ್ಲವೇ ಶಿರಚ್ಛೇದ ಮಾಡಲಾಯಿತು ಎಂಬ ಅಂಶಗಳು ಈ ವಿಡಿಯೊದಲ್ಲಿ ಸಿಗುತ್ತಿಲ್ಲ.
‘ಈ ಸಿರಿಯಾ ಕ್ರೈಸ್ತರಿಗೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ಆಯ್ಕೆ ನೀಡಲಾಗಿತ್ತು. ಹಾಗೆ ಮಾಡದೇ ಇದ್ದರೆ ವಿಶೇಷ ತೆರಿಗೆ ವಿಧಿಸಲಾಗುತ್ತದೆ ಎಂದು ಹೇಳಲಾಗಿತ್ತು.

ಹೇಳಿದಂತೆ ಮಾಡಲಾಗಿದೆ ಎಂಬ ತುಣುಕು ಹತ್ಯೆಗಿಂತ ಮೊದಲು ತೋರಿಸಲಾಗಿದೆ. ಇಸ್ಲಾಮಿಕ್‌ ಸ್ಟೇಟ್‌ ಉಗ್ರರುಉಗ್ರರು ಫೆಬ್ರವರಿ ತಿಂಗಳಲ್ಲಿಯೂ ಲಿಬಿಯಾ ಕರಾವಳಿ ತೀರದಲ್ಲಿ   21 ಈಜಿಪ್ಟ್‌ ಕ್ರೈಸ್ತರನ್ನು ಹತ್ಯೆ ಮಾಡಿದ್ದ ವಿಡಿಯೊ ತುಣುಕನ್ನು ಬಿಡುಗಡೆ ಮಾಡಿದ್ದರು.

Write A Comment