ಅಂತರಾಷ್ಟ್ರೀಯ

ಪುರುಷರಿಗೆ ಲೈಂಗಿಕ ಸುಖ ನೀಡುವ ಆಟಿಕೆ; 156’ ಹೆಸರಿನಿಂದ ಕರೆಯುವ ಈ ಆಟಿಕೆಗೆ ಚೀನಾದಲ್ಲಿ ಭಾರಿ ಬೇಡಿಕೆ

Pinterest LinkedIn Tumblr

ಬೀಜಿಂಗ್‌ : ಪುರುಷರಿಗೆ ಲೈಂಗಿಕ ಸುಖವನ್ನು ನೀಡುವ ಹೆಣ್ಣಿನ ರೂಪದ ಕಾಮದ ಆಟಿಕೆಗಳ ಬಳಕೆಯಲ್ಲಿ ಚೀನಾ ಮುಂಚೂಣಿಯಲ್ಲಿದೆ.

‘156’ ಹೆಸರಿನಿಂದ ಕರೆಯುವ ಈ ಆಟಿಕೆಗಳಿಗೆ ಚೀನಾದಲ್ಲಿ ಭಾರಿ ಬೇಡಿಕೆ ಇದ್ದು,  ಒಂದು ಆಟಿಕೆಯ ಬೆಲೆ ₨ 1.5 ಲಕ್ಷ. ಬೀಜಿಂಗ್‌ನ ವಿಶೇಷ ಮಳಿಗೆಗಳಲ್ಲಿ ಇವು ಹೆಚ್ಚಾಗಿ ಮಾರಾಟವಾಗುತ್ತಿವೆ.

ಥರ್ಮೋಪ್ಲಾಸ್ಟಿಕ್‌, ರಬ್ಬರ್‌ ಇತ್ಯಾದಿಗಳಿಂದ ತಯಾರಿಸಲಾಗಿರುವ ಈ ಆಟಿಕೆಗಳು ಹೆಚ್ಚು ಮೃದುವಾಗಿದ್ದು, ತಲೆ ಮತ್ತು ಜನನಾಂಗಗಳನ್ನು ಸುಲಭವಾಗಿ ಬದಲಾವಣೆ ಮಾಡಬಹುದಾಗಿದೆ.

ಚೀನಾದ ಲಕ್ಷಾಂತರ ಮಂದಿ ಯುವಕರು ಸ್ವಂತ ಊರುಗಳನ್ನು ತೊರೆದು ಉದ್ಯೋಗಕ್ಕಾಗಿ ಬೀಜಿಂಗ್‌ ಸೇರಿದಂತೆ ಪ್ರಮುಖ ನಗರಗಳಲ್ಲಿ ವಾಸ ಮಾಡುತ್ತಿದ್ದಾರೆ.  ಅಂತಹವರು ಈ ರೀತಿಯ ಆಟಿಕೆಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ.

‘ಕೆಲಸದ ನಿಮಿತ್ತ ನಗರದಲ್ಲಿ ನೆಲೆಸಿದ್ದು, ವಾರಕ್ಕೊಮ್ಮೆ ಊರಿಗೆ ಹೋಗುತ್ತೇನೆ. ವಾರ ಪೂರ್ತಿ ಸಂಗಾತಿಯಿಂದ ದೂರ ಇರುವುದು ಅನಿವಾರ್ಯವಾಗಿರುವ ಕಾರಣ ಲೈಂಗಿಕ ಸುಖ ಪಡೆಯಲು ಸೆಕ್ಸ್‌ ಆಟಿಕೆಗಳನ್ನು ಬಳಸುತ್ತೇನೆ’ ಎಂದು 29 ವರ್ಷದ ಆಟೊಮೊಬೈಲ್‌ ವಿನ್ಯಾಸಕರೊಬ್ಬರು ತಿಳಿಸಿದ್ದಾರೆ.

‘ಚೀನಾದಲ್ಲಿ ಕಡಿಮೆ ಹಣ ನೀಡಿ ಹೆಣ್ಣಿನಿಂದ ಲೈಂಗಿಕ ಸುಖ ಪಡೆಯಬಹುದು. ಆದರೆ, ಹೆಂಡತಿಗೆ ಮೋಸ ಮಾಡಲು ಇಷ್ಟವಿಲ್ಲ.  ಹೀಗಾಗಿ ಹೆಣ್ಣಿನಿಂದ ಸಿಗುವ ಸುಖವನ್ನು ಆಟಿಕೆಗಳ ಮೂಲಕ ಪಡೆಯುತ್ತೇನೆ’ ಎಂದು ಅವರು ಹೇಳಿಕೊಂಡಿದ್ದಾರೆ.

‘ಲೈಂಗಿಕ ಸುಖ ಪಡೆಯಲು ಇದು ಪರ್ಯಾಯ ಮಾರ್ಗವಾಗಿದ್ದು, ಆಟಿಕೆಗಳನ್ನು ಬಳಸುವುದು ಬಿಟ್ಟರೆ ನನಗೆ ಬೇರೆ ದಾರಿ ಇಲ್ಲ. ಇವುಗಳ ಮೂಲಕವೇ ನಾನು ತೃಪ್ತಿಪಡುತ್ತಿದ್ದೇನೆ’ ಎಂದು ತಿಳಿಸಿದ್ದಾರೆ.

‘156‘ ಹೆಸರಿನ ಸೆಕ್ಸ್‌ ಆಟಿಕೆಗಳು ಚೀನಾದಲ್ಲಿ ಭಾರಿ ಜನಪ್ರಿಯವಾಗಿದ್ದು, ಅದರ ಪ್ರತಿಯೊಂದು ಭಾಗಗಳನ್ನು ಪ್ರತ್ಯೇಕಿಸಿ ಸ್ವಚ್ಛಗೊಳಿಸಬಹುದು. ಅಲ್ಲದೆ ಯಾವುದೇ ಭಾಗವನ್ನು ಬದಲಾಯಿಸಬಹುದು. ಸೆಕ್ಸ್‌ ಆಟಿಕೆಗಳು ನಿಜವಾದ ಹೆಣ್ಣಿಗಿಂತಲೂ ಸುಂದರ ಹಾಗೂ ಆಕರ್ಷಕವಾಗಿದ್ದು, ಹೆಚ್ಚಿನ ಗ್ರಾಹಕರು ಲೈಂಗಿಕ ಸುಖಕ್ಕಾಗಿ ಹೆಣ್ಣಿನ ಬದಲು ಇವುಗಳನ್ನು ಇಷ್ಟಪಡುತ್ತಾರೆ ಎನ್ನುತ್ತಾರೆ ವ್ಯಾಪಾರಸ್ಥ ಯೆಜಿಂಗ್‌. ‘156’ ಸೆಕ್ಸ್‌ ಆಟಿಕೆ ಮಾಡಲ್‌ ರೂಪದಲ್ಲಿದ್ದು, ಹೆಚ್ಚು ಮಂದಿ ಇದನ್ನು ಇಷ್ಟ ಪಡುತ್ತಾರೆ ಎಂದು ಅವರು ಹೇಳಿಕೊಂಡಿದ್ದಾರೆ.

ಕಮ್ಯೂನಿಸ್ಟ್‌ ರಾಷ್ಟ್ರವಾದ ಚೀನಾದಲ್ಲಿ ಆರಂಭದಲ್ಲಿ ಸೆಕ್ಸ್‌ ಆಟಿಕೆಗಳ ಮಾರಾಟಕ್ಕೆ ಮುಕ್ತ ಅವಕಾಶ ಇರಲಿಲ್ಲ.  ಆದರೆ, ಆರ್ಥಿಕ ಸುಧಾರಣೆಗಳ ಫಲವಾಗಿ ಈಗ ಮಳಿಗೆಗಳಲ್ಲಿ ಸೆಕ್ಸ್‌ ಆಟಿಕೆಗಳನ್ನು ಮುಕ್ತವಾಗಿ ಮಾರಾಟ ಮಾಡಬಹುದಾಗಿದೆ. ಸೆಕ್ಸ್‌ ಆಟಿಕೆಗಳ ಮಾರಾಟದಿಂದ ದೇಶದಲ್ಲಿ ಹೆಚ್ಚಿನ ವಹಿವಾಟು ನಡೆಯುತ್ತಿದೆ.  ಸರ್ಕಾರಕ್ಕೂ ಇದು ಆದಾಯದ ಮೂಲವಾಗಿದೆ.

Write A Comment