ಇದಕ್ಕೆ ತಾಂತ್ರಿಕತೆ ಮುಂದುವರೆದಿದೆ ಅಂತೀರೋ ಅಥವಾ ಹುಟ್ಟಲಿರುವ ಮಗುವಿನ ತಾಕತ್ತು ಅಂತೀರೋ ನಿಮಗೆ ಬಿಟ್ಟಿದ್ದು. ಏಕೆಂದರೆ ಗರ್ಭದಲ್ಲಿ ಇರುವಾಗಲೇ ಮಗುವೊಂದು ಚಪ್ಪಾಳೆ ಹೊಡೆಯುವ ಮೂಲಕ ಸುದ್ದಿಯಾಗಿದೆ.
ಹೌದು. ಬ್ರಿಟನ್ನಿನ ಜೆನ್ನಿಫರ್ ಎಂಬುವವರು ಸ್ಕ್ಯಾನಿಂಗ್ ಗೆ ತೆರಳಿದ್ದ ವೇಳೆ ಜೊತೆಯಲ್ಲಿದ್ದ ಪತಿ ಸ್ಕ್ಯಾನಿಂಗ್ ಪರದೆ ಮೇಲೆ ಕಾಣುತ್ತಿದ್ದ ಮಗುವಿನ ಚಟುವಟಿಕೆ ಚಿತ್ರೀಕರಿಸಿದ್ದು ಈ ಸಮಯದಲ್ಲಿ ಮಗು ಮೂರು ಬಾರಿ ಚಪ್ಪಾಳೆ ಹೊಡೆದು ಅಚ್ಚರಿಗೆ ಕಾರಣವಾಗಿದೆ.
ಗರ್ಭದಲ್ಲೇ ಇರುವ ಮಗುವೊಂದು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ವೇಳೆ ಚಪ್ಪಾಳೆ ಹೊಡೆಯುತ್ತಿರುವ ಈ ವಿಡಿಯೋ ಯೂಟ್ಯೂಬ್ ನಲ್ಲಿ ಪ್ರತ್ಯಕ್ಷವಾಗಿದ್ದು ಭಾರೀ ಸಂಚಲನ ಮೂಡಿಸಿದೆ.