ಸಲಿಂಗರತಿ ಅಪರಾಧವೇ ಎನ್ನುವುದು ಬಹಳ ವರ್ಷಗಳಿಂದಲೂ ಚರ್ಚಾಸ್ಪದ ವಿಷಯವಾಗಿದೆ. ವಿಶ್ವಸಂಸ್ಥೆಯ ಸಿಬ್ಬಂದಿ ಯಲ್ಲಿ ಇರುವ ಸಲಿಂಗಿ ಸಂಗಾತಿಗಳಿಗೆ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ಕಡಿತ ಮಾಡಬೇಕು ಎಂದು ರಷ್ಯಾ ಕಳೆದ ವಾರ ಮಂಡಿಸಿದ್ದ ಗೊತ್ತುವಳಿಯನ್ನು ಭಾರತ ಬೆಂಬಲಿಸಿದ್ದರೂ, 80–43 ಮತಗಳ ಅಂತರದಿಂದ ತಿರಸ್ಕೃತಗೊಂಡಿದೆ. ಈ ವಿಷಯದಲ್ಲಿ ಅಂತರರಾಷ್ಟ್ರೀಯ ರಾಜಕಾರಣವೂ ತಳಕು ಹಾಕಿಕೊಂಡಿದೆ. ರಷ್ಯಾವನ್ನು ಏಕಾಂಗಿಯನ್ನಾಗಿ ಮಾಡುವ ಉದ್ದೇಶವೂ ಅಮೆರಿಕೆಗೆ ಇರುವುದು ಇಲ್ಲಿ ಸ್ಪಷ್ಟ ಗೊಳ್ಳುತ್ತದೆ.
ಸಲಿಂಗಕಾಮಿ ಸ್ತ್ರೀ – ಪುರುಷರು, ದ್ವಿಲಿಂಗಿಗಳು (ಸ್ತ್ರೀ ಮತ್ತು ಪುರುಷ ಇಬ್ಬರಿಂದಲೂ ಲೈಂಗಿಕವಾಗಿ ಆಕರ್ಷಿತನಾಗುವ / ಆಕರ್ಷಿಕತಳಾಗುವ) ಮತ್ತು ಸ್ತ್ರೀ ಅಥವಾ ಪುರುಷರ ದೈಹಿಕ ಲಕ್ಷಣಗಳನ್ನು ಹೊಂದಿದ್ದರೂ ಅದಕ್ಕೆ ವಿರುದ್ಧವಾದ ಮಾನಸಿಕ ಲಕ್ಷಣ ಗಳನ್ನು ಹೊಂದಿದವರ (lesbian, gay, bisexual and transgender– LGBT) ವಿರುದ್ಧದ ತಾರತಮ್ಯವು ಅನೇಕ ದೇಶಗಳಲ್ಲಿ ಜಾರಿಯಲ್ಲಿದೆ.
ವ್ಯಕ್ತಿಗಳ ಲೈಂಗಿಕ ಒಲವು ಮತ್ತು ಲೈಂಗಿಕತೆಯ ಹೊರತಾಗಿಯೂ ಅವರಿ ಗೂ ಸಮಾನ ಅವಕಾಶ ಮತ್ತು ಸೌಲಭ್ಯ ಒದಗಿಸಲು 2008ರ ಡಿಸೆಂಬರ್ ನಲ್ಲಿ ಡೆನ್ಮಾರ್ಕ್ ಮತ್ತು ಫ್ರಾನ್ಸ್ ದೇಶಗಳ ಜಂಟಿ ಗೊತ್ತುವಳಿಯೊಂದನ್ನು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಡಿಸ ಲಾಗಿತ್ತು.
ಸಲಿಂಗಿಗಳ ವಿರುದ್ಧದ ದ್ವೇಷದ ಅಪರಾಧ, ಸಲಿಂಗಕಾಮವನ್ನು ಅಪರಾಧ ಎಂದು ಪರಿಗಣಿಸುವ ಮತ್ತು ಸಲಿಂಗಿಗಳ ವಿರುದ್ಧ ತಾರತಮ್ಯ ಎಸಗುವುದೂ ಸೇರಿದಂತೆ ವಿವಿಧ ಬಗೆಯ ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ವಿಶ್ವಸಂಸ್ಥೆಯ ಅನೇಕ ದೇಶಗಳು ದನಿ ಎತ್ತಿವೆ.
ಸಲಿಂಗ ಸಂಗಾತಿಗಳಿಗೆ ಸಮಾನ ಸೌಲಭ್ಯ ಕಲ್ಪಿಸುವ ಬಗ್ಗೆ ವಿಶ್ವಸಂಸ್ಥೆಯು 2014ರ ಜುಲೈ ತಿಂಗಳಿನಲ್ಲಿ ಗೊತ್ತುವಳಿ ಅಂಗೀಕರಿಸಿತ್ತು. ವಿಶ್ವಸಂಸ್ಥೆಯ ಸಲಿಂಗಿ ಉದ್ಯೋಗಿಗಳು ಪರಸ್ಪರ ಮದುವೆಯಾದರೆ ಅವರಿಗೆ ಇತರ ವಿವಾಹಿತರಿಗೆ ದೊರೆಯುವ ಸೌಲಭ್ಯಗಳನ್ನೆಲ್ಲ ಒದಗಿಸುವ ನಿರ್ಧಾರ ಇದಾಗಿದೆ.
ಅಮೆರಿಕ ವಿರೋಧ: ವಿಶ್ವಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವ ಸಲಿಂಗ ಜೋಡಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಕಡಿತಗೊಳಿಸಬೇಕೆಂದು ಒತ್ತಾಯಿಸುವ ರಷ್ಯಾದ ಗೊತ್ತುವಳಿ ಪರವಾಗಿ ಮತ ಚಲಾಯಿಸಿದ ಭಾರತದ ಧೋರಣೆ ಯನ್ನು ಅಮೆರಿಕ ಟೀಕಿಸಿದೆ.
ಭಾರತದಲ್ಲಿ ಅಪರಾಧ: ಸಲಿಂಗಿಗಳು ಪರಸ್ಪರ ದೈಹಿಕ ಸಂಬಂಧ ಹೊಂದುವುದು ಮತ್ತು ಮದುವೆಯಾಗುವುದಕ್ಕೆ ಭಾರತದಲ್ಲಿ ನಿಷೇಧ ಇದೆ. ವಿಶ್ವಸಂಸ್ಥೆಯು ಅಂಗೀಕರಿ ಸಿ ರುವ ಗೊತ್ತುವಳಿ ಅನ್ವಯ, ಸಲಿಂಗಿಗಳು ಯಾವುದೇ ದೇಶದ ರಾಷ್ಟ್ರೀಯತೆ ಹೊಂದಿರಲಿ, ಅವರು ಸಲಿಂಗಕಾಮ ಕಾನೂನುಬದ್ಧ ಮಾನ್ಯತೆ ಇರುವ ದೇಶಗಳಲ್ಲಿ ಮದುವೆಯಾಗಿದ್ದರೆ ವಿಶ್ವಸಂಸ್ಥೆಯು ಅಂತಹ ಮದುವೆಗೆ ಮಾನ್ಯತೆ ನೀಡುತ್ತದೆ. ವಿಶ್ವ ಸಂಸ್ಥೆಯು ವಿಶ್ವದಾ ದ್ಯಂತ 40 ಸಾವಿರ ಸಿಬ್ಬಂದಿ ಹೊಂದಿದೆ.
ಈ ಹಿಂದೆ ವಿಶ್ವಸಂಸ್ಥೆಯ ಸಿಬ್ಬಂದಿ ಯ ವೈವಾಹಿಕ ಸ್ಥಾನಮಾನ ವನ್ನು ವ್ಯಕ್ತಿಯ ರಾಷ್ಟ್ರೀಯತೆ ಆಧರಿಸಿ ತೀರ್ಮಾನಿಸಲಾಗುತ್ತಿತ್ತು.
ಭಾರತದ ನಿಲುವು: ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಅವರ ಮೂಲ ದೇಶದ ನಿಯಮಗಳು ಅಥವಾ ವಿಶ್ವಸಂಸ್ಥೆಯ ನಿಯಮಗಳು ಅನ್ವಯಿ ಸುವ ವಿಷಯವು ತುಂಬ ಸಂಕೀರ್ಣ ವಾಗಿದೆ ಎಂದು ವಿದೇಶಾಂಗ ವ್ಯವಹಾರ ಗಳ ವಕ್ತಾರರು ಪ್ರತಿಕ್ರಿಯಿಸಿದ್ದಾರೆ. 2014ರ ಸೆಪ್ಟೆಂಬರ್‌ನಲ್ಲಿ ಸಲಿಂಗಿಗಳ ವಿರುದ್ಧದ ತಾರತಮ್ಯ ಕೊನೆಗೊಳಿಸುವ ಗೊತ್ತುವಳಿ ಅಂಗೀಕಾರದ ಸಂದರ್ಭದಲ್ಲಿ ಭಾರತ ಗೈರುಹಾಜರಾಗಿತ್ತು.
ವಿಶ್ವದಾದ್ಯಂತ ಸಲಿಂಗಕಾಮಿಗಳ ವಿರುದ್ಧದ ತಾರತಮ್ಯ ಕೊನೆಗಾಣಿಸುವುದನ್ನು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು ಬಲವಾಗಿ ಪ್ರತಿಪಾದಿಸುತ್ತಾರೆ.