ವಾಷಿಂಗ್ಟನ್,ಮಾ.23-ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಯ ಸಂಪರ್ಕದಲ್ಲಿರುವ ಉಗ್ರರ ಸಂಘಟನೆಯೊಂದು 100 ಮಂದಿ ಪ್ರಮುಖರ ಹೆಸರು, ಭಾವಚಿತ್ರಗಳನ್ನೊಳಗೊಂಡ ಹಿಟ್‌ಲಿಸ್ಟ್ ಬಿಡುಗಡೆ ಮಾಡಿರುವ ಬೆನ್ನಲ್ಲೇ ಅಮೆರಿಕ ಸೇನಾಪಡೆ ದೇಶಾದ್ಯಂತ ಕಟ್ಟೆಚ್ಚರ ವಹಿಸಿ ಪ್ರತಿಯೊಬ್ಬರ, ಪ್ರತಿ ಕ್ಷಣದ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಐಎಸ್‌ಐಎಸ್(ಖಲೀಪೇಟ್) ಸಂಘಟನೆಯ ಅಧೀನದಲ್ಲಿರುವ ಭಯೋತ್ಪಾದಕರ ಗುಂಪು, ಸ್ವತಃ ತಾನು ಐಎಸ್‌ಐಎಸ್‌ನ ಅಂಗಸಂಸ್ಥೆ ಎಂದು ಹೇಳಿಕೊಂಡಿದ್ದು , ಇಮೇಲ್ ಮೂಲಕ್ ತನ್ನ ಹಿಟ್ ಲಿಸ್ಟ್ ಬಿಗುಡೆ ಮಾಡಿದೆ.
ನಾವು 100 ಮಂದಿಯ ಹೆಸರುಗಳು, ವಿಳಾಸಗಳನ್ನು ಬಿಡುಗಡೆ ಮಾಡುತ್ತಿದ್ದೇನೆ. ಇದನ್ನು ಆಧರಿಸಿ ಅಮೆರಿಕದಲ್ಲಿರುವ ನಮ್ಮ ಸೋದರರು ನಿಮ್ಮೊಂದಿಗೆ ವ್ಯವಹರಿಸಲಿದ್ದಾರೆ ಎಂದು ಈ ಉಗ್ರರ ತಂಡ ಎಚ್ಚರಿಕೆ ನೀಡಿದೆ ಎಂದು ಬ್ಲೇಸ್ ಪತ್ರಿಕೆ ವರದಿ ಮಾಡಿದೆ.
ಅವರನ್ನು ಅವರದೇ ನೆಲದಲ್ಲಿ ಕೊಲ್ಲಿ . ಅವರದೇ ಮನೆಗಳಲ್ಲಿ ಅವರ ಶಿರಚ್ಛೇದ ಮಾಡಿ, ಬೀದಿಗಳಲ್ಲಿ ಅವರು ಓಡಾಡುತ್ತಿರುವಾಗ ಚಾಕುವಿನಿಂದ ಇರಿಯಿರಿ, ಅವರೆಲ್ಲ ತಾವು ಸುರಕ್ಷಿತ ಎಂದು ತಿಳಿದಿದ್ದಾರೆ ಎಂಬುದು ಉಗ್ರರ ಹೇಳಿಕೆಯ ಸಾರಾಂಶ. ಪೆಂಟಗನ್ ಈ ಬಗ್ಗೆ ತೀವ್ರ ತನಿಖೆ ಕೈಗೊಂಡಿದೆ. ಸೇನಾ ಪಡೆಯವರು ಸವಾಲು ಎದುರಿಸಲು ಸಜ್ಜಾಗಿದ್ದಾರೆ.