ಮದುವೆಯಾದ ಮೇಲೆ ಬೇರೊಬ್ಬರನ್ನು ಮೋಹಿಸಿ ಗಂಡನಿಂದ ವಿಚ್ಚೇದನ ಪಡೆಯುವುದು ಹೊಸತೇನಲ್ಲ. ಆದರೆ ಇಲ್ಲೊಬ್ಬ ಮಹಿಳೆ ಗಂಡನ ಒಪ್ಪಿಗೆಯನ್ನು ಪಡೆದು ಒಂದು ವರ್ಷಗಳ ಕಾಲ 12 ಮಂದಿ ಪುರುಷರೊಂದಿಗೆ ‘ಸಂಸಾರ’ ನಡೆಸಿ ಸುದ್ದಿಯಾಗಿದ್ದಾಳೆ.
ಹೌದು. ಅಮೆರಿಕದ ರಾಬಿನ್ ರಿನಾಲ್ಡಿ ಎಂಬ ಮಧ್ಯ ವಯಸ್ಕ ಮಹಿಳೆಗೆ ಗಂಡನ ಜತೆಗಿನ 15 ವರ್ಷಗಳ ದಾಂಪತ್ಯ ಬೇಜಾರೆನಿಸಿದ್ದು ಜೀವನದಲ್ಲಿ ಸ್ವಲ್ಪ ಬದಲಾವಣೆ ಇರಲಿ ಎಂದು ತನ್ನ ಗಂಡನ ಒಪ್ಪಿಗೆಯನ್ನು ಪಡೆದು ಒಂದು ವರ್ಷಗಳ ಅವಧಿಯಲ್ಲಿ 12 ಪುರುಷರ ಜೊತೆ ಹಾಸಿಗೆ ಹಂಚಿಕೊಂಡಿದ್ದಾಳೆ. ಈ ಸಮಯದಲ್ಲಿ ತನ್ನ ಗಂಡನಿಂದ ದೂರವಾಗಿದ್ದ ಆಕೆ ತನ್ನ ಈ ಒಂದು ವರ್ಷದ ‘ಅನುಭವ’ ದ ನಡೆಗೆ ‘ದಿ ವೈಲ್ಡ್ ಓಟ್ಸ್ ಪ್ರಾಜೆಕ್ಟ್’ ಎಂಬ ಹೆಸರನ್ನೂ ಇಟ್ಟಿದ್ದಾಳಂತೆ.
ವಿಶೇಷವೆಂದರೆ ಈಕೆಯ ಜೊತೆ ಮಲಗಿದ್ದ 12 ಮಂದಿಯಲ್ಲಿ ಒಬ್ಬ ಪುರುಷ ಈಕೆಯ ಪ್ರೇಮಕ್ಕೆ ಒಳಗಾಗಿದ್ದನಂತೆ. ಅವನಿಂದ ತಪ್ಪಿಸಿಕೊಂಡು ಬಂದ ಮಹಿಳೆ ಇದೀಗ ಮತ್ತೆ ತನ್ನ ಗಂಡನ ಗೂಡು ಸೇರಿದ್ದಾಳೆ. ಈ ಮಹಿಳೆಯ ಸ್ವಭಾವಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ ಆ ಪತಿ ಮಹಾಶಯನ ತಾಳ್ಮೆಗೆ ಊರಿಗೆ ಊರೇ ಭೇಷ್ ಎಂದಿದೆಯಂತೆ.