ನವದೆಹಲಿ: ಭಟ್ಕಳ ಮೂಲದ ಮತ್ತೊಬ್ಬ ಇಸಿಸ್ ಉಗ್ರ ಹತ್ಯೆಗೀಡಾಗಿದ್ದಾನೆ! ಮಾರ್ಚ್ 6ರಂದು ಸಿರಿಯಾ ಮತ್ತು ಟರ್ಕಿಯ ಗಡಿಭಾಗವಾದ ಕೊಬಾನ್ ನಲ್ಲಿ ಹೋರಾಡುವಾಗ ಸುಲ್ತಾನ್ ಅಬ್ದುಲ್ ಖಾದಿರ್ ಆರ್ಮರ್ ಸಾವನ್ನಪ್ಪಿದ್ದಾನೆ ಎಂದು ಅನ್ಸರ್-ಅಲ್ -ತೌಹಿದ್ ಸಂಘಟನೆಯು ಪ್ರಕಟಿಸಿದೆ.
ಕುರ್ದೀಶ್ ಹೋರಾಟಗಾರರು ಈತನನ್ನು ಹೊಡೆದುರುಳಿಸಿದ್ದಾರೆ. ಅರ್ಮರ್ ಇಂಡಿಯನ್ ಮುಜಾಹಿದ್ದೀನ್ ನಲ್ಲಿದ್ದಾಗ ಭಾರತದಲ್ಲಿ ನಡೆದ ಸರಣಿ ಸ್ಫೋಟಗಳ ರೂವಾರಿಯಾಗಿದ್ದ ಎಂದು ಭಾರತೀಯ ಗುಪ್ತಚರ ಇಲಾಖೆ ಖಚಿತ ಪಡಿಸಿದೆ.
ಈತನಿಗೆ ಲಷ್ಕರ್ ಮತ್ತು ಐಎಸ್‍ಐ ತರಬೇತಿ ನೀಡಿತ್ತು.