ಅಂತರಾಷ್ಟ್ರೀಯ

ಲೈಂಗಿಕ ಕ್ರಿಯೆ ಸುಖದಾನಂದ, ಕೆಲವರಿಗೆ ನೋವು: ಸ್ಖಲನೋತ್ತರ ಸಮಸ್ಯೆ

Pinterest LinkedIn Tumblr

bhec14Maduve2_0

ಬಹುತೇಕ ಜನರಿಗೆ ಲೈಂಗಿಕ ಕ್ರಿಯೆ ಸುಖದಾನಂದ ನೀಡುತ್ತದೆ. ಆದರೆ ಕೆಲವರಿಗೆ ಮಾತ್ರ ನೋವು ಹಾಗೂ ತಲೆನೋವು ತಂದು ಕೊಡುತ್ತದೆ. ಇವೆಲ್ಲವನ್ನೂ ಸ್ಖಲನೋತ್ತರ ಸಮಸ್ಯೆಗಳೆಂದು ಗುರುತಿಸಲಾಗುತ್ತದೆ.

ಸ್ಖಲನೋತ್ತರ ಸಮಸ್ಯೆ
(Post orgasmic illness syndrome (POIS)
ಇದು ಅತಿ ವಿರಳ ಸಮಸ್ಯೆಯಾಗಿದೆ. ಮಿಲನದ ನಂತರ ಅಥವಾ ಹಸ್ತಮೈಥುನದ ನಂತರ ಸ್ಖಲಿಸುವುದರೊಂದಿಗೆ ಈ ಸಮಸ್ಯೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಸಮಸ್ಯೆಯೆಂದು ತೀರ ಈಚೆಗೆ ಗುರುತಿಸಲಾಗಿದೆ. 2002ರಲ್ಲಿ ಇಂಥ ಪ್ರಕರಣಗಳನ್ನು ಸ್ಖಲನೋತ್ತರ ಸಮಸ್ಯೆಯೆಂದು ವ್ಯಾಖ್ಯಾನಿಸಲಾಯಿತು.

ಈ ಸಮಸ್ಯೆಯ ಲಕ್ಷಣಗಳು: ಸ್ಖಲನದ ನಂತರ ಸಿಡಿಮಿಡಿಗೊಳ್ಳುವುದು, ಅಸ್ವಸ್ಥರೆನಿಸುವುದು, ಉಸಿರಾಟದ ತೊಂದರೆ, ಶೀತವಾದಂತೆ ಎನಿಸುವುದು, ಖಿನ್ನತೆ, ಸಂವಹನ ಮಾಡುವಲ್ಲಿ ಸಮಸ್ಯೆ, ಓದು, ಶಬ್ದಗಳನ್ನು ಮರೆಯುವುದು, ಏಕಾಗ್ರತೆಯ ಕೊರತೆ, ತಲೆ ನೋವು, ಸ್ವಲ್ಪಮಟ್ಟಿನ ಜ್ವರದ ಲಕ್ಷಣಗಳು, ಮೈ ಬಿಸಿಯಾಗು ವುದು, ಮೂಗು ಕಟ್ಟಿಕೊಳ್ಳುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಮೊದಲ ಸಲ ಮಿಲನದಲ್ಲಿ ಪಾಲ್ಗೊಂಡಾಗ ಉಸಿರಾಟದ ತೊಂದರೆಯಾಗಿ ಆಸ್ತಮಾದಂಥ ಸಮಸ್ಯೆಯೂ ಕಾಣಿಸಿಕೊಳ್ಳಬಹುದು.

ಕಣ್ಣ ಹಿಂದೆ ತೀವ್ರತರನಾದ ಚುಚ್ಚುವಂಥ ನೋವು ಸಹ ಈ ಸಮಸ್ಯೆಯ ಲಕ್ಷಣವಾಗಿದೆ. ಕೆಲವೊಮ್ಮೆ ಸ್ಖಲಿಸಿದ ಕೂಡಲೇ ತಲೆ ಸಿಡಿದ ಅನುಭವವಾಗಬಹುದು. ಇಲ್ಲವೇ ಸ್ಖಲನದ ನಂತರ ತಲೆ ನೋವು ಆರಂಭವಾಗಿ ಸಿಡಿತದೊಂದಿಗೆ ಕೊನೆಗೊಳ್ಳಬಹುದು. ಕೆಲವೊಮ್ಮೆ ಸಂಭೋಗದ ನಂತರ ಕೆಲವು ಸಮಯದವರೆಗೂ ಈ ತಲೆ ನೋವು ಕಾಡುತ್ತದೆ. ಕೆಲವರಿಗೆ ಹಲವು ದಿನಗಳವರೆಗೂ ಕಾಡಬಹುದು.

ಇಂಥ ಲಕ್ಷಣಗಳು ಸಾಮಾನ್ಯವಾಗಿ ಸಂಭೋಗದ ನಂತರ ಅರ್ಧಗಂಟೆಯ ಒಳಗೆ ಕಂಡುಬರುತ್ತವೆ. ಕೆಲವು ದಿನಗಳವರೆಗೂ ಕಾಡುತ್ತವೆ. ಈ ಸಮಸ್ಯೆ ಇದ್ದವರು ಕೆಲದಿನಗಳವರೆಗೆ ಸಂಭೋಗವನ್ನೇ ಮುಂದೂಡುತ್ತಾರೆ. ಲೈಂಗಿಕ ಕ್ರಿಯೆಯಲ್ಲಿ Mತೊಡಗಿಸಿಕೊಳ್ಳಲು ಹಿಂಜರಿಯುತ್ತಾರೆ.

ವೈದ್ಯಕೀಯ ಕ್ಷೇತ್ರದಲ್ಲಿ ಈ ಸ್ಥಿತಿಯ ನಿಖರವಾದ ಸಮಸ್ಯೆಯನ್ನು ತಿಳಿಯದ ಕಾರಣ ವಂಚಕ ತೊಂದರೆಯೆಂದೇ ಕರೆಯುತ್ತಿದ್ದರು. ಆದರೆ ಸಂಶೋಧನೆಗಳು ಇಂಥ ವ್ಯಕ್ತಿಗಳಿಗೆ ತಮ್ಮದೇ ವೀರ್ಯ ಅಥವಾ ವೀರ್ಯಾಣುವಿನಿಂದ ಅಲರ್ಜಿ ಇರುತ್ತದೆ ಎಂದು ಸಾಬೀತು ಪಡಿಸಿವೆ. ಇದಲ್ಲದೆ ಈ ಸಮಸ್ಯೆಯಿಂದ ಬಳಲುವ ಪುರುಷರಲ್ಲಿ ಪ್ರೊಜೆಸ್ಟರಾನ್‌ ಉತ್ಪತ್ತಿಯ ಸಮಸ್ಯೆ ಇರುವುದೂ ಕಂಡು ಬಂದಿದೆ.

ಈ ಹಾರ್ಮೋನಿನ ಕೊರತೆಯುಂಟಾದರೆ ನರವ್ಯೂಹದ ಕಾರ್ಯವೈಖರಿಯ ಮೇಲೆ ಪರಿಣಾಮ ಉಂಟಾಗುತ್ತದೆ. ಮೆದುಳಿನ ಕಾರ್ಯ ವೈಖರಿಯಲ್ಲಿಯೂ ಅಸಮತೋಲನ ಉಂಟಾಗಿ ಇಂಥ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ಸ್ಖಲನದ ನಂತರ ಕಾಣಿಸಿಕೊಳ್ಳುವ ತಲೆನೋವು 20ರ ಅಂಚಿನಲ್ಲಿ ಸಾಮಾನ್ಯವಾಗಿರುತ್ತವೆ. ಅಥವಾ 35ರಿಂದ 44ರ ವಯೋಮಾನದವರಿಗೂ ಈ ತಲೆನೋವು ಕಾಡುತ್ತದೆ. ಈ ಬಗೆಯ ತಲೆನೋವಿಗೆ ನಿಖರವಾದ ಕಾರಣಗಳೇನೂ ಗೊತ್ತಿಲ್ಲ ಎನ್ನುವುದು ಗಮನಾರ್ಹ.

ಪುರುಷರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಈ ನೋವು ಮಹಿಳೆಯರನ್ನು ವಿರಳವಾಗಿ ಕಾಡುತ್ತದೆ. 3:1ರ ಅನುಪಾತದಲ್ಲಿ ಈ ಸಮಸ್ಯೆ ಕಂಡು ಬರುತ್ತದೆ. ಒಟ್ಟು ಜನಸಂಖ್ಯೆಯ ಶೇ 1ರಷ್ಟು ಜನರಿಗೆ ಈ ಬಗೆಯ ತಲೆನೋವು ಕಾಡುತ್ತದೆ ಎಂಬುದೊಂದು ಅಂದಾಜು.

ಚಿಕಿತ್ಸೆ: ಕೆಲದಿನಗಳಿಂದ ಕೆಲವಾರಗಳವರೆಗೂ ಲೈಂಗಿಕ ಕ್ರಿಯೆ ಅಥವಾ ಹಸ್ತಮೈಥುನದಲ್ಲಿ ತೊಡಗಿಸಿಕೊಳ್ಳಬಾರದು. ತಲೆನೋವು ತಡೆಯಲು ನರವ್ಯವಸ್ಥೆಯಲ್ಲಿ ಅಸಮತೋಲನ ತೊಡೆದುಹಾಕಲು ಔಷಧಿಗಳ ಸೇವನೆ

*ಕೆಲವರಲ್ಲಿ ತೂಕ ಕಡಿಮೆ ಮಾಡಿಕೊಂಡರೂ ಸಹಾಯಕವಾಗುತ್ತದೆ.
*ಅಲರ್ಜಿ ನಿಯಂತ್ರಣಕ್ಕಾಗಿ ಔಷಧಿ ಸೇವನೆ
*ವೀರ್ಯ ಅಲರ್ಜಿಗಾಗಿ ಪ್ರತ್ಯೇಕ ತಂತ್ರಗಳ ಅಳವಡಿಕೆ,
*ಲೈಂಗಿಕ ಕ್ರಿಯೆಗೆ ಪೂರ್ವದಲ್ಲಿ ಔಷಧಿ ಸೇವನೆ

ಸುರತೋತ್ತರ ವಿಷಣ್ಣ ಭಾವ
(Post-coital tristesse (PCT ಪಿಸಿಟಿ): ಇದೊಂದು ಲ್ಯಾಟಿನ್‌ ಭಾಷೆಯ ಶಬ್ದವಾಗಿದೆ. ಬಹುತೇಕ ಮಹಿಳೆಯರಲ್ಲಿ ಸಂಭೋಗ ಕ್ರಿಯೆಯ ನಂತರ ಒಂದು ಬಗೆಯ ವಿಷಣ್ಣ ಭಾವ ಆವರಿಸಿಕೊಳ್ಳುತ್ತದೆ. ಈ ಪಿಸಿಟಿ ಸಮಸ್ಯೆ ಇರುವ ಮಹಿಳೆಯರು ಮಿಲನದ ನಂತರ ಖಿನ್ನರಾಗುವ ಸಾಧ್ಯತೆಗಳೇ ಹೆಚ್ಚು.

ಸುರತದ ನಂತರ ಐದು ನಿಮಿಷಗಳಿಂದ ಎರಡು ಗಂಟೆಯ ಅವಧಿಯಲ್ಲಿ ಈ ಭಾವ ಅವರನ್ನು ಕಾಡಬಹುದು. ಪಿಸಿಟಿಯಲ್ಲಿ ಸ್ಖಲಿಸುವ ಅಗತ್ಯವೇ ಇರುವುದಿಲ್ಲ. ಸಂಭೋಗದ ನಂತರ ಕಾಣಿಸಿಕೊಳ್ಳುವ ವಿಚಿತ್ರ ಲಕ್ಷಣಗಳಿವು. ಇದು ಭೌತಿಕ ಬವಣೆಗಳಿಗಿಂತಲೂ ಭಾವನಾತ್ಮಕ ತೊಂದರೆಗಳನ್ನೇ ಹೆಚ್ಚು ಪ್ರತಿಬಿಂಬಿಸುತ್ತವೆ.

ವ್ಯಾಸಕ್ಟಮಿ ನಂತರದ ನೋವಿನ ಅನುಭವ: ವ್ಯಾಸಕ್ಟಮಿ ಮಾಡಿಸಿಕೊಂಡಿರುವ ಪುರುಷರಲ್ಲಿ ಅತಿ ವಿರಳವಾಗಿ ಈ ನೋವಿನ ಅನುಭವ ಕಾಡುತ್ತದೆ. ವ್ಯಾಸಕ್ಟಮಿಯಾದ ಕೂಡಲೇ ಅಥವಾ ಮೂರು ವರ್ಷಗಳ ನಂತರವೂ ಈ ನೋವಿನ ಅನುಭವ ಕಾಣಿಸಿಕೊಳ್ಳಬಹುದು. ವೃಷಣ ನಾಳ ಸುರಳಿಯ ಭಾಗದಲ್ಲಿ ದಟ್ಟಣೆ ಹೆಚ್ಚುವುದರಿಂದಲೂ ಈ ನೋವು ಕಾಣಿಸಿಕೊಳ್ಳಬಹುದು. ವ್ಯಾಸಕ್ಟಮಿ ಮಾಡಿಸಿಕೊಂಡ ಮೂವರಲ್ಲಿ ಒಬ್ಬರಿಗೆ ಮಾತ್ರ ಈ ನೋವು ಕಾಡುವ ಸಾಧ್ಯತೆ ಇರುತ್ತದೆ.

ನೋವಿನ ಲಕ್ಷಣಗಳು
*ಜನನಾಂಗದ ಬಳಿ ಸತತ ನೋವು.
*ದೈಹಿಕವಾಗಿ ತೊಡೆ ಸಂದಿಗಳಲ್ಲಿ ನೋವು,
*ಉದ್ರೇಕ ಉಂಟಾಗುವಾಗ ಅಥವಾ ಸಂಭೋಗ ಕ್ರಿಯೆಯಲ್ಲಿ ತೊಡಗಿಸಿಕೊಂಡಾಗ ನೋವಿನ ಅನುಭವ

ಸ್ಖಲನದ ನಂತರ ನೋವು, ನೋವಿನಿಂದಾಗಿ ನಿಮಿರುವಿಕೆಯ ಸಮಸ್ಯೆ ಕೆಲವೊಮ್ಮೆ ವೀರ್ಯವು ಹಿಮ್ಮುಖವಾಗಿ ಚಲಿಸುವುದರಿಂದ ನೋವು ಉಂಟಾಗುವ ಸಾಧ್ಯತೆಗಳಿರುತ್ತವೆ. ಕೆಲವೊಮ್ಮೆ ಸೋಂಕು ಸಹ ಉಂಟಾಗುತ್ತದೆ. ಸೋಂಕಿದ್ದಲ್ಲಿ ನಿರಂತರ ನೋವಿನಿಂದ ಕಾಡುತ್ತದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಾಗ, ಉದ್ರೇಕಗೊಂಡಾಗ ಅಥವಾ ಸ್ಖಲಿಸಿದಾಗಲೂ ಈ ನೋವು ಕಾಡುತ್ತದೆ.

ಚಿಕಿತ್ಸೆಯು ನೋವಿನ ತೀವ್ರತೆಯನ್ನು ಅವಲಂಬಿಸಿರುತ್ತದೆ. ಕೆಲವೊಮ್ಮೆ ಕೇವಲ ಔಷಧಿ ಸೇವನೆಯಿಂದ ಸರಿಹೋಗಬಹುದು. ಇನ್ನೂ ಕೆಲವರಿಗೆ ಹಿಮ್ಮುಖ ಚಲನೆಯಾಗದಂತೆ ಶಸ್ತ್ರಚಿಕಿತ್ಸೆ ಮಾಡಬೇಕಾಗುವುದು. ನೋವಿನಿಂದ ಮುಕ್ತಿ ಪಡೆಯಲು ತಮ್ಮ ವೈದ್ಯರೊಂದಿಗೆ ಸಮಾಲೋಚಿಸುವುದು ಅತ್ಯಗತ್ಯ. ಮಾಹಿತಿಗೆ: (99450 48833)

Write A Comment