ಅಂತರಾಷ್ಟ್ರೀಯ

ಮುಂಬೈ ದಾಳಿಯ ಉಗ್ರ -ಲಷ್ಕರ್-ಇ-ತೊಯಿಬಾ ಕಮಾಂಡರ್ ಝಕಿ ಉರ್ ರೆಹಮಾನ್ ಲಖ್ವಿಗೆ ಜಾಮೀನು

Pinterest LinkedIn Tumblr

Zaki-ur-Rehman Lakhvi

ಇಸ್ಲಾಮಾಬಾದ್: ಪೇಶಾವರದ ಸೈನಿಕ ಶಾಲೆಯ ಮುಗ್ಧ ಮಕ್ಕಳ ಮೇಲಿನ ದಾಳಿಯ ನಂತರವೂ ಎಚ್ಚೆತ್ತುಕೊಳ್ಳದ ಪಾಕಿಸ್ತಾನ, ಶುಕ್ರವಾರ ಮುಂಬೈ ದಾಳಿಯ ಉಗ್ರ ಹಾಗೂ ಲಷ್ಕರ್-ಇ-ತೊಯಿಬಾ ಕಮಾಂಡರ್ ಝಕಿ ಉರ್ ರೆಹಮಾನ್ ಲಖ್ವಿಗೆ ಜಾಮೀನು ನೀಡಿದೆ.

ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ಉಗ್ರ ನಿಗ್ರಹ ಕೋರ್ಟ್ ಇಂದು ಮುಂಬೈ ದಾಳಿಯ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದು, ಇದರಿಂದ ಉಗ್ರರ ವಿರುದ್ಧ ಹೋರಾಟದಲ್ಲಿ ಪಾಕ್ ಅನುಸರಿಸುತ್ತಿರುವ ದ್ವಿಮುಖ ನೀತಿ ಬಹಿರಂಗವಾಗಿದೆ.

ಲಖ್ವಿ ಸೇರಿದಂತೆ 2008ರಲ್ಲಿ ನಡೆದ ಮುಂಬೈ ದಾಳಿಯ ಏಳು ಆರೋಪಿಗಳು ಜಾಮೀನು ಕೋರಿ ನಿನ್ನೆ ಇಸ್ಲಾಮಾಬಾದ್‌ನ ಉಗ್ರ ನಿಗ್ರಹ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಇಂದು ಲಖ್ವಿಗೆ ಜಾಮೀನು ನೀಡಿದೆ.

ಡಾನ್ ವರದಿಯ ಪ್ರಕಾರ, ಲಖ್ವಿ ಪರ ವಕೀಲ ರಿಝ್ವಾನ್ ಅಬ್ಬಾಸಿ ಅವರ ಮನವಿ ಮೆರೆಗೆ ಉಗ್ರ ನಿಗ್ರಹ ಕೋರ್ಟ್ 5 ಲಕ್ಷ ರುಪಾಯಿ ಬಾಂಡ್ ಪಡೆದು ಜಾಮೀನು ಮಂಜೂರು ಮಾಡಿದೆ. ಮುಂಬೈ ದಾಳಿಯ ನಂತರ ಪಾಕಿಸ್ತಾನದ ಸರ್ಕಾರ ಲಖ್ವಿಯನ್ನು ಬಂಧಿಸಿತ್ತು. ಅಂದಿನಿಂದ ಇಲ್ಲಿಯವರೆಗೆ ಲಖ್ವಿ ಜೈಲಿನಲ್ಲೇ ಇದ್ದ.

Write A Comment