ಅಂತರಾಷ್ಟ್ರೀಯ

ಭಾರತದ ಬುಲ್ಲೆಟ್ ಪ್ರೂಫ್ ಕಾರನ್ನು ನಿರಾಕರಿಸಿದ ಪಾಕಿಸ್ತಾನ: ಸಾರ್ಕ್ ಶೃಂಗಸಭೆಗೆ ಆಗಮಿಸಲಿರುವ ಪಾಕಿಸ್ತಾನಿ ಪ್ರಧಾನಿಗೆ

Pinterest LinkedIn Tumblr

nawazsharif-pakistan_9-21-2

ಕಠ್ಮಾಂಡು: ಮುಂದಿನ ವಾರ ನೇಪಾಳದ ಕಠ್ಮಾಂಡುವಿನಲ್ಲಿ ನಡೆಯುವ ದಕ್ಷಿಣ ಏಷ್ಯಾ ಶೃಂಗಸಭೆಗೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಆಗಮಿಸುತ್ತಿದ್ದು, ಭದ್ರತೆಯ ದೃಷ್ಟಿಯಿಂದ ಭಾರತದ ಪರ ಅವರಿಗೆ ಬುಲ್ಲೆಟ್ ಪ್ರೂಫ್ ಕಾರ್‌ನ್ನು ಒದಗಿಸಲಾಗಿದ್ದು, ಅದನ್ನು ನವಾಜ್ ಷರೀಫ್ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಠ್ಮಾಂಡು ಶೃಂಗ ಸಭೆಗೆ ಭಾರತದ ಮೂಲಕ ತಲುಪಬೇಕಾಗಿದ್ದು, ಯಾವುದೇ ಅವಘಡಗಳು ಸಂಭವಿಸಿದಂತೆ ಮುಂಜಾಗ್ರತಾ ಕ್ರಮವಾಗಿ ಭಾರತ ಸರ್ಕಾರ ನವಾಜ್ ಷರೀಫ್‌ಗಾಗಿ ವಿಶೇಷ ಸೌಲಭ್ಯಗಳುಳ್ಳ ಬುಲ್ಲೆಟ್ ಪ್ರೂಫ್ ಕಾರನ್ನು ಒದಗಿಸಲು ನಿರ್ಧರಿಸಿತ್ತು. ಆದರೆ ಭಾರತದ ಬುಲ್ಲೆಟ್ ಪ್ರೂಫ್ ಕಾರನ್ನು ನವಾಜ್ ಷರೀಫ್ ತಿರಸ್ಕರಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ಖಾಗಾ ನಥ್ ಅಧಿಕರಿ, ದಕ್ಷಿಣ ಏಷ್ಯಾ ಶೃಂಗಸಭೆಗೆ ಭಾಗವಹಿಸುವುದಕ್ಕಾಗಿ, ಪಾಕಿಸ್ತಾನದಿಂದ ತಮ್ಮದೇ ವಿಶೇಷ ಕಾರಿನಲ್ಲಿ ನವಾಜ್ ಷರೀಫ್ ಪ್ರಯಾಣಿಸಲಿದ್ದಾರೆ. ಅಲ್ಲದೆ ಇತರೆ ಅಧಿಕಾರಿಗಳೂ ಸಹಾ ತಮ್ಮ ತಮ್ಮ ವಾಹನಗಳಲ್ಲಿ ತೆರಳಲಿದ್ದಾರೆ ಎಂದು ಸ್ಪಷ್ಪಪಡಿಸಿದ್ದಾರೆ.

ಅಮೆರಿಕಾ ಅಧ್ಯಕ್ಷರೇ ತಮ್ಮ ಸ್ವಂತ ವಾಹನದಲ್ಲಿ ಪ್ರಯಾಣಿಸುತ್ತಿರುವುದರಿಂದ, ಪಾಕಿಸ್ತಾನ ಪ್ರಧಾನಿಯೂ ತಮ್ಮದೇ ಕಾರಿನಲ್ಲಿ ಪ್ರಯಾಣಿಸಲಿದ್ದಾರೆ ಎಂದು ಖಾಗಾ ವಿವರಿಸಿದರು.

ಪಾಕಿಸ್ತಾನ ಮತ್ತು ಭಾರತದ ಗುಂಡಿನ ದಾಳಿ ನಡೆಯುವ ಪ್ರದೇಶವನ್ನು ಹೊರತುಪಡಿಸಿ, ಸುರಕ್ಷಿತ ಮಾರ್ಗದ ಮೂಲಕ ಕಠ್ಮಾಂಡುವಿಗೆ ತಲುಪುವುದಾಗಿ ಅವರು ತಿಳಿಸಿದ್ದಾರೆ.

ನವೆಂಬರ್ 26 ಮತ್ತು 27 ರಂದು ಕಠ್ಮಾಂಡವಿನಲ್ಲಿ ನಡೆಯಲಿರುವ ಸಾರ್ಕ್ ಶೃಂಗಸಭೆಗೆ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್, ಅಫ್ಘಾನಿಸ್ತಾನ ಹಾಗೂ ಮಾಲ್ಡೀವ್ಸ್ ದೇಶಗಳು ಭಾಗವಹಿಸಲಿವೆ.

Write A Comment