ಟೋಕಿಯೋ: ಪ್ರತಿ ಗಂಟೆಗೆ 500 ಕಿಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಇರುವ ಬುಲೆಟ್ ಟ್ರೈನ್ನ ಪರೀಕ್ಷಾರ್ಥ ಸಂಚಾರವನ್ನು ಭಾನುವಾರ ಜಪಾನ್ ನಲ್ಲಿ ನಡೆಸಲಾಗಿದೆ.
‘ಮಗ್ಲೆವ್ ಟ್ರೈನ್’ ಎಂದು ಕರೆಯಲಾಗುವ ಈ ರೈಲುಗಳು ಜಪಾನ್ನಲ್ಲಿ ಹಾಲಿ ಸಂಚರಿಸುವ ಬುಲೆಟ್ ಟ್ರೈನ್ಗಳಿಗಿಂತ ಹೆಚ್ಚಿನ ವೇಗನವನ್ನು ಹೊಂದಿವೆ. ರೈಲ್ವೆ ನಿಲ್ಧಾಣಗಳಲ್ಲಿ ಪ್ರಯಾಣಿಕರು ಟಿವಿಯಲ್ಲಿ ರೈಲಿನ ಪ್ರಯಾಣದ ಆರಂಭವನ್ನು ವೀಕ್ಷಿಸಿದರು. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಟ್ರೈನ್ ಮರೆಯಾಗಿತ್ತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಈ ರೈಲಿನ ವೈಶಿಷ್ಟ್ಯ ಏನು?
ಜಪಾನ್ನ ಪ್ರಮುಖ ನಗರಗಳ ನಡುವಿನ ಪ್ರಯಾಣದ ಅಂತರ 90 ನಿಮಿಷದಿಂದ 40 ನಿಮಿಷಗಳಿಗೆ ಇಳಿಕೆ
ಪ್ರತಿಯೊಂದರಲ್ಲೂ 16 ಬೋಗಿಗಳು. ಒಂದೊಂದರಲ್ಲೂ 1 ಸಾವಿರ ಮಂದಿ ಪ್ರಯಾಣಿಸಲು ಸಾಧ್ಯ
ಈ ರೈಲಿನ ಪ್ರಯೋಗಾರ್ಥ ಈ ಹಿಂದೆಯೇ ಸಂಚಾರ ನಡೆಸಲಾಗಿತ್ತು. ಇದೇ ಮೊದಲ ಬಾರಿಗೆ ಜಪಾನ್ನ ಯುನೊಹಾರದಿಂದ ಫ್ಯೂಫ್ಯುಕಿಗೆ(33 ಕಿಮೀ) ಪ್ರಯಾಣಿಕರಿಗಾಗಿ ಸಂಚಾರ
ಹಾಲಿ ವೇಗದ ರೈಲುಗಳ ಸಂಚಾರ ಸಾಮರ್ಥ್ಯ 320 ಕಿಮೀ(ಪ್ರತಿ ಗಂಟೆಗೆ). ಹೊಸ ರೈಲಿನ ವೇಗ 500 ಕಿಮೀ(ಪ್ರತಿ ಗಂಟೆಗೆ)
