ಅಂತರಾಷ್ಟ್ರೀಯ

ಐಸಿಸ್‌ನಿಂದ ಬ್ರಿಟಿಷ್ ಕಾರ್ಯಕರ್ತನ ಶಿರಚ್ಛೇದ

Pinterest LinkedIn Tumblr

pvec15sepVID IS

ವಾಷಿಂಗ್ಟನ್, ಸೆ.14: ಇಸ್ಲಾಮಿಕ್ ಸ್ಟೇಟ್(ಐಸಿಸ್) ಬಂಡುಕೋರರ ಗುಂಪು ಶನಿವಾರ ತಾನು ಬ್ರಿಟಿಷ್ ಕಾರ್ಯಕರ್ತ ಡೇವಿಡ್ ಹೈನ್ಸ್ ಎಂಬವರ ಶಿರಚ್ಛೇದಗೈದಿರುವುದಾಗಿ ಹೇಳಿಕೊಂಡಿದೆ.

ಐಸಿಸ್ ಗುಂಪು ನಡೆಸಿರುವ ಮೂರನೆಯ ಶಿರಚ್ಛೇದದ ಪ್ರಕರಣ ಇದಾಗಿದೆಯೆನ್ನಲಾಗಿದೆ. ಇರಾಕ್ ಮೇಲೆ ಅಮೆರಿಕ ನಡೆಸುತ್ತಿರುವ ವಾಯುದಾಳಿಗೆ ಪ್ರತೀಕಾರವಾಗಿ ಅಮೆರಿಕದ ಪತ್ರಕರ್ತ ಜೇಮ್ಸ್ ಫೋಲಿಯವರನ್ನು ಐಸಿಸ್ ಗುಂಪು ಮೊದಲಿಗೆ ಶಿರಚ್ಛೇದಗೊಳಿಸಿದ್ದು, ಬಳಿಕ ಅಮೆರಿಕದ ಇನ್ನೋರ್ವ ಪತ್ರಕರ್ತ ಸ್ಟೀವನ್ ಸಟ್ಲಾಫ್‌ರನ್ನು ಶಿರಚ್ಛೇದಗೊಳಿಸಿದ ಬಗ್ಗೆ ವರದಿಯಾಗಿತ್ತು.

ಡೇವಿಡ್ ಹೈನ್ಸ್‌ನ ಶಿರಚ್ಛೇದದ ವೀಡಿಯೊ ತುಣುಕುಗಳು ಐಸಿಸ್‌ನ ಖಾಸಗಿ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿದೆ. ಹೇನ್ಸ್‌ರನ್ನು ಮುಸುಕುಧಾರಿಯೊಬ್ಬ ಶಿರಚ್ಛೇದಗೊಳಿಸುವ ದೃಶ್ಯಗಳಿವೆ ಎಂದು ವರದಿಗಳು ತಿಳಿಸಿವೆ. ಎರಡು ನಿಮಿಷ ಹಾಗೂ 27 ಸೆಕೆಂಡುಗಳು ಅವಧಿಯ ಈ ವೀಡಿಯೊ ದೃಶ್ಯವು ‘‘ಅಮೆರಿಕದ ಮೈತ್ರಿ ರಾಷ್ಟ್ರಗಳಿಗೆ ಸಂದೇಶ’ ಎಂಬ ಶೀರ್ಷಿಕೆಯನ್ನು ಹೊಂದಿದೆ.

ಐಸಿಸ್ ವಿರುದ್ಧ ರಚಿಸಲಾಗಿರುವ ಅಮೆರಿಕದ ಪಡೆಗಳೊಂದಿಗೆ ಕೈಜೋಡಿಸಿರುವ ಬ್ರಿಟನ್‌ನ ಪ್ರಧಾನಿ ಡೇವಿಡ್ ಕ್ಯಾಮರೂನ್‌ರನ್ನು ಸಂದೇಶದಲ್ಲಿ ದೂಷಿಸಲಾಗಿದೆ.

Write A Comment