ರಾಷ್ಟ್ರೀಯ

ಭೀಕರ ಅಪಘಾತ: ಹೈದರಾಬಾದ್ ಸೈಬರ್ ಕ್ರೈಂ ಎಸಿಪಿ ಗಂಭೀರ; ಪತ್ನಿ, ಸಹೋದರಿ, ಬಾವ ಮೃತ್ಯು

Pinterest LinkedIn Tumblr

ಹೈದರಾಬಾದ್: ಭೀಕರ ಅಪಘಾತದಲ್ಲಿ  ಮೂವರು ಮೃತಪಟ್ಟಿರುವ ಘಟನೆ  ಕೀಸರ ತಾಲೂಕಿನ ಯಾದ್ಗಾರಪಲ್ಲಿಯ ಔಟರ್​ ರಿಂಗ್​ ರಸ್ತೆಯಲ್ಲಿ ನಡೆದಿದೆ.

ಹೈದರಾಬಾದ್​ ಸೈಬರ್​ ಕ್ರೈಂ ವಿಭಾಗದ ಎಸಿಪಿ ಕೆವಿಎಂ ಪ್ರಸಾದ್​ ಗಂಭೀರವಾಗಿ ಗಾಯಗೊಂಡಿದ್ದು ಅವರ ಪತ್ನಿ ಶಂಕರಮ್ಮ(48), ಪ್ರಸಾದ್ ಅವರ ತಂಗಿ ರೇಣುಕಾ(42)ಮತ್ತು ಬಾವ ಕೆ.ಬಾಲಕೃಷ್ಣ(48) ಮೃತಪಟ್ಟಿದ್ದಾರೆ. ಎಸಿಪಿ ಕೆವಿಎಂ ಪ್ರಸಾದ್​ ಗಂಭೀರ ಗಾಯಗೊಂಡು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Comments are closed.