ರಾಷ್ಟ್ರೀಯ

ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಿ: ಪ್ರಧಾನಮಂತ್ರಿ ನರೇಂದ್ರ ಮೋದಿ

Pinterest LinkedIn Tumblr

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಅಭಿಯಾನದಲ್ಲಿ ಪಾಲ್ಗೊಂಡು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೆ ಸ್ಪೂರ್ತಿ ತುಂಬಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ ಕರೆ ನೀಡಿದ್ದಾರೆ.

79ನೇ ಆವೃತ್ತಿಯ ತಿಂಗಳ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್’ನಲ್ಲಿ ಮಾತನಾಡುತ್ತಿರುವ ಅವರು, ಭಾರತದ ಕ್ರೀಡಾಪಟುಗಳನ್ನು ಶ್ಲಾಘಿಸಿದರು, ಟೋಕಿಯೊಗೆ ಹೋಗುವ ಪ್ರತಿಯೊಬ್ಬ ಆಟಗಾರನು ಒಬ್ಬರ ಸ್ವಂತ ಹೋರಾಟವನ್ನು ಹೊಂದಿದ್ದಾನೆ ಮತ್ತು ವರ್ಷಗಳ ಶ್ರಮವನ್ನು ಹೊಂದಿದ್ದಾನೆ. ಅವರು ತಮಗಾಗಿ ಮಾತ್ರವಲ್ಲ ದೇಶಕ್ಕಾಗಿ ಹೋಗುತ್ತಿದ್ದಾರೆ. ಈ ಸಮಯದಲ್ಲಿ ಒತ್ತಡಕ್ಕೆ ಒಳಗಾಗದೆ ದೇಶವು ಅವರನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ.

ದೇಶದ ಒಲಿಂಪಿಕ್ಸ್ ತಂಡವನ್ನು ಬೆಂಬಲಿಸುವ ‘ವಿಕ್ಟರಿ ಪಂಚ್ ಅಭಿಯಾನ’ ಪ್ರಾರಂಭವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ನಮ್ಮ ಒಲಿಂಪಿಕ್ಸ್ ತಂಡವನ್ನು ಬೆಂಬಲಿಸಲು‘ವಿಕ್ಟರಿ ಪಂಚ್ ಅಭಿಯಾನ’ ಪ್ರಾರಂಭವಾಗಿದೆ. ನಿಮ್ಮ ತಂಡದ ಜೊತೆಗೆ ನಿಮ್ಮ ವಿಜಯದ ಪಂಚ್ ಹಂಚಿಕೊಳ್ಳಿ ಮತ್ತು ಭಾರತಕ್ಕೆ ಹುರಿದುಂಬಿಸಿ ಎಂದು ಕರೆ ನೀಡಿದ್ದಾರೆ.

ಬಳಿಕ ಕಾರ್ಗಿಲ್ ದಿನಾಚರಣೆ ಕುರಿತು ಮಾತನಾಡಿದ ಅವರು, ಜುಲೈ 26ರಂದು ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಗುತ್ತದೆ. ಈ ಯುದ್ಧವು ನಮ್ಮ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಶಿಸ್ತಿನ ಸಂಕೇತವಾಗಿದೆ, ಇಡೀ ವಿಶ್ವವೇ ಇದಕ್ಕೆ ಸಾಕ್ಷಿಯಾಗಿದೆ. ಕಾರ್ಗಿಲ್ ಯುದ್ಧ ಕುರಿತ ರೋಮಾಂಚಕ ಕಥೆಯನ್ನು ನೀವು ಓದಬೇಕೆಂದು ನಾನು ಬಯಸುತ್ತೇನೆ. ಕಾರ್ಗಿಲ್ ಯುದ್ಧದ ಎಲ್ಲಾ ಧೈರ್ಯಶಾಲಿ ಹೃದಯಗಳಿಗೆ ನಾವೆಲ್ಲರೂ ನಮಸ್ಕರಿಸೋಣ ಎಂದು ಹೇಳಿದ್ದಾರೆ.

ಮನ್ ಕಿ ಬಾತ್‌ಗೆ ಸಂದೇಶ ಮತ್ತು ಸಲಹೆಗಳನ್ನು ಕಳುಹಿಸುವವರಲ್ಲಿ ಶೇ.75% ರಷ್ಟು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರೇ ಆಗಿದ್ದಾರೆಂಬುದು ನಮ್ಮ ಸರ್ಕಾರ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಇದರರ್ಥ ದೇಶದ ಯುವ ಜನತೆಯ ದೃಷ್ಟಿ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡುತ್ತಿದೆ ಎಂಬುದಾಗಿದೆ. ಮನ್ ಕಿ ಬಾತ್ ಸಕಾರಾತ್ಮಕತೆ ಮತ್ತು ಸೂಕ್ಷ್ಮತೆ ಇರುವ ಮಾಧ್ಯಮವಾಗಿದೆ ಎಂದು ತಿಳಿಸಿದ್ದಾರೆ.

ನಂತರ ಆಗಸ್ಟ್ 15 ರ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಇದು 75 ನೇ ಸ್ವಾತಂತ್ರ್ಯ ದಿನವಾದ್ದರಿಂದ ಈ ವರ್ಷ ವಿಶೇಷವಾಗಿದೆ. ಈ ಬಾರಿ ಆಗಸ್ಟ್ 15ರಂದು ಸ್ವಾತಂತ್ರ್ಯ ಮಹೋತ್ಸವದ ಅಮೃತ ಮಹೋತ್ಸವವನ್ನು ದೇಶ ಆಚರಣೆ ಮಾಡುತ್ತಿದೆ. ನಾವು 12 ಮಾರ್ಚ್‌ರಂದು ಅಮೃತ ಮಹೋತ್ಸವ ಯಾತ್ರೆಗೆ ಚಾಲನೆ ನೀಡಿದ್ದೇವೆ. ದೇಶದ ವಿವಿಧ ಭಾಗದಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ.

ಅಮೃತ್ ಮಹೋತ್ಸವಕ್ಕೆ ಸಂಸ್ಕೃತಿ ಸಚಿವಾಲಯ ಹೊಸ ಪ್ರಯತ್ನ ಕೈಗೆತ್ತಿಕೊಂಡಿದೆ. ಸರ್ಕಾರ ಮತ್ತು ಸಾಮಾಜಿಕ ಸಂಘಟನೆಗಳು ಇದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಈ ಅಗಸ್ಟ್ 15ರಂದುಕೂಡ ಇಂತಹದ್ದೇ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದು ರಾಷ್ಟ್ರಗೀತೆಗೆ ಸಂಬಂಧಪಟ್ಟಿದ್ದು. ಸಂಸ್ಕೃತಿ ಸಚಿವಾಲಯವು ಈ ಬಾರಿ ದೇಶದ ಜನರು ರಾಷ್ಟ್ರಗೀತೆ ಹಾಡುವಂತೆ ಹೇಳಿದೆ. ಇದಕ್ಕಾಗಿ raashtragan.in ಎಂಬ ವಬ್ ಸೈಟ್ ಆರಂಭಿಸಿದ್ದು ಇಲ್ಲಿ ನೀವು ರಾಷ್ಟ್ರಗೀತೆ ಹಾಡಿ ರೆಕಾರ್ಡಾ ಮಾಡಿ ಕಳುಹಿಸಬಹುದು. ಈ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳಿ ಎಂದು ಕರೆ ನೀಡಿದರು.

ಅಮೃತ ಮಹೋತ್ಸವ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮವಲ್ಲ. ಇದು ದೇಶದ ಎಲ್ಲಾ ಜನರ ಕಾರ್ಯಕ್ರಮವಾಗಿದೆ. ನಿಮಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವಾತ್ರಂತ್ರ್ಯ ಸೇನಾನಿಗಳನ್ನು ನೆನಪಿಸಿಕೊಳ್ಳಿ ಎಂದು ಮೋದಿ ಮನವಿ ಮಾಡಿದ್ದಾರೆ.

ಆತ್ಮ ನಿರ್ಭರ ಭಾರತ್‌ ನಮ್ಮ ಕನಸು ಅದನ್ನು ನಾವೆಲ್ಲರೂ ಸಾಕಾರಗೊಳಿಸೋಣ ನೀವು ಕೈಮಗ್ಗದ ಬಟ್ಟೆ ಖರೀದಿ ಮಾಡಿದರೆ ದೇಶದ ಬಡ ಜನರಿಗೆ ನೆರವಾಗಲಿದೆ. ಖಾದಿ ಮಳಿಗೆಯಲ್ಲಿ ಒಂದು ದಿನದಲ್ಲಿ 1 ಕೋಟಿ ರೂ. ವಹಿವಾಟು ನಡೆಯುತ್ತದೆ ಎಂಬುದನ್ನು ತೋರಿಸಿದ್ದೀರಿ.

ನಾವು ತಂತ್ರಜ್ಞಾನದ ವಿಚಾರದ ಬಗ್ಗೆ ಮಾತನಾಡುತ್ತೇವೆ. ಮದ್ರಾಸ್ ಐಐಟಿಯ ವಿದ್ಯಾರ್ಥಿಗಳು 3ಡಿ ಪ್ರಿಂಟಿಂಗ್ ಯೂನಿಟ್ ಸ್ಥಾಪನೆ ಮಾಡಿದ್ದಾರೆ. ನಿರ್ಮಾಣ ಕ್ಷೇತ್ರದಲ್ಲಿ ತಂತ್ರಜ್ಞಾನದಿಂದ ಕೆಲಸಗಳು ಬೇಗ ನಡೆಯುತ್ತಿವೆ ಎಂದು ಮೋದಿ ಹೇಳಿದರು.

ನಾವು ಹೊಸದನ್ನು ಕಲಿಯಬೇಕಾದರೆ ಪ್ರಯೋಗಳನ್ನು ಮಾಡಬೇಕು. ರೈತರು, ಯುವಕರು ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಯಶಸ್ಸು ಕಂಡಿದ್ದಾರೆ.

ಸೇಬು ಎಂದರೆ ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳು ಕಣ್ಣಮುಂದೆ ಬರುತ್ತವೆ. ಆದರೆ ಇಂದು ಮಣಿಪುರದಲ್ಲಿಯೂ ಸೇಬು ಬೆಳೆಯಾಗುತ್ತಿದೆ. ಹಿಮಾಚಲ ಪ್ರದೇಶದಲ್ಲಿ ತರಬೇತಿ ಮುಗಿಸಿಕೊಂಡು ಬಂದು ಇಂದು ಸೇಬು ಬೆಳೆಯುತ್ತಿದ್ದಾರೆ. ಈಗ ಹಲವು ರೈತರು ಇವರಿಂದ ಪ್ರೇರಣೆ ಪಡೆದಿದ್ದಾರೆ.

ಬಾಳೆ ಮರದ ನಾರಿನಿಂದ ಇಂದು ಹ್ಯಾಂಡ್ ಬ್ಯಾಗ್ ತಯಾರು ಮಾಡಲಾಗುತ್ತಿದೆ. ಇದರಿಂದ ಮಹಿಳೆಯರಿಗೆ ಅವರ ಗ್ರಾಮದಲ್ಲಿಯೇ ಉದ್ಯೋಗ ಸಿಕ್ಕಿದೆ. ಕರ್ನಾಟಕದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಬಾಳೆಯ ವಿವಿಧ ಉತ್ಪನ್ನಗಳನ್ನು ಬಾಳೆ ಹಿಟ್ಟಿನಿಂದ ತಯಾರು ಮಾಡುತ್ತಿದ್ದಾರೆ. ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ಚಂಡೀಗಢ್‌ನಲ್ಲಿ ವ್ಯಕ್ತಿಯೊಬ್ಬರು ಚಾಟ್‌ ಮಾರಾಟ ಮಾಡುತ್ತಾರೆ. ಕೋವಿಡ್ ಲಸಿಕೆ ಪಡೆದವರಿಗೆ ಅದೇ ದಿನ ಉಚಿತವಾಗಿ ಚೋಲೆ, ಪಟೋರೆ ನೀಡುತ್ತಿದ್ದಾರೆ. ಲಸಿಕೆ ಪಡೆದ ಸಂದೇಶ ತೋರಿಸಿದರೆ ಉಚಿತವಾಗಿ ಚಾಟ್ ಸಹಿಯಬಹುದಾಗಿದೆ.

ತಮಿಳುನಾಡಿನ ರಾಧಿಕಾ ಗುಡ್ಡ ಪ್ರದೇಶದಲ್ಲಿ ವಾಸಿಸುವ ಜನರಿಗೆ ಆರೋಗ್ಯ ಸೇವೆ ನೀಡಲು ಅಂಬ್ಯುಲೆನ್ಸ್ ಸೇವೆ ಆರಂಭಿಸಿದ್ದಾರೆ. ಈಗ 6 ಅಂಬ್ಯುಲೆನ್ಸ್ ಇದೆ, ಆಕ್ಸಿಜನ್, ಸ್ಟ್ರೇಚ್ಚರ್ ಸೇರಿದಂತೆ ವಿವಿಧ ಸೌಲಭ್ಯಗಳಿವೆ. ಇದರಿಂದಾಗಿ ಮಹಿಳೆಯರು, ಬಡ ಜನರಿಗೆ ಅನುಕೂಲವಾಗಿದೆ.

ಮುಂದಿನ ಎಲ್ಲಾ ಹಬ್ಬಗಳ ಶುಭಾಶಯಗಳನ್ನು ಮೋದಿ ಜನರಿಗೆ ತಿಳಿಸಿದರು. ಕೋವಿಡ್ ನಮ್ಮ ನಡುವೆಯೇ ಇದೆ. ಹಬ್ಬದ ಸಂಭ್ರಮದಲ್ಲಿ ಜನರು ಕೋವಿಡ್ ಮಾರ್ಗಸೂಚಿಗಳನ್ನು ಮರೆಯಬಾರದು ಎಲ್ಲರೂ ತಪ್ಪದೇ ಮಾಸ್ಕ್ ಧರಿಸಬೇಕು ಎಂದು ಕರೆ ಕೊಟ್ಟರು.

Comments are closed.