ರಾಷ್ಟ್ರೀಯ

ಇಂಡಿಗೊ ವಿಮಾನದಲ್ಲಿ ಹೆಣ್ಣು ಮಗುವಿನ ಹೆರಿಗೆ ಮಾಡಿಸಿದ ವೈದ್ಯೆ ಡಾ.ಸುಭಾನಾ ನಜೀರ್ ಕಾರ್ಯಕ್ಕೆ ಹರಿದುಬಂತು ಪ್ರಶಂಸೆಯ ಮಹಾಪೂರ!

Pinterest LinkedIn Tumblr

ಬೆಂಗಳೂರು: ಬುಧವಾರ ಬೆಂಗಳೂರಿನಿಂದ ಜೈಪುರಕ್ಕೆ ತೆರಳುತ್ತಿದ್ದ ಇಂಡಿಗೊ ವಿಮಾನದಲ್ಲಿ ಹೆಣ್ಣು ಮಗುವಿನ ಹೆರಿಗೆಗೆ ಸಹಾಯ ಮಾಡಿದ ನಂತರ ನಾರ್ತ್ ವೆಸ್ಟರ್ನ್ ರೈಲ್ವೆ ವಲಯದ ವೈದ್ಯರೊಬ್ಬರು ಶ್ಲಾಘನೆಗೆ ಒಳಗಾಗಿದ್ದಾರೆ.

ಡಾ. ಸುಭಾನಾ ನಜೀರ್ ಅವರ ಮಾರ್ಗದರ್ಶನದಲ್ಲಿ ವಿಮಾನದಲ್ಲಿದ್ದ ಸಿಬ್ಬಂದಿಯ ಸಹಾಯದಿಂದ ಗರ್ಭಿಣಿಯೊಬ್ಬರು ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದಾರೆ ಎಂದು ವಿಮಾನಯಾನ ಸಂಸ್ಥೆಯ ಅಧಿಕೃತ ಪ್ರಕಟಣೆ ತಿಳಿಸಿದೆ. ವಿಮಾನದಲ್ಲಿ 116 ಪ್ರಯಾಣಿಕರು ಇದ್ದರು ಎನ್ನಲಾಗಿದೆ.

ವಿಮಾನವು ಬೆಳಿಗ್ಗೆ 8.05 ಕ್ಕೆ ಜೈಪುರ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ನಂತರ ವೈದ್ಯರು ಮತ್ತು ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಮಗು ಮತ್ತು ತಾಯಿ ಸುರಕ್ಷಿತವಾಗಿದ್ದಾರೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಜೈಪುರ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಡಾ. ಸುಭಾನ ಅವರಿಗೆ ಭವ್ಯ ಸ್ವಾಗತ ದೊರೆಯಿತು ಮತ್ತು ರೈಲ್ವೆ ವಲಯದಿಂದ ಅವರನ್ನು ಪ್ರಶಂಸಿಸಲಾಯಿತು.

ಯಾವುದೇ ವೇಳೆಯಲ್ಲಿ ಏಲ್ಲೇ ಇರಲಿ, ಡಾ. ಸುಭಾನಾ ನಜೀರ್ ಕರ್ತವ್ಯಕ್ಕೆ ಬದ್ಧರಾಗಿರುತ್ತಾರೆ. ಬೆಂಗಳೂರಿನಿಂದ ಜೈಪುರಕ್ಕೆ ತೆರಳುತ್ತಿದ್ದ ಇಂಡಿಯಾ ವಿಮಾನದಲ್ಲಿ ಹೆಣ್ಣು ಮಗುವೊಂದರ ಹೆರಿಗೆಗೆ ಸಹಕರಿಸಿದ್ದಾರೆ ಎಂದು ನಾರ್ತ್ ವೆಸ್ಟರ್ನ್ ರೈಲ್ವೆ ಟ್ವೀಟರ್ ನಲ್ಲಿ ಪ್ರಶಂಸಿಸಿದೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ದೆಹಲಿ- ಬೆಂಗಳೂರು ವಿಮಾನದಲ್ಲಿ ಇದೇ ರೀತಿಯ ಪರಿಸ್ಥಿತಿಯನ್ನು ಏರ್ ಲೈನ್ಸ್ ಎದುರಿಸಿತ್ತು.

ಗರ್ಭಧಾರಣೆಯ 36 ವಾರ ಪೂರ್ಣಗೊಂಡ ಯಾವುದೇ ತೊಂದರೆಗಳಿಲ್ಲದ ಮಗುವಿನ ನಿರೀಕ್ಷೆಯಲ್ಲಿರುವ ಮಹಿಳೆಯರ ಪ್ರಯಾಣಕ್ಕೆ ಇಂಡಿಗೋ ವಿಮಾನಯಾನ ಸಂಸ್ಥೆ ಅನುಮತಿ ನೀಡುತ್ತದೆ. ಗರ್ಭಧಾರಣೆಯು 33 ಮತ್ತು 36 ನೇ ವಾರದ ನಡುವೆ ಇದ್ದರೆ, ಪ್ರಸೂತಿ ತಜ್ಞರಿಂದ ಫಿಟ್-ಟು-ಫ್ಲೈ ಪ್ರಮಾಣಪತ್ರ ಪಡೆಯಬೇಕು. ಪ್ರಯಾಣದ ದಿನಾಂಕಕ್ಕಿಂತ ಮುಂಚಿತವಾಗಿ ಏಳು ದಿನ ಹೆಚ್ಚಾಗಿರಬಾರದು.

Comments are closed.