ರಾಷ್ಟ್ರೀಯ

ಚೆನ್ನೈ-ಮಂಗಳೂರು ಸೂಪರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಭಾರೀ ಪ್ರಮಾಣದ ಸ್ಫೋಟಕ ಪತ್ತೆ; ಚೆನ್ನೈ ಮೂಲದ ಮಹಿಳೆ ವಶಕ್ಕೆ

Pinterest LinkedIn Tumblr

ಕೋಝಿಕೋಡ್: ಭಾರೀ ಪ್ರಮಾಣದ ಸ್ಫೋಟಕ ಕೋಝಿಕ್ಕೋಡ್ ರೈಲ್ವೆ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಪತ್ತೆಯಾಗಿದೆ.

ಎಂಂದಿನಂತೆ ಇಂದು ಬೆಳಗ್ಗೆ ಕೂಡ ರೈಲ್ವೆ ವಿಭಾಗದ ಪೊಲೀಸರು ನಿಲ್ದಾಣ ಸುತ್ತಮುತ್ತ ಮತ್ತು ರೈಲ್ವೆ ಬೋಗಿಗಳಲ್ಲಿ ತಪಾಸಣೆ ಮಾಡುತ್ತಿರುವಾಗ 117 ಜೆಲಾಟಿನ್ ಕಡ್ಡಿಗಳು, 350 ಸ್ಫೋಟಕಗಳು ಚೆನ್ನೈ-ಮಂಗಳೂರು ಸೂಪರ್ ಎಕ್ಸ್ ಪ್ರೆಸ್ ರೈಲಿನಲ್ಲಿ ಪತ್ತೆಯಾಗಿದೆ.

ಘಟನೆಗೆ ಸಂಬಂಧಪಟ್ಟಂತೆ ಚೆನ್ನೈ ಮೂಲದ ಮಹಿಳಾ ಪ್ರಯಾಣಿಕರೊಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಹಿಳೆ ಚೆನ್ನೈಯಿಂದ ತಲಶ್ಶೆರಿಗೆ ಹೊರಟಿದ್ದರು. ವಶಪಡಿಸಿಕೊಂಡಿರುವ ಸ್ಫೋಟಕ ವಸ್ತುಗಳಿಗೂ ಮಹಿಳೆಗೂ ಸಂಬಂಧವಿದೆಯೇ ಎಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೈಲಿನ ಡಿ1 ಬೋಗಿಯಲ್ಲಿ ಸ್ಫೋಟಕ ಪತ್ತೆಯಾಗಿದೆ. ಕ್ವಾರಿ ಚಟುವಟಿಕೆಗಳು ಅಥವಾ ಇತರ ಸಮಾಜ ವಿರೋಧಿ ಕೃತ್ಯಗಳಿಗೆ ಸ್ಫೋಟಕಗಳನ್ನು ತರಲಾಗಿದೆಯೇ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.

Comments are closed.