ನವದೆಹಲಿ: ಕಳೆದ ವಾರ ಪ್ರಾರಂಭಿಸಲಾದ ಕೋವಿಡ್ ಲಸಿಕೆ ಅಭಿಯಾನದ ಎರಡನೇ ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿ ಲಸಿಕೆ ಪಡೆಯಲಿದ್ದಾರೆಎಂದು ಮೂಲಗಳು ಆಂಗ್ಲ ಸುದ್ದಿವಾಹಿನಿ ಎನ್‌ಡಿಟಿವಿಗೆ ತಿಳಿಸಿವೆ.
ಎಲ್ಲಾ ಮುಖ್ಯಮಂತ್ರಿಗಳು ಸಹ ಲಸಿಕೆಗಳನ್ನು ಸ್ವೀಕರಿಸುತ್ತಾರೆ. 50 ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಕೊಮೊರ್ಬಿಡಿಟಿ ಹೊಂದಿರುವವರಿಗೆ ಎರಡನೇ ಹಂತದಲ್ಲಿ ಲಸಿಕೆ ನೀಡಲಾಗುವುದು.
ಈ ಹಿಂದೆ ಮುಖ್ಯಮಂತ್ರಿಗಳೊಂದಿಗಿನ ಸಭೆಯಲ್ಲಿ ಪಿಎಂ ಮೋದಿ ಲಸಿಕೆಯ ಕುರಿತು ಭೀತರಾಗುವ ಅಗತ್ಯವಿಲ್ಲ ಮತ್ತು 50 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಎರಡನೇ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ ಎಂದು ಹೇಳಿದ್ದರು.
ಜನವರಿ 16 ರಂದು ಆರೋಗ್ಯ ಕಾರ್ಯಕರ್ತರು ಸೇರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೊವ್ಯಾಕ್ಸೀನ್ ಲಸಿಕೆಗಳನ್ನು ಸ್ವೀಕರಿಸುವುದರೊಡನೆ ಭಾರತದಲ್ಲಿ ಕೋವಿಡ್ ಲಸಿಕೆ ಅಭಿಯಾನ ಪ್ರಾರಂಭವಾಗಿದೆ. ಈ . ಎರಡು ಲಸಿಕೆಗಳ ನಡುವೆ ಯಾರೂ ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ..