ರಾಷ್ಟ್ರೀಯ

ಫೂಟ್‌ಪಾತ್‌ ನಲ್ಲಿ ಮಲಗಿದ್ದವರ ಮೇಲೆ ಟ್ರಕ್‌ ಹರಿದ ಪರಿಣಾಮ 15 ಮಂದಿ ಸಾವು

Pinterest LinkedIn Tumblr

ಸೂರತ್ ‌: ಫೂಟ್‌ಪಾತ್‌ ನಲ್ಲಿ ಮಲಗಿದ್ದವರ ಮೇಲೆ ಟ್ರಕ್‌ ಹರಿದ ಪರಿಣಾಮ ಕನಿಷ್ಠ 15 ಮಂದಿ ಕಾರ್ಮಿಕರು ಮೃತಪಟ್ಟ ದಾರುಣ ಘಟನೆ ಗುಜರಾತ್‌ನ ಕೋಸಂಬಾದಲ್ಲಿ ನಡೆದಿದೆ.

ಮೃತಪಟ್ಟಿರುವ ಎಲ್ಲರೂ ರಾಜಸ್ಥಾನದಿಂದ ಬಂದಿದ್ದ ವಲಸೆ ಕಾರ್ಮಿಕರು ಎಂದು ಪೊಲೀಸರು ತಿಳಿಸಿದ್ದಾರೆ.

ಇಂದು ಬೆಳಗಿನ ಜಾವ ದುರ್ಘಟನೆ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ್ದ ಟ್ರಕ್ ಇದ್ದಕ್ಕಿದ್ದಂತೆ ಪಾದಚಾರಿ ಮಾರ್ಗಕ್ಕೆ ನುಗ್ಗಿದೆ.

ದುರ್ಘಟನೆ ಸಂಭವಿಸುವ ವೇಳೆ ಪಾದಚಾರಿ ಮಾರ್ಗದಲ್ಲಿ ಕಾರ್ಮಿಕರು ಮಲಗಿದ್ದರೆಂದು ಹೇಳಲಾಗುತ್ತಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಸಾವನ್ನಪ್ಪಿದ್ದ ಎಲ್ಲರೂ ಕಾರ್ಮಿಕರಾಗಿದ್ದು, ರಾಜಸ್ಥಾನ ಮೂಲದವರಾಗಿದ್ದಾರೆಂದು ಪೊಲೀಸರು ಹೇಳಿದ್ದಾರೆ.

Comments are closed.