ರಾಷ್ಟ್ರೀಯ

ಅಂಕಗಳು ಬೇಕೆಂದರೆ ನನ್ನೊಂದಿಗೆ ಸೆಕ್ಸ್​ ಮಾಡಿ!: ಶಿಕ್ಷಕನ ಬೇಡಿಕೆಗೆ ಬೆಚ್ಚಿದ ವಿದ್ಯಾರ್ಥಿನಿಯರು

Pinterest LinkedIn Tumblr


ಜೈಪುರ: ಪಾಠ ಹೇಳಿಕೊಡಬೇಕಾದ ಶಿಕ್ಷಕನೊಬ್ಬ, ಅಂಕ​ ಬೇಕೆಂದರೆ ನನ್ನ ಬಳಿ ಸೆಕ್ಸ್​ ಮಾಡುವ ರೀತಿ ಇರಬೇಕು ಎಂದು ವಿದ್ಯಾರ್ಥಿನಿಯರ ಎದುರು ಬೇಡಿಕೆ ಇಟ್ಟಿರುವ ಘಟನೆ ರಾಜಸ್ಥಾನದ ನೀಮ್ರಾನಾದಲ್ಲಿ ನಡೆದಿದೆ. ಮೇಲಧಿಕಾರಿಯ ಎದುರು ವಿದ್ಯಾರ್ಥಿನಿಯರು ಶಿಕ್ಷಕನ ಕಾಮದಾಸೆಗಳನ್ನು ಬಿಚ್ಚಿಟ್ಟಿದ್ದು, ಇದೀಗ ಶಿಕ್ಷಕ ಜೈಲು ಪಾಲಾಗಿದ್ದಾನೆ.

ನೀಮ್ರಾನಾದ ಸರ್ಕಾರಿ ಶಾಲಾ ಶಿಕ್ಷಕ ದೇವ್​ ಪ್ರಕಾಶ್​ ಯಾದವ್​ (45) ಆರೋಪ ಎದುರಿಸುತ್ತಿರುವ ಶಿಕ್ಷಕ. ಈತ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದನಂತೆ. ವಿದ್ಯಾರ್ಥಿನಿಯರ ಗುಪ್ತಾಂಗ ಮುಟ್ಟುವುದು, ಅಸಭ್ಯ ರೀತಿಯಲ್ಲಿ ವರ್ತನೆ ಮಾಡುತ್ತಿದ್ದನಂತೆ. ಒಳ್ಳೆಯ ಮಾರ್ಕ್ಸ್​ ಬೇಕಾದರೆ, ನನ್ ಜತೆ ದೈಹಿಕವಾಗಿ ಹೊಂದಿಕೊಳ್ಳಿ ಎಂದು ಹೇಳುತ್ತಿದ್ದನಂತೆ.

ಶಿಕ್ಷಕನ ಈ ನೀತಿಯಿಂದ ಬೇಸತ್ತಿದ್ದ ವಿದ್ಯಾರ್ಥಿನಿಯರು, ಮೇಲಧಿಕಾರಿ ಶಾಲೆಯ ಮೇಲ್ವಿಚಾರಣೆಗೆ ಬಂದಾಗ, ಅವರ ಎದುರು ಶಿಕ್ಷಕನ ಬಗ್ಗೆ ದೂರುಗಳನ್ನು ಇಟ್ಟಿದ್ದಾರೆ. ಸೂಕ್ಷ್ಮತೆಯನ್ನು ಅರಿತ ಅಧಿಕಾರಿಗಳು ಶಿಕ್ಷಣ ಇಲಾಖೆ ವಿಚಾರ ಮುಟ್ಟಿಸಿದ್ದು, ಪೊಲೀಸ್​ ಪ್ರಕರಣ ದಾಖಲಿಸಲಾಗಿದೆ. ಶಿಕ್ಷಕನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ವಿಚಾರವಾಗಿ ಹೆಚ್ಚಿನ ತನಿಖೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

Comments are closed.