ರಾಷ್ಟ್ರೀಯ

ಮಮತಾ ಬ್ಯಾನರ್ಜಿ ಏಕಾಂಗಿಯಾಗಿ ಉಳಿಯುವುದು ಖಚಿತ; ಅಮಿತ್ ಶಾ

Pinterest LinkedIn Tumblr


ಡಿಜಿಟಲ್ ಡೆಸ್ಕ್ : ಮುಂದಿನ ವಿಧಾನ ಸಭೆ ಚುನಾವಣೆಯಷ್ಟರಲ್ಲಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಏಕಾಂಗಿಯಾಗಿ ಉಳಿಯುವುದು ಖಚಿತ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಪಶ್ಚಿಮ ಬಂಗಾಳದ ಮಿಡ್ನಾಪುರ್ ನಲ್ಲಿ ಮೆರವಣಿಗೆ ಉದ್ದೇಶಿಸಿ ಮಾತನಾಡಿದ ಅವರು, ‘ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸೀಟುಗಳಿಂದ ಬಿಜೆಪಿ ಸರ್ಕಾರ ರಚಿಸಲಿದೆ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಏಕಾಂಗಿಯಾಗಿ ಉಳಿಯುವುದು ಖಚಿತ’ ಎಂದಿದ್ದಾರೆ ‘ ಎಂದು ಆತ್ಮವಿಶ್ವಾಸದಿಂದ ಹೇಳಿದರು.

ನಮ್ಮ ಪಕ್ಷದ ಸದಸ್ಯರನ್ನು ಬಿಜೆಪಿ ಪಕ್ಷಾಂತರಕ್ಕೆ ಪ್ರಚೋದಿಸುತ್ತಿದೆ ಎಂದು ದೀದಿ ಆರೋಪಿಸುತ್ತಿದ್ದಾರೆ. ಆದರೆ ನಾನು ಒಂದು ವಿಷಯವನ್ನು ಅವರ ಬಳಿ ಕೇಳಬೇಕು, ಟಿಎಂಸಿ ರಚನೆ ವೇಳೆ ಕಾಂಗ್ರೆಸ್ ತೊರೆಯುವಾಗ ನಿಮಗೆ ಪಕ್ಷಾಂತರ ಅನಿಸಲಿಲ್ಲವೇ? ಇದು ಆರಂಭ ಅಷ್ಟೆ. ವಿಧಾನ ಸಭೆ ಚುನಾವಣೆ ಸಮಯ ಬರಲಿ, ಚುನಾವಣಾ ಅಖಾಡದಲ್ಲಿ ದೀದಿ ಒಬ್ಬರೇ ಒಬ್ಬರು ಉಳಿದುಕೊಳ್ಳುತ್ತಾರೆ’ ಎಂದರು.

Comments are closed.