ರಾಷ್ಟ್ರೀಯ

ದೇಶದಲ್ಲಿ ಪ್ರಥಮ ಹಂತದಲ್ಲಿ 30 ಕೋಟಿ ಮಂದಿಗೆ ಕೊರೊನಾ ಲಸಿಕೆ

Pinterest LinkedIn Tumblr


ನವದೆಹಲಿ : ಕೇಂದ್ರವು ಪ್ರಥಮ ಹಂತದಲ್ಲಿ ದೇಶದ 30 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡಲು ಸಿದ್ಧತೆ ಕೈಗೊಂಡಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

ಕೇಂದ್ರ ಸರ್ಕಾರವು ಕೊರೊನಾ ಲಸಿಕೆ ನೀಡಲು ಮೊದಲ ಹಂತದಲ್ಲಿ 10 ಸಾವಿರ ಕೋಟಿ ರೂ. ಧನಸಹಾಯ ಮಾಡಲಿದೆ. ಬಿಹಾರ ಮತ್ತು ಕೇರಳದಂತಹ ಕೆಲವು ರಾಜ್ಯಗಳು ಕೊರೊನಾವೈರಸ್ ಲಸಿಕೆಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಹೇಳಿವೆ, ಆದರೆ ಇನ್ನೂ ಹೆಚ್ಚಿನ ರಾಜ್ಯಗಳು ಶೀಘ್ರದಲ್ಲೇ ಇದೇ ರೀತಿಯ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ.

ವಿಶ್ವ ಆರೋಗ್ಯ ಸಂಸ್ಥೆ (WHA) ಮತ್ತು GAVI ನೇತೃತ್ವದ ಕೊವಾಕ್ಸ್ ಜಾಗತಿಕ ಲಸಿಕೆ ಹಂಚಿಕೆ ಯೋಜನೆಯ ಅಡಿಯಲ್ಲಿ ಈಗಾಗಲೇ ಭಾರತ ಬೆಂಬಲ ವನ್ನು ಹೊಂದಿದೆ. ಕಳೆದ ಏಪ್ರಿಲ್ ನಲ್ಲಿ ಸ್ಥಾಪಿಸಲಾದ ಕೋವಿಡ್ 19 ಟೂಲ್ಸ್ (ACT) ಆಕ್ಸಿಲರೇಟರ್ ಎಂಬ ನಿಧಿಯ ಮೂಲಕ ಬಡ ಮತ್ತು ಮಧ್ಯಮ ಆದಾಯವಿರುವ ದೇಶಗಳಿಗೆ ಲಸಿಕೆಗಳನ್ನು ಒದಗಿಸುವ ಗುರಿಯನ್ನು ಈ ಒಪ್ಪಂದ ಹೊಂದಿದೆ. GAVI ಸದ್ಯ ಭಾರತ ಸರ್ಕಾರದ ಜೊತೆ ದೇಶದಲ್ಲಿ ಲಸಿಕೆ ಯ ಬೆಂಬಲ ಪ್ಯಾಕೇಜ್ ಬಗ್ಗೆ ಮಾತುಕತೆ ನಡೆಸುತ್ತಿದೆ.

ನ್ಯಾಷನಲ್ ಎಕ್ಸ್ ಪರ್ಟ್ ಗ್ರೂಪ್ ಆನ್ ವ್ಯಾಕ್ಸಿನ್ಸ್ (NEGVAC) ಪಟ್ಟಿ ಮಾಡಿರುವ ಆದ್ಯತಾ ಗುಂಪುಗಳಲ್ಲಿ 1 ಕೋಟಿ ಹೆಲ್ತ್ ಕೇರ್ ಕಾರ್ಮಿಕರು, ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಸೇರಿದಂತೆ 2 ಕೋಟಿ ಮಂದಿ ಮುಂಚೂಣಿ ಕಾರ್ಮಿಕರು ಮತ್ತು ಅಗತ್ಯ ಕೆಲಸಗಾರರು ಮತ್ತು 27 ಕೋಟಿ ವೃದ್ಧರು, ಹೆಚ್ಚಾಗಿ 50 ವರ್ಷ ಮೇಲ್ಪಟ್ಟ ವಯೋವೃದ್ಧರು, ಮಧುಮೇಹ, ಹೃದಯ ಅಥವಾ ಪಿತ್ತಜನಕಾಂಗದ ಕಾಯಿಲೆಗಳಂತಹ ಮಾರಕ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಲಸಿಕೆ ನೀಡಲಾಗುತ್ತದೆ ಎನ್ನಲಾಗಿದೆ.

Comments are closed.