ನವದೆಹಲಿ: ಪ್ರತಿಭಟನಾನಿರತ ರೈತರನ್ನುದ್ದೇಶಿಸಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಪತ್ರ ಬರೆದಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ರೈತರು ಓದಲು ಮನವಿ ಮಾಡಿದ್ದಾರೆ.
ತೋಮರ್ ಅವರು, ಹಲವು ರೈತ ಸಂಘಟನೆಗಳು ಈ ಮೂರು ಹೊಸ ಕಾನೂನುಗಳನ್ನು ಸ್ವಾಗತಿಸಿವೆ ಮತ್ತು ಕೆಲವು ರೈತರು ಈಗಾಗಲೇ ತಮ್ಮ ಪ್ರಯೋಜನವನ್ನ ಪಡೆಯಲು ಆರಂಭಿಸಿದ್ದಾರೆ. ದೆಹಲಿ ಮತ್ತು ಸುತ್ತಮುತ್ತ ಹರಡಿರುವ ಸುಳ್ಳು ಸುದ್ದಿಗಳಿಂದ ರೈತರು ಪ್ರಭಾವಿತರಾಗುವುದಿಲ್ಲ. ಇನ್ನು ರೈತರು ಮತ್ತು ಕೇಂದ್ರದ ನಡುವೆ ಗೋಡೆ ನಿರ್ಮಿಸಲು ಸಂಚು ರೂಪಿಸಲಾಗುತ್ತಿದೆ ಎಂಬುದನ್ನ ಬಯಲು ಮಾಡುವುದು ನನ್ನ ಕರ್ತವ್ಯ ಎಂದಿದ್ದಾರೆ.
ಕೃಷಿ ಹಿನ್ನೆಲೆಯಿಂದ ಬಂದವನು, ರೈತನಿಗೆ ಇರುವ ಕಾಳಜಿಗಳ ಬಗ್ಗೆ ಚೆನ್ನಾಗಿ ಅರಿವಿದೆ ಎಂದು ಹೇಳಿದ ಸಚಿವರು, ತಮ್ಮ ಕಠಿಣ ಪರಿಶ್ರಮ ಮತ್ತು ಉತ್ಪಾದನೆಯ ಮೂಲಕ ದೇಶದ ಆರ್ಥಿಕತೆಯನ್ನು ಹೆಚ್ಚಿಸಲು ಸಹಾಯ ಮಾಡಿದ ಕ್ಕಾಗಿ ಧನ್ಯವಾದಗಳನ್ನ ಅರ್ಪಿಸಿದರು.
ರಾಜ್ಯಸಭೆಯಲ್ಲಿ ಈ ಮೂರು ಕಾನೂನುಗಳು ಅಂಗೀಕಾರವಾದ ನಂತರ ಈ ವರ್ಷ ಸರ್ಕಾರ ದಾಖಲೆ ಸಂಖ್ಯೆಯಲ್ಲಿ ಉತ್ಪಾದನೆಯನ್ನ ಖರೀದಿಸಿದೆ ಎಂದು ತೋಮರ್ ಗಮನ ಸೆಳೆದರು. ‘ಈ ರೀತಿಯ ಸಮಯದಲ್ಲಿ, ಸರ್ಕಾರ ತನ್ನ ಎಂಎಸ್ ಪಿ ಖರೀದಿಯನ್ನ ಹೆಚ್ಚಿಸಲು ಪ್ರಯತ್ನಿಸುತ್ತಿರುವಾಗ, ಎಂಎಸ್ ಪಿ ಯನ್ನು ನಿಲ್ಲಿಸಲಾಗುತ್ತದೆ ಎಂದು ಕೆಲವರು ರೈತರಿಗೆ ಸುಳ್ಳು ಹೇಳುತ್ತಾರೆ’ ಎಂದು ಅವರು ಬರೆದಿದ್ದಾರೆ.
ರೈತರ ಹಿತಕ್ಕಾಗಿ ಸುಳ್ಳುಗಳನ್ನ ಹರಡುತ್ತಿರುವ ಅಂಶಗಳನ್ನ ಗುರುತಿಸಿ ಅವುಗಳನ್ನು ತಿರಸ್ಕರಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದ ಅವರು, ರೈತರ ಹಿತದ ಕಡೆ ಸರ್ಕಾರ ಹೆಚ್ಚಿನ ಆದ್ಯತೆಯನ್ನ ನೀಡಿದೆ.
ಎ.ಪಿ.ಎಂ.ಸಿ ಕಾರ್ಯ ನಿರ್ವಹಿಸುತ್ತಿದ್ದು, ಮುಂದೆಯೂ ಮುಂದುವರಿಯಲಿದೆ ಎಂದು ಕೃಷಿ ಸಚಿವರು ತಿಳಿಸಿದರು. ‘ಇದರಿಂದ ಮುಕ್ತ ಮಾರುಕಟ್ಟೆ ನಿಮ್ಮ ಮನೆಯ ಆರಾಮದಿಂದ ನಿಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡುತ್ತದೆ. ಎ.ಪಿ.ಎಂ.ಸಿ.ವರೆಗೆ ಧಾನ್ಯ ತೆಗೆದುಕೊಳ್ಳಲು ನೀವು ಪಾವತಿಸಬೇಕಾದ ಬಾಡಿಗೆ, ಎ.ಪಿ.ಎಂ.ಸಿ.ಯನ್ನ ತಾಂತ್ರಿಕವಾಗಿ ಪ್ರಗತಿ ಸಾಧಿಸಲು ಕಳೆದ ಐದಾರು ವರ್ಷಗಳಲ್ಲಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ’ ಎಂದರು.
ತಮ್ಮ ರಾಜಕೀಯ ಅಧಿಕಾರವನ್ನು ಕಳೆದುಕೊಂಡವರು ಸುಧಾರಣೆಗಳ ಬಗ್ಗೆ ಸುಳ್ಳುಗಳನ್ನ ಹರಡುತ್ತಿದ್ದಾರೆ ಎಂದು ತೋಮರ್ ಕಿಡಿಕಾರಿದ್ದಾರೆ.