ರಾಷ್ಟ್ರೀಯ

ರೈತರನ್ನುದ್ದೇಶಿಸಿ 8 ಪುಟಗಳ ಪತ್ರ ಬರೆದ ಕೇಂದ್ರ ಕೃಷಿ ಸಚಿವ

Pinterest LinkedIn Tumblr


ಡಿಜಿಟಲ್ ಡೆಸ್ಕ್: ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ದೇಶದ ರೈತರನ್ನುದ್ದೇಶಿಸಿ 8 ಪುಟಗಳ ಪತ್ರ ಬರೆದಿದ್ದಾರೆ. ಎಂಎಸ್ಪಿ ಬಗ್ಗೆ ಲಿಖಿತ ಭರವಸೆ ನೀಡಲು ಸರ್ಕಾರ ಸಿದ್ಧವಾಗಿದೆ ಎಂದು ತೋಮರ್ ಗುರುವಾರ ರೈತರಿಗೆ ಬರೆದ ಎಂಟು ಪುಟಗಳ ಪತ್ರದಲ್ಲಿ ತಿಳಿಸಿದ್ದಾರೆ.

ಸಾಕಷ್ಟು ರೈತರು ಈಗಾಗಲೇ ಹೊಸ ಕೃಷಿ ಕಾನೂನುಗಳಿಂದ ಲಾಭ ಪಡೆಯುತ್ತಿದ್ದಾರೆ. ಆದರೆ ಕೆಲವರು ಕಾನೂನಿನ ಕುರಿತು ತಪ್ಪು ಮಾಹಿತಿ ಹಂಚುತ್ತಿದ್ದಾರೆ ಎಂದರು

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ತಮ್ಮ ಪತ್ರದಲ್ಲಿ, ಕೇಂದ್ರದ ಮೂರು ಹೊಸ ಕೃಷಿ ಮಸೂದೆಗಳ ಬಗ್ಗೆ ಹೆಚ್ಚಿನ ರೈತರು ಸಂತೋಷವಾಗಿದ್ದಾರೆ ಆದರೆ ಸುಳ್ಳಿನ ಆಧಾರದ ಮೇಲೆ ಉದ್ವಿಗ್ನತೆಯನ್ನು ಉಂಟುಮಾಡುವ ಹಿನ್ನೆಲೆ ಪಿತೂರಿಯ ನಡೆದು ಕೆಲವು ಗೊಂದಲಗಳನ್ನು ಸೃಷ್ಟಿಸಿವೆ ಎಂದಿದ್ದಾರೆ.

ನಾನು ರೈತನ ಕುಟುಂಬಕ್ಕೆ ಸೇರಿದವನು ಮತ್ತು ಬಾಲ್ಯದಿಂದಲೂ ನಾನು ರೈತರ ಕಠಿಣ ಜೀವನವನ್ನು ಅನುಭವಿಸಿದ್ದೇನೆ. ಕಾನೂನಿನ ಅನುಷ್ಠಾನದ ನಂತರ ಎಂಎಸ್‌ಪಿ ಸಂಗ್ರಹವು ಈ ಬಾರಿ ಹೊಸ ದಾಖಲೆಯನ್ನು ನಿರ್ಮಿಸಿದೆ ಎಂಬುದು ಬಹಳ ತೃಪ್ತಿಕರವಾಗಿದೆ’ ಎಂದು ತೋಮರ್ ಹೇಳಿದ್ದಾರೆ.

‘ಕಳೆದ ಆರು ವರ್ಷಗಳಲ್ಲಿ, ಮೋದಿ ಸರ್ಕಾರ ರೈತರಿಗಾಗಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಈ ಮಸೂದೆಗಳ ಮೂಲಕ, ರೈತರು ತಮ್ಮ ಉತ್ಪನ್ನವನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಸರ್ಕಾರ ಹೆಚ್ಚುವರಿ ಆಯ್ಕೆಯನ್ನು ಒದಗಿಸಿದೆ’ ಎಂದು ತೋಮರ್ ಹೇಳಿದರು. ಎಂಎಸ್ಪಿ ಮತ್ತು ಎಪಿಎಂಸಿ ಮಂಡಿಗಳು ಮುಂದುವರಿಯಲಿವೆ ಮತ್ತು ಸರ್ಕಾರ ಈ ನಿಟ್ಟಿನಲ್ಲಿ ಲಿಖಿತ ಭರವಸೆ ನೀಡಲು ಸಿದ್ಧವಾಗಿದೆ ಎಂದು ಹೇಳಿದ ನರೇಂದ್ರ ಸಿಂಗ್ ತೋಮರ್, ಸ್ವಾಮಿನಾಥನ್ ಸಮಿತಿ ವರದಿಯಲ್ಲಿ ಎಂಟು ವರ್ಷಗಳ ಕಾಲ ಮಾಡಿದ ಶಿಫಾರಸುಗಳ ಮೇಲೆ ಕಾಂಗ್ರೆಸ್ ಕುಳಿತುಕೊಂಡಿದೆ ಎಂದು ಹೇಳಿದರು. ‘ಈ ದಿನಗಳಲ್ಲಿ, ಅವರು ಮತ್ತೆ ಉದ್ವಿಗ್ನತೆಯನ್ನು ಉಂಟುಮಾಡಲು ಕೆಲಸ ಮಾಡುತ್ತಿದ್ದಾರೆ. ಅವರು ನಮ್ಮ ಸೈನ್ಯವನ್ನು ಮತ್ತು ಲೇಹ್-ಲಡಾಖ್ನಲ್ಲಿ ಅವರ ಸರ್ವೋಚ್ಚ ತ್ಯಾಗವನ್ನೂ ಪ್ರಶ್ನಿಸಿದ್ದಾರೆ’ ಎಂದು ಕೇಂದ್ರ ಕೃಷಿ ಸಚಿವರು ರೈತರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Comments are closed.