ರಾಷ್ಟ್ರೀಯ

ತಮ್ಮ ಸ್ವಘೋಷಿತ `ಕೈಲಾಸ’ ದೇಶಕ್ಕೆ 3 ವೀಸಾ ಘೋಷಿಸಿದ ಸ್ವಾಮಿ ನಿತ್ಯಾನಂದ!

Pinterest LinkedIn Tumblr


ವಿವಾದಾತ್ಮಕ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ತಮ್ಮ ಸ್ವಘೋಷಿತ `ಕೈಲಾಸ’ ದೇಶಕ್ಕೆ 3 ದಿನಗಳ ವೀಸಾ ಆಹ್ವಾನ ನೀಡಿದ್ದಾರೆ.

3 ದಿನಗಳ ಕಾಲ ವೀಸಾ ದೊರೆಯಲಿದ್ದು, ತನ್ನನ್ನು ಭೇಟಿ ಮಾಡಲು ಇಚ್ಚಿಸುವ ಭಕ್ತರು ತಮ್ಮ ಸ್ವಂತ ಖರ್ಚಿನಲ್ಲಿ ಇಲ್ಲಿಗೆ ಬಂದರೆ 10 ನಿಮಿಷಗಳ ಕಾಲ ತಮ್ಮನ್ನು ಭೇಟಿ ಮಾಡಬಹುದು ಎಂದು ಕರೆ ನೀಡಿದ್ದಾರೆ.

ನಿತ್ಯಾನಂದ ತಮ್ಮ ವೆಬ್ ಸೈಟ್ ನಲ್ಲಿ ಈ ಸಂದೇಶ ರವಾನಿಸಿದ್ದು, ಆಸ್ಟ್ರೇಲಿಯಾಗೆ ಹೋಗಬೇಕು. ಅಲ್ಲಿಂದ ಗರುಡ ಚಾರ್ಟೆಡ್ ವಿಮಾನದ ಮೂಲಕ ಕೈಲಾಸಕ್ಕೆ ಕರೆದೊಯ್ಯಲಾಗುವುದು. 3 ದಿನಕ್ಕಿಂತ ಹೆಚ್ಚು ಇಲ್ಲಿ ಇರಲು ಅವಕಾಶವಿಲ್ಲ ಎಂದು ನಿತ್ಯಾನಂದ ವೀಡಿಯೋ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ವೀಸಾ ಪಡೆಯಲು shrikailasa.org.e-passport ಈ ಲಿಂಕ್ ಪಡೆಯಲು ಸಲಹೆ ನೀಡಿದ್ದಾರೆ. ಭೇಟಿ ನೀಡುವ ಭಕ್ತರಿಗೆ ಊಟ, ವಸತಿ ಉಚಿತ ವ್ಯವಸ್ಥೆ ಮಾಡಲಾಗುವುದು ಎಂದು ಅವರು ವಿವರಿಸಿದ್ದಾರೆ.

Comments are closed.