ರಾಷ್ಟ್ರೀಯ

ನಾಳೆ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ನೀಲನಕ್ಷೆ ಬಿಡುಗಡೆ: ಗಣರಾಜ್ಯದಂದು ಶಿಲಾನ್ಯಾಸ

Pinterest LinkedIn Tumblr


ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿರುವಂತೆಯೇ, ಧನ್ನಿಪುರ ಹಳ್ಳಿಯಲ್ಲಿ ನೀಡಲಾದ 5 ಎಕ್ರೆ ಜಾಗದಲ್ಲಿ ಮಸೀದಿ ನಿರ್ಮಾಣಕ್ಕೂ ಸಿದ್ಧತೆ ನಡೆದಿದೆ.

ಜ.26ರಂದು ಅಂದರೆ ಮುಂದಿನ ಗಣರಾಜ್ಯೋತ್ಸವದಂದು ಮಸೀದಿಗೆ ಅಡಿಗಲ್ಲು ಹಾಕಲಾಗುವುದು ಎಂದು ಇಂಡೋ-ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಶನ್‌ (ಐಐಸಿಎಫ್) ಕಾರ್ಯದರ್ಶಿ ಅತ್ತಾರ್‌ ಹುಸೇನ್‌ ಗುರುವಾರ ಮಾಹಿತಿ ನೀಡಿದ್ದಾರೆ. ಜತೆಗೆ, ಈ ಕುರಿತ ನೀಲನಕ್ಷೆಯನ್ನು ಶನಿವಾರ ಬಿಡುಗಡೆ ಮಾಡಲಾಗುತ್ತದೆ ಎಂದೂ ಹೇಳಿದ್ದಾರೆ.

ಹೊಸ ಮಸೀದಿಯಲ್ಲಿ 2,000 ಮಂದಿ ಏಕಕಾಲದಲ್ಲಿ ನಮಾಜ್‌ ಮಾಡಲು ಅವಕಾಶವಿರುತ್ತದೆ. ಉಚಿತ ಚಿಕಿತ್ಸೆ ನೀಡುವ ಆಸ್ಪತ್ರೆ ಇಲ್ಲಿನ ಕೇಂದ್ರಬಿಂದು. 300 ಹಾಸಿಗೆಗಳಿರುವ ವಿಶೇಷ ಚಿಕಿತ್ಸಾ ಘಟಕಗಳಿರುತ್ತವೆ. ಹಾಗೆಯೇ ಸಾಮೂಹಿಕ ಅಡುಗೆ ಮನೆಯಿರುತ್ತದೆ. ಇಲ್ಲಿ ಸನಿಹದ ಬಡವರಿಗೆ ದಿನಕ್ಕೆರಡು ಬಾರಿ ಉಚಿತ ಆಹಾರ ನೀಡಲಾಗುತ್ತದೆ. ಗ್ರಂಥಾಲಯ ಇರುತ್ತದೆ ಎಂದು ತಿಳಿಸಲಾಗಿದೆ.

Comments are closed.