ರಾಷ್ಟ್ರೀಯ

ಈ ಸ್ಮಾರ್ಟ್ ಪೋನ್ ಗಳಲ್ಲಿ ಸಂಪೂರ್ಣ ವಾಟ್ಸಾಪ್ ಬಂದ್

Pinterest LinkedIn Tumblr


ನವದೆಹಲಿ: ವಾಟ್ಸಾಪ್ 2021ರಿಂದ ಕೆಲವು ಆಯಂಡ್ರಾಯ್ಡ್ ಮತ್ತು ಐಪೋನ್ ಗಳಲ್ಲಿ ತನ್ನ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಲಿದೆ.

ಐಓಎಸ್ 9 ಮತ್ತು ಆಯಂಡ್ರಾಯ್ಡ್ 4.0.3 ಅಪರೇಟಿಂಗ್ ಸಿಸ್ಟಂ ಹೊಂದಿರುವ ಹಳೆಯ ಡಿವೈಸ್ ಗಳಲ್ಲಿ ವಾಟ್ಸಾಪ್ ತನ್ನ ಕಾರ್ಯವನ್ನು ಮುಂದಿನ ವರ್ಷದಿಂದ (2021) ಸಂಪೂರ್ಣ ನಿಲ್ಲಿಸಲಿದೆ.

ಪ್ರಮುಖವಾಗಿ ಐಪೋನ್-4 ಮತ್ತು ಅದಕ್ಕೂ ಮೊದಲಿನ ಸ್ಮಾರ್ಟ್ ಫೋನ್, ಐಫೋನ್ 4ಎಸ್, ಐಫೋನ್ 5, ಐಫೋನ್ 5ಸಿ, ಐಪೋನ್ 5ಎಸ್, ಐಫೊನ್ 6, ಐಪೋನ್ 6ಎಸ್ ಮುಂತಾದವುಗಳಲ್ಲಿ ವಾಟ್ಸಾಪ್ ನಿಷ್ಕ್ರೀಯಗೊಳ್ಳಲಿದೆ.

ಆಯಂಡ್ರಾಯ್ಡ್ ನಲ್ಲೂ ಕೂಡ 4.0.3 ಆಪರೇಟಿಂಗ್ ಸಿಸ್ಟಂ ಹೊಂದಿರುವ ಡಿವೈಸ್ ಗಳಲ್ಲಿ 2021ರಿಂದ ವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ. ಪ್ರಮುಖವಾಗಿ ಹೆಚ್ ಟಿಸಿ ಡಿಸೈರ್, ಎಲ್ ಜಿ ಆಪ್ಟಿಮಸ್ ಬ್ಲ್ಯಾಕ್, ಮೋಟೋರೋವಾಲ ಡ್ರಾಯ್ಡ್ ರೇಜರ್, ಸ್ಯಾಮ್ ಸಂಗ್ ಗ್ಯಾಲಕ್ಷಿ ಎಸ್2, ಸೇರಿದಂತೆ ಇತರ ಹಳೆಯ ಸ್ಮಾರ್ಟ್ ಫೋನ್ ಗಳಲ್ಲಿ ವಾಟ್ಸಾಪ್ ತನ್ನ ಚಟುವಟಿಕೆಯನ್ನು ನಿಲ್ಲಿಸಲಿದೆ.

ಹೊಸ ಸ್ಮಾರ್ಟ್ ಪೋನ್ ಅಥವಾ ಅಪ್ ಡೇಟೆಡ್ ಸಾಫ್ಟ್ ವೇರ್ ಗಳನ್ನು ಹೊಂದಿರುವ ಡಿವೈಸ್ ಗಳಲ್ಲಿ ವಾಟ್ಸಾಪ್ ಎಂದಿನಂತೆ ಕಾರ್ಯನಿರ್ವಹಿಸಲಿದೆ.

ಇತ್ತೀಚಿಗಷ್ಟೇ ವಾಟ್ಸಾಪ್ ಬಳಕೆದಾರರ ಹಿತದೃಷ್ಟಿಯಿಂದ ಪೇಮೆಂಟ್ ಸರ್ವಿಸ್, ಕಸ್ಟಂ ವಾಲ್ ಪೇಪರ್ಸ್, ಕಸ್ಟಂ ಕಾರ್ಟ್ಸ್, ಆಲ್ವೇಸ್ ಮ್ಯೂಟ್ ಸೇರಿದಂತೆ ಹಲವು ಫೀಚರ್ ಗಳನ್ನು ಜಾರಿಗೆ ತಂದಿತ್ತು.

Comments are closed.