ಭೋಪಾಲ್: ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಟಿಎಂಸಿ ಪಕ್ಷ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಿಡಿ ಕಾರಿದ್ದಾರೆ. ಮಮತಾ ಅವರು ಹುಚ್ಚರಾಗಿದ್ದಾರೆ ಎಂದು ಸಂಸದೆ ದೂರಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಅಧಿಕಾರವನ್ನು ಕಳೆದುಕೊಳ್ಳುವುದು ಮಮತಾ ಅವರಿಗೆ ದೃಢವಾಗಿದೆ. ಅದೇ ಕಾರಣದಿಂದಾಗಿ ಅವರು ಹುಚ ಹುಚ್ಚರಾಗಿದ್ದಾರೆ. ಹಿಂದೂಗಳು ಭಾರತವನ್ನು ರಕ್ಷಿಸಲು ಸಿದ್ಧರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲಿದ್ದು, ಹಿಂದೂ ರಾಜ್ ನಿರ್ಮಾಣವಾಗಲಿದೆ ಎಂದು ಅವರು ಹೇಳಿದ್ದಾರೆ.
ಅದರ ಜತೆ ಧರ್ಮ ಶಾಸ್ತ್ರದ ಬಗ್ಗೆ ಮಾತನಾಡಿದ ಅವರು, ‘ಕ್ಷತ್ರಿಯರಿಗೆ ಕ್ಷತ್ರಿಯರೆಂದರೆ ಬೇಸರವಾಗುವುದಿಲ್ಲ. ಬ್ರಾಹ್ಮಣರಿಗೆ ಬ್ರಾಹ್ಮಣರೆಂದರೆ ಬೇಸರವಾಗುವುದಿಲ್ಲ. ಅದೇ ರೀತಿ ವೈಶ್ಯರಿಗೆ ವೈಶ್ಯರೆಂದರೆ ಬೇಸರವಾಗುವುದಿಲ್ಲ. ಆದರೆ ಶೂದ್ರರಿಗೆ ಶೂದ್ರರೆಂದರೆ ಅವರು ನೋವು ಮಾಡಿಕೊಳ್ಳುತ್ತಾರೆ ಏಕೆಂದರೆ ಅವರಿಗೆ ಅದು ಅರ್ಥವಾಗುವುದಿಲ್ಲ’ ಎಂದು ನುಡಿದಿದ್ದಾರೆ.