ರಾಷ್ಟ್ರೀಯ

‘ಅವನು ಯಾವ ಸೀಮೆ ತಂದೆ?’ ಭಯೋತ್ಪಾದಕಿ ಎಂದ ಅಪ್ಪನಿಗೆ ಶೈಲಾ ರಷೀದ್ ತಿರುಗೇಟು

Pinterest LinkedIn Tumblr


ನವದೆಹಲಿ: ನನ್ನ ಪುತ್ರಿ ಒಬ್ಬ ಭಯೋತ್ಪಾದಕಿ ಎಂದು ಜೆಎನ್​ಯು ಮಾಜಿ ವಿದ್ಯಾರ್ಥಿ ನಾಯಕಿ ಶೈಲಾ ರಷೀದ್‌ ವಿರುದ್ಧ ತಂದೆ ಅಬ್ದುಲ್‌ ರಷೀದ್‌ ಮಾಡಿದ ಆರೋಪಕ್ಕೆ ‘ಅವನ್ಯಾವ ಸೀಮೆ ಅಪ್ಪ?’ ಎಂದು ಕಿಡಿಗಾರಿದ್ದಾರೆ.

ಗಡಿಯಲ್ಲಿ ಕ್ಯಾತೆ ತೆಗೆದ ಚೀನಾಕ್ಕೆ ತಿನ್ನೋ ಅನ್ನಕ್ಕೆ ನಾವೇ ಗತಿ! ಮೊದಲನೇ ಬಾರಿಗೆ ಭಾರತದಿಂದ ಅಕ್ಕಿ ಖರೀದಿಗೆ ಮುಂದಾದ ಚೀನಾ

ನಾನು, ನನ್ನ ಸಹೋದರಿ ಇಬ್ಬರೂ ಅಮ್ಮನನ್ನೇ ಅಪ್ಪ ಅಂದುಕೊಂಡು ಬೆಳೆದಿದ್ದೇವೆ. ಆತ ಯಾವತ್ತಿಗೂ ನಮಗೆ ತಂದೆಯ ರೀತಿಯಲ್ಲಿ ಕಾಣಿಸಿಕೊಂಡೇ ಇಲ್ಲ. ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ನಮ್ಮ ಆತನ ಮಧ್ಯೆ ತಂದೆ ಮಗಳ ಸಂಬಂಧ ಇಲ್ಲವೇ ಇಲ್ಲ ಎಂದು ಶೈಲಾ ರಷೀದ್​ ಹೇಳಿದ್ದಾರೆ.

ತಂದೆ ಎಂದು ಈಗ ದೂರು ಮಾಡಿರುವ ಆತನಿಗೆ ನಾನು ಯಾವಾಗ ಯಾವ ತರಗತಿಯಲ್ಲಿ ಓದುತ್ತಿದ್ದೆ ಎನ್ನುವುದೇ ಗೊತ್ತಿಲ್ಲ. 2017ರಲ್ಲಿ ಸೋಶಿಯಾಲಜಿ ಪಿಎಚ್​ಡಿ ಕೊನೆಯ ಸೆಮಿಸ್ಟರ್​ನಲ್ಲಿದ್ದೆ ಎಂದು ದೂರಿನಲ್ಲಿ ಬರೆದಿದ್ದಾನೆ. ಆದರೆ ಗೂಗಲ್​ ಸರ್ಚ್​ ಮಾಡಿದರೆ ನನ್ನ ವಿದ್ಯಾಭ್ಯಾಸದ ಸರಿಯಾದ ಮಾಹಿತಿ ಸಿಗುತ್ತದೆ. ನನ್ನ ಎನ್​ಜಿಒಗಳ ಮೇಲೆ ತನಿಖೆಯಾಗಬೇಕು ಎಂದು ಹೇಳಿದ್ದಾನೆ. ನಾನು ಯಾವುದೇ ಎನ್​ಜಿಒ ಹೊಂದಿಲ್ಲ. ಆದರೆ ಆತ ನನಗೆ 3 ಎನ್​ಜಿಒ ಇರುವುದಾಗಿ ತಿಳಿಸಿದ್ದಾನೆ. ನನ್ನನ್ನು ಗೌಪ್ಯವಾಗಿ ತನಿಖೆ ಮಾಡಿದರೂ ಯಾವುದೇ ಎನ್​ಜಿಒ ಜತೆಗೆ ನನಗೆ ಸಂಪರ್ಕ ಇಲ್ಲ ಎಂದೇ ತಿಳಿಯುತ್ತದೆ ಎಂದು ಆಕೆ ಹೇಳಿದ್ದಾರೆ.

ಆತ ಅಪ್ಪನಾಗಿ ಮಾಡಿದ್ದೇನು ಇಲ್ಲ. ನನ್ನ ಅಮ್ಮನಿಗೆ ಯಾವಾಗಲೂ ಹಿಂಸೆ ಕೊಡುತ್ತಿದ್ದ. ಆಕೆಗೆ ದೈಹಿಕ ಹಲ್ಲೆ ಮಾಡಿ ಹಣಕ್ಕಾಗಿ ಪೀಡಿಸುತ್ತಿದ್ದ. ನನ್ನ ಅಮ್ಮ 32 ವರ್ಷಗಳ ಕಾಲ ಸರ್ಕಾರಿ ಕೆಲಸ ಮಾಡಿ ನನ್ನನ್ನು ಮತ್ತು ನನ್ನ ಸಹೋದರಿಯನ್ನು ಸಾಕಿದ್ದಾರೆ. ಅವರ ಬೆವರಿನ ಫಲವಾಗಿ ನಾವು ಇಂದು ಹೀಗಿದ್ದೇವೆ ಎಂದು ಶೈಲಾ ನುಡಿದಿದ್ದಾರೆ.

Comments are closed.