
ನವದೆಹಲಿ: ಕೊರೋನಾ ವಿರುದ್ಧದ ಲಸಿಕೆ ಫೀಜರ್ಗೆ ಬ್ರಿಟನ್ ಅನುಮೋದನೆ ನೀಡಿದೆ. ಲಸಿಕೆಗೆ ಔಪಚಾರಿಕ ಅನುಮೋದನೆ ನೀಡಿದ ಪ್ರಥಮ ದೇಶ ಬ್ರಿಟನ್ ಆಗಿದೆ.
ಫಿಜರ್ ಬಯೋಟೆಕ್ ಲಸಿಕೆಗೆ ಬ್ರಿಟನ್ನ ಔಷಧಿ ಹಾಗೂ ಆರೋಗ್ಯ ನಿಯಂತ್ರಣ ಸಂಸ್ಥೆ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಪ್ರಯೋಗದ ವೇಳೆ 95 ಶೇಕಡಾ ಪರಿಣಾಮಕಾರಿ ಎಂದು ಸಾಬೀತುಪಡಿಸಿದ ಫಿಜರ್ ಮುಂದಿನ ವಾರದಿಂದ ಬಳಕೆಗೆ ಲಭ್ಯವಿರಲಿದೆ.
ಮುಂದಿನ ವಾರದಿಂದ ಬ್ರಿಟನ್ನಲ್ಲಿ ಕೊರೊನಾ ಲಸಿಕೆ ಸಿಗಲಿದೆ. ಈ ಲಸಿಕೆ ಮೂಲಕ ನಮ್ಮ ಜೀವನವನ್ನ ಪುನರ್ಸ್ಥಾಪಿಸುತ್ತೇವೆ ಅಂತಾ ಬ್ರಿಟನ್ ಅಧ್ಯಕ್ಷ ಬೋರಿಸ್ ಜಾನ್ಸನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Comments are closed.