ನವದೆಹಲಿ: 200 ರೂ ಸಾಲ ನೀಡದ ಆರೋಪದ ಮೇಲೆ ಉತ್ತರ ಪ್ರದೇಶದ ಅಲಿಗಡ್ ದ ಸಿವಿಲ್ ಲೈನ್ಸ್ ಪ್ರದೇಶದ ಜನಸಂದಣಿಯ ಮಾರುಕಟ್ಟೆಯಲ್ಲಿ 30 ವರ್ಷದ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆಯೊಂದು ವರದಿಯಾಗಿದೆ.
ಮೂವರ ಮಕ್ಕಳ ತಂದೆಯಾದ ಅನ್ಸಾರ್ ಅಹ್ಮದ್, ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ಶಂಶಾದ್ ಮಾರುಕಟ್ಟೆಯಲ್ಲಿ ಟೈರ್ ರಿಪೇರಿ ಅಂಗಡಿಯೊಂದನ್ನು ಹೊಂದಿದ್ದು, ಶನಿವಾರ ಅವನನ್ನು ಆಸಿಫ್ ಎನ್ನುವವನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮಾದಕ ವ್ಯಸನಿಯಾಗಿದ್ದು, ಅಪರಾಧ ಎಸಗಿದ ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ನಗರ) ಅಭಿಷೇಕ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.ಪೊಲೀಸರ ಪ್ರಕಾರ, ಆಸಿಫ್ ವನ್ನು ಸಾಲ ಬಯಸಿ ಶನಿವಾರ ಅಹ್ಮದ್ ಅವರನ್ನು ಸಂಪರ್ಕಿಸಿದ್ದಾನೆ, ಆದರೆ, ಅವನ ಈ ವಿನಂತಿಯನ್ನು ತಿರಸ್ಕರಿಸಲಾಗಿದೆ.
ಇದಾದ ನಂತರ ಮತ್ತೆ ಆಸಿಫ್ ಅಹ್ಮದ್‌ನ ಅಂಗಡಿಗೆ ಧಾವಿಸಿ ಅವನಿಂದ ₹ 200 ಬೇಡಿಕೆ ಇಟ್ಟನು. ಆಗ ನಿರಾಕರಿಸಿದ್ದಕ್ಕೆ ತಕ್ಷಣ, ಆಸಿಫ್ ತನ್ನ ಜೇಬಿನಿಂದ ಪಿಸ್ತೂಲ್ ತೆಗೆದುಕೊಂಡು ಅಹ್ಮದ್ ತಲೆಗೆ ಗುಂಡು ಹಾರಿಸಿ ಹತ್ತಿರದಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನದ ಮೂಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.