ರಾಷ್ಟ್ರೀಯ

ಕೊರೋನಾ ನಿರೋಧಕ ಲಸಿಕೆಯಿಂದ ‘ಅಡ್ಡಪರಿಣಾಮ’ದ ಆರೋಪ: ಪುಣೆ ಮೂಲದ ಸೀರಂ ಸಂಸ್ಥೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ

Pinterest LinkedIn Tumblr


ಪುಣೆ ಮೂಲದ ಸೀರಂ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕೋವಿಡ್-19 ನಿರೋಧಕ ಲಸಿಕೆ ವಿರುದ್ಧ ನ್ಯಾಯಾಂಗ ಸಮರವೊಂದು ಆರಂಭಗೊಂಡಿದೆ.

‘ಕೋವಿಶೀಲ್ಡ್‌’ ಹೆಸರಿನಲ್ಲಿ ಸೀರಮ್ ಕಂಪನಿ ಅಭಿವೃದ್ಧಿಪಡಿಸಿರುವ ಲಸಿಕೆಯ ಪ್ರಯೋಗಾತ್ಮಕ ಪರೀಕ್ಷೆಯಲ್ಲಿ ಸ್ವಯಂಪ್ರೇರಣೆಯಿಂದ ಭಾಗಿಯಾದ 40 ವರ್ಷದ ವ್ಯಕ್ತಿಯೊಬ್ಬರು, ಈ ಲಸಿಕೆಯಿಂದ ತಮಗೆ ಗಂಭೀರವಾದ ಆರೋಗ್ಯ ಸಮಸ್ಯೆ ಎದುರಾಗಿದೆ ಎಂದು ಆಪಾದಿಸಿದ್ದಾರೆ.

ಲಸಿಕೆ ಕಾರಣದಿಂದ ತಮ್ಮ ನರಮಂಡಲದ ವ್ಯವಸ್ಥೆಯಲ್ಲಿ ಭಾರೀ ಸಮಸ್ಯೆಯಾಗಿದೆ ಎಂದು ಆಪಾದಿಸಿರುವ ಈ ವ್ಯಕ್ತಿ, 5 ಕೋಟಿ ರೂ.ಗಳ ಪರಿಹಾರ ಕೋರಿ ಸೀರಮ್ ವಿರುದ್ಧ ಕೋರ್ಟಿನ ಮೆಟ್ಟಿಲೇರಿದ್ದಾರೆ.

ಇದೇ ವೇಳೆ, ಕೋವಿಡ್-19 ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಇನ್ನಿತರ ಸಂಸ್ಥೆಗಳಾದ ಅಸ್ಟ್ರಾಜೆಂಕಾ ಹಾಗೂ ಆಕ್ಸ್‌ಫರ್ಡ್ ವ್ಯಾಕ್ಸಿನ್ ಸಮೂಹದ ವಿರುದ್ಧವೂ ಸಹ ಇದೇ ವ್ಯಕ್ತಿ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಭಾರತದಲ್ಲಿ ಈ ಸಂಸ್ಥೆಗಳು ತಮ್ಮ ಕೋವಿಡ್-19 ನಿರೋಧಕ ಲಸಿಕೆಗಳನ್ನು 1600 ಮಂದಿ ಮೇಲೆ ಪ್ರಯೋಗ ಮಾಡುತ್ತಿದ್ದು, ಇದಕ್ಕೆ ತಡೆಯೊಡ್ಡಬೇಕೆಂದು ಸಂತ್ರಸ್ತರು ಕೇಳಿಕೊಂಡಿದ್ದಾರೆ.

ಈ ವ್ಯಕ್ತಿಗೆ ವಿಟಮಿನ್ ಬಿ12 ಹಾಗೂ ವಿಟಮಿನ್ ಡಿ ಕೊರತೆ ಇರುವ ಕಾರಣ ಸಂಪರ್ಕ ಅಂಗಾಂಶಗಳಲ್ಲಿ ಸಮಸ್ಯೆ ಇದ್ದು, ಅವರಿಗೆ ಎನ್ಸೆಪಾಲೋಪತಿ ಸಮಸ್ಯೆ ಇದ್ದಿದ್ದಾಗಿ ಆಸ್ಪತ್ರೆಯ ಡಿಸ್ಚಾರ್ಜ್ ವರದಿ ತಿಳಿಸುತ್ತಿದೆ.

ಚೆನ್ನೈನಲ್ಲಿರುವ ಶ್ರೀ ರಾಮಚಂದ್ರ ವೈದ್ಯಕೀಯ ಸಂಸ್ಥೆಯಲ್ಲಿ ಸ್ವಯಂ ಪ್ರೇರಣೆಯಿಂದ ಈ ವ್ಯಕ್ತಿ ಕೋವಿಡ್-19 ನಿರೋಧಕ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ತಮ್ಮನ್ನು ತಾವು ಒಡ್ಡಿಕೊಂಡಿದ್ದರು.

ಈ ವ್ಯಕ್ತಿಗೆ ಉಂಟಾಗಿರುವ ಆರೋಗ್ಯದ ಸಮಸ್ಯೆಯು ಕೋವಿಡ್-19 ಲಸಿಕೆಯ ಪ್ರಯೋಗದಿಂದ ಆಗಿಲ್ಲವೆಂದಿರುವ ಆಸ್ಪತ್ರೆಯ ವಕ್ತಾರ ಡಾ. ರಾಮಕೃಷ್ಣನ್, ಈ ಕುರಿತಂತೆ ಭಾರತೀಯ ಮದ್ದು ನಿಯಂತ್ರಕ ಲೇಖಪಾಲರಿಗೆ (ಡಿಜಿಸಿಐ) ವರದಿ ಕೊಟ್ಟಿರುವುದಾಗಿ ತಿಳಿಸಿದ್ದಾರೆ.

Comments are closed.