ರಾಷ್ಟ್ರೀಯ

14ನೆ ವಯಸ್ಸಿಗೆ ಪದವಿ ವ್ಯಾಸಂಗ ಪೂರ್ಣಗೊಳಿಸಿದ ಪೋರ

Pinterest LinkedIn Tumblr


ಹೈದರಾಬಾದ್: ಅಗಸ್ತ್ಯ ಜೈಸ್ವಾಲ್ ಎಂಬ ಪೋರ 14ನೇ ವಯಸ್ಸಿನಲ್ಲಿ ಪದವಿ ವ್ಯಾಸಂಗ ಮುಗಿಸಿ ಎಲ್ಲರನ್ನು ಆಚ್ಚರಿಗೊಳಿಸಿದ್ದಾರೆ.

ಅಗಸ್ತ್ಯ ಈ ಸಾಧನೆ ಮಾಡಿದ ಮೊದಲ ಭಾರತೀಯ ವಿದ್ಯಾರ್ಥಿ ಎಂದೂ ಕೂಡ ಹೇಳಲಾಗುತ್ತಿದೆ. ಮಕ್ಕಳು ಶಾಲಾಭ್ಯಾಸ ಮಾಡುವ ವಯಸ್ಸಿನ್ಗಲ್ಲಿಯೇ ಅಗಸ್ತ್ಯ ಹೈದ್ರಾಬಾದ್ (Hyderabad) ನ ಓಸ್ಮಾನಿಯಾ ಯುನಿವರ್ಸಿಟಿಯಿಂದ (Osmania University) BA ಮಾಸ್ ಕಮ್ಯೂನಿಕೇಶನ್ ಹಾಗೂ ಜರ್ನಲಿಸಂ ಪದವಿ ಪಡೆದಿದ್ದಾರೆ.

ಅಗಸ್ತ್ಯ ಇಂತಹ ಸಾಧನೆ ಮಾಡಿರುವುದು ಇದೆ ಮೊದಲಲ್ಲ. ಇದಕ್ಕೂ ಮೊದಲು 9ನೇ ವರ್ಷ ವಯಸ್ಸಿನಲ್ಲಿ ಅಗಸ್ತ್ಯ ತೆಲಂಗಾಣ ಬೋರ್ಡ್ ಆಯೋಜಿಸುವ 10ನೇ ತರಗತಿ ಹಾಗೂ 11ನೇ ವರ್ಷದಲ್ಲಿ 12ನೇ ತರಗತಿಯ ಪರೀಕ್ಷೆಗಳನ್ನು ಪಾಸ್ ಮಾಡಿದ್ದಾನೆ. ಇದಲ್ಲದೆ ಅಗಸ್ತ್ಯ ರಾಷ್ಟ್ರೀಯ ಮಟ್ಟದ ಟೇಬಲ್ ಟೆನ್ನಿಸ್ ಆಟಗಾರ ಕೂಡ ಆಗಿದ್ದಾನೆ.

ಅಗಸ್ತ್ಯ ತನ್ನ ಎರಡು ಕೈಗಳನ್ನು ಬಳಸಿ ಕೇವಲ 1.72 ಸೆಕೆಂಡ್ ಗಳಲ್ಲಿ A ಟು Z ಟೈಪ್ ಮಾಡಬಲ್ಲರು. ಇದಲ್ಲದೆ ಅಗಸ್ತ್ಯ ಸುಮಧುರ ಕಂಠದ ಮಾಲೀಕ ಕೂಡ ಆಗಿದ್ದಾನೆ. ಅಗಸ್ತ್ಯ ಓರ್ವ ಇಂಟರ್ನ್ಯಾಷನಲ್ ಮೋಟಿವೇಷನಲ್ ಸ್ಪೀಕರ್ ಕೂಡ ಆಗಿದ್ದಾನೆ. ಆದರೆ, ಇವೆಲ್ಲವುಗಳನ್ನು ಹೊರತುಪಡಿಸಿ ಅಗಸ್ತ್ಯ ಓರ್ವ ವೈದ್ಯನಾಗುವ ಕನಸು ಕಾಣುತ್ತಾನೆ.

ಅಗಸ್ತ್ಯನ ಈ ಸಾಧನೆಯಿಂದ ಆತನ ಪೋಷಕರು ಕೂಡ ತುಂಬಾ ಖುಷಿಯಾಗಿದ್ದಾರೆ. ಪ್ರತಿಯೊಂದು ಮಗುವಿನಲ್ಲಿ ಒಂದು ವಿಶೇಷ ಗುಣ ಇರುತ್ತದೆ. ಹೀಗಾಗಿ ತಂದೆ-ತಾಯಿಯರು ತಮ್ಮ ಮಕ್ಕಳ ಮೇಲೆ ವೈಯಕ್ತಿಕ ಗಮನ ನೀಡಿದರೆ ಪ್ರತಿಯೊಂದು ಮಗು ತನ್ನ ಕ್ಷೇತ್ರದಲ್ಲಿ ಇತಿಹಾಸ ಬರೆಯಬಲ್ಲದು ಎಂದು ಅಗಸ್ತ್ಯ ಪೋಷಕರು ಹೇಳುತ್ತಾರೆ. ಅಗಸ್ತ್ಯ ತನ್ನ 2 ವರ್ಷ ವಯಸ್ಸಿನಿಂದಲೂ ಕೂಡ ಕಮಾಲ್ ಮಾಡುತ್ತಲೇ ಇದ್ದಾರೆ. ತನ್ನ ಎರಡನೇ ವಯಾಸಿನಲ್ಲಿ 300ಕ್ಕೂ ಅಧಿಕ ಪ್ರಶ್ನೆಗಳ ಉತ್ತರ ನೀಡಿದ್ದರು. ಬಳಿಕ ಪೋಷಕರು ಅವರಿಗೆ ಗೈಡೆನ್ಸ್ ನೀಡಿದ್ದಾರೆ.

ಈ ಕುರಿತು ಹೇಳಿಕೆ ನೀಡುವ ಅಗಸ್ತ್ಯ ಪೋಷಕರು ನಾವು ಅಗಸ್ತ್ಯನನ್ನು ಆಟವಾಡುವ ವಾತಾವರಣದಲ್ಲಿಯೇ ಶಿಕ್ಷಣ ನೀಡಿದ್ದೇವೆ. ವಿಷಯಗಳನ್ನು ಅರಿತು ತಮ್ಮ ಭಾಷೆಯಲ್ಲಿಅದನ್ನು ಪ್ರಸ್ತುತಪಡಿಸಲು ಹೇಳಿ ಕೊಟ್ಟಿದ್ದೇವೆ. ಯಾವಾಗಲು ಅಗಸ್ತ್ಯ ನಮಗೆ ಹಲವು ಪ್ರಶ್ನೆಗಳನ್ನು ಕೇಳುತ್ತಾನೆ. ಆದರೆ, ಅದಕ್ಕೆ ನಾವು ಪ್ರ್ಯಾಕ್ಟಿಕಲ್ ರೂಪದಲ್ಲಿ ಉತ್ತರಿಸುತ್ತೇವೆ. ಇದರ ಜೊತೆಗೆ ನಾವು ಅವನಿಗೆ ಬರವಣಿಗೆ ಹಾಗೂ ಸ್ಮೃತಿ ಅಭ್ಯಾಸ ಕೂಡ ಹೇಳಿಕೊಟ್ಟಿದ್ದೇವೆ.

Comments are closed.