ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹಣ ಕಳಿಸುವ ವ್ಯವಸ್ಥೆಗೆ ಗೂಗಲ್ ಪೇ ಅನ್ನು ಜನ ನೆಚ್ಚಿಕೊಂಡಿದ್ದಾರೆ. ಆದರೆ ಗೂಗಲ್ ಪೇ ತನ್ನ ಬಳಕೆದಾರರಿಗೆ ಶಾಕ್ ನೀಡಲು ಮುಂದಾಗಿದ್ದು,ಗೂಗಲ್ ಪೇ ಮೂಲಕ ಉಚಿತವಾಗಿ ಹಣ ಕಳುಹಿಸುವ ವ್ಯವಸ್ಥೆ ಶೀಘ್ರದಲ್ಲೇ ಸ್ಥಗಿತಗೊಳ್ಳಲಿದೆ ಎನ್ನಲಾಗುತ್ತಿದೆ.

ಗೂಗಲ್ ಪೇ ವ್ಯವಸ್ಥೆ ಮುಂದೆ ಉಚಿತವಾಗಿ ಲಭಿಸುವುದಿಲ್ಲ ಎಂಬ ಮಾಹಿತಿಯಿದ್ದು, ಸದ್ಯದಲ್ಲೇ ಗೂಗಲ್ ಪೇ ಮೂಲಕ ಹಣ ಕಳುಹಿಸುವುದಕ್ಕೂ ಶುಲ್ಕ ಪಡೆಯಲಾಗುತ್ತೆ. ಆದರೆ ಗ್ರಾಹಕರಿಗೆ ಎಷ್ಟು ಶುಲ್ಕ ವಿಧಿಸಲಾಗುತ್ತೆ ಎನ್ನುವುದನ್ನು ಮಾತ್ರ ಗೂಗಲ್ ಪೇ ಬಹಿರಂಗಪಡಿಸಿಲ್ಲ.
2021ರ ಜನವರಿಯಿಂದ ಸದ್ಯದ ಹಣ ವರ್ಗಾವಣೆ ವ್ಯವಸ್ಥೆಯನ್ನ ಗೂಗಲ್ ಪೇ ಸ್ಥಗಿತಗೊಳಿಸಲಿದ್ದು, ಬದಲಿಗೆ ಇನ್ಸ್ಟಂಟ್ ಮನಿ ಟ್ರಾನ್ಸ್ಫರ್ ಸಿಸ್ಟಮ್ ಅಳವಡಿಸಲಿದೆ. ಆ ಬಳಿಕ ಹಣ ವರ್ಗಾವಣೆಗೆ ಶುಲ್ಕ ವಿಧಿಸಲಾಗುತ್ತೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
Comments are closed.