ರಾಷ್ಟ್ರೀಯ

ಈ ರಾಜ್ಯದಲ್ಲಿ ಲವ್ ಜಿಹಾದ್ ಹಾಗೂ ಮತಾಂತರ ಅಪರಾಧಕ್ಕೆ ಕಠಿಣ ಶಿಕ್ಷೆ

Pinterest LinkedIn Tumblr


ಲಕ್ನೋ: ಉತ್ತರ ಪ್ರದೇಶದ ಸರ್ಕಾರ ಲವ್​ ಜಿಹಾದ್ ಹಾಗೂ ಮತಾಂತರ ಅಪರಾಧಕ್ಕೆ ಕಠಿಣ ಶಿಕ್ಷೆಯ ಕಾನೂನು ತಂದಿದೆ.

ಲವ್ ಜಿಹಾದ್ ಮತ್ತು ಮತಾಂತರ ಅಪರಾಧ ಪ್ರಕರಣಗಳಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಸುಗ್ರಿವಾಜ್ಞೆ ಜಾರಿ ಮಾಡಿದೆ. ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಒಪ್ಪಿಗೆ ಪಡೆದು ಕಾನೂನು ರೂಪಿಸುವ ನಿರ್ಧಾರಕ್ಕೆ ಯೋಗಿ ಆದಿತ್ಯನಾಥ್ ಬಂದಿದ್ದಾರೆ. ಕಾನೂನು ಬಾಹಿರ ಧಾರ್ಮಿಕ ಮತಾಂತರ ನಿರ್ಬಂಧ ಕಾಯ್ದೆ ಸುಗ್ರಿವಾಜ್ಞೆಗೆ ಯೋಗಿ ಸಂಪುಟ ಒಪ್ಪಿಗೆ ಕೊಟ್ಟಿದೆ.

ಒಂದು ವರ್ಷದಿಂದ 10 ವರ್ಷ ಜೈಲು, 15 ಸಾವಿರದಿಂದ 50 ಸಾವಿರ ರೂಪಾಯಿವರಗೆ ದಂಡ ವಿಧಿಸುವ ಅವಕಾಶ ಈ ಕಾನೂನಿನಲ್ಲಿದೆ. ಉತ್ತರ ಪ್ರದೇಶದಲ್ಲಿ 100ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ತರೋದಾಗಿ ಯೋಗಿ ಆದಿತ್ಯನಾಥ್ ತಿಳಿಸಿದ್ರು. ಧಾರ್ಮಿಕ ವಿಚಾರಕ್ಕೆ ಬಲವಂತದ ಮತಾಂತರ ಮಾಡುವ ಪ್ರಕರಣಗಳನ್ನ ನಿಯಂತ್ರಿಸಲು ಅಲಹಾಬಾದ್​ ಹೈಕೋರ್ಟ್​ಆದೇಶಿಸಿತ್ತು.

Comments are closed.