ರಾಷ್ಟ್ರೀಯ

ಜಮ್ಮುವಿನ ಬಾನ್ ಟೋಲ್ ಪ್ಲಾಜಾ ಬಳಿ ಎನ್‌ಕೌಂಟರ್‌- 4 ಭಯೋತ್ಪಾದಕರ ಹತ್ಯೆ

Pinterest LinkedIn Tumblr

ಶ್ರೀನಗರ: ಜಮ್ಮುವಿನಲ್ಲಿ ಗುರುವಾರ ಬೆಳ್ಳಂಬೆಳಿಗ್ಗೆ ಶಂಕಿತ ಉಗ್ರರ ಮೇಲೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್ ದಾಳಿಯಲ್ಲಿ ನಾಲ್ವರನ್ನು ಹತ್ಯೆ ಮಾಡಲಾಗಿದೆ.

ಜಮ್ಮುವಿನ ನಗ್ರೋಟಾದಲ್ಲಿನ ಬಾನ್ ಟೋಲ್ ಪ್ಲಾಜಾದ ಬಳಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಗುರುವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿ ನಾಲ್ವರನ್ನು ಹೊಡೆದುರುಳಿಸಿದೆ. ನಸುಕಿನ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕಾರ್ಯಾಚರಣೆಯ ಸಲುವಾಗಿ ಭದ್ರತಾ ಪಡೆಗಳು ಮೊದಲೇ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಿದ್ದರು.

ಬಾನ್ ಟೋಲ್ ಪ್ಲಾಜಾದ ಬಳಿ ನಾಕಾ ಬಂದಿ ಹಾಕಿದ್ದ ಭದ್ರತಾ ಪಡೆಗಳು ಅಲ್ಲಿ ಸಾಗುವ ಪ್ರತಿ ವಾಹನಗಳನ್ನೂ ತಪಾಸಣೆ ನಡೆಸುತ್ತಿದ್ದರು. ಆಗ ಭಯೋತ್ಪಾದಕರ ಗುಂಪೊಂದು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದೆ. ಸಮೀಪದ ಅರಣ್ಯ ಪ್ರದೇಶದೊಳಗೆ ನುಗಿದ್ದ ಭಯೋತ್ಪಾದಕರ ಮೇಲೆ ಎನ್‌ಕೌಂಟರ್ ಮಾಡಲಾಗಿದೆ.

Comments are closed.