ರಾಷ್ಟ್ರೀಯ

ಭಕ್ತರಿಗೆ ಪೋ’ರ್ನ್‌ ವಿಡಿಯೋದ ಲಿಂಕ್‌ ಕಳುಹಿಸಿದ ತಿರುಪತಿ ದೇವಾಲಯದ ಚಾನೆಲ್‌ನ ಸಿಬ್ಬಂದಿ!

Pinterest LinkedIn Tumblr


ತಿರುಪತಿ: ತಿರುಪತಿ ದೇವಸ್ಥಾನದ ಸಿಬ್ಬಂದಿ ದೇವಾಲಯದ ಭಕ್ತರಿಗೆ ಅ’ಶ್ಲೀ’ಲ ವಿಡಿಯೋದ ಲಿಂಕ್‌ ಕಳಿಸಿರುವ ಘಟನೆ ವರದಿಯಾಗಿದೆ.

ತಿರುಮಲ ದೇವಾಲಯದಿಂದ ಪ್ರಸಾರವಾಗುವ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್‌ನಲ್ಲಿ ಪ್ರತಿನಿತ್ಯ ತಿರುಪತಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಪ್ರಸಾರವಾಗುತ್ತಿರುತ್ತವೆ. ಜೊತೆಗೆ ಭಕ್ತರ ಮೊಬೈಲ್‌ಗಳಿಗೆ ಇಮೇಲ್‌ ಮೂಲಕ ದೇವರ ಸ್ತುತಿ, ಧಾರ್ಮಿಕ ಪ್ರಧಾನ ಕಾರ್ಯಕ್ರಮಗಳು ಲಿಂಕ್‌ಗಳನ್ನು ಕಳಿಸಲಾಗುತ್ತಿರುತ್ತದೆ. ಅದರಂತೆ ಇತ್ತೀಚೆಗೆ ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್‌ನ ಸಿಬ್ಬಂದಿ ಹೈದರಾಬಾದ್‌ ಮೂಲದ ಭಕ್ತರೊಬ್ಬರಿಗೆ ಪೋ’ರ್ನ್‌ ವಿಡಿಯೋದ ಲಿಂಕ್ ಕಳಿಸಿದ್ದು, ಈ ಸಂಬಂಧ ಆಂತರಿಕ ತ’ನಿಖೆ ನಡೆಸುವಂತೆ ದೇವಾಲಯದ ಆಡಳಿತ ಮಂಡಳಿ ಸೂಚಿಸಿದೆ.

ದೇವಾಲಯದ ಅಧಿಕೃತ ಇಮೇಲ್‌ನಿಂದಲೇ ಅ’ಶ್ಲೀ’ಲ ಸಂದೇಶವನ್ನು ಕಳಿಸಲಾಗಿದ್ದು, ಇದರಿಂದ ಅಚ್ಚರಿಗೊಳಗಾದ ಭಕ್ತರು ಟಿಟಿಡಿಯ ಉನ್ನತ ಮೂಲಗಳಿಗೆ ಮಾಹಿತಿ ರವಾನಿಸಿದ್ದಾರೆ. ಟಿಟಿಡಿ ಮಂಡಳಿ ಟೈಮ್ಸ್‌ ಆಫ್‌ ಇಂಡಿಯಾಗೆ ನೀಡಿರೋ ಮಾಹಿತಿ ಪ್ರಕಾರ ತನ್ನ ತಂದೆಯ ಸಾ’ವಿನ ನಂತರ ಅನುಕಂಪದ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬ ದೇವಳದ ಭಕ್ತರಿಗೆ ಅ’ಶ್ಲೀ’ಲ ವಿಡಿಯೋ ಕಳಿಸಿದ್ದು ಎಂದು ಹೇಳಲಾಗಿದೆ.

ಎಸ್‌ವಿಬಿಸಿ(ಶ್ರೀ ವೆಂಕಟರಮಣ ಭಕ್ತಿ ಚಾನೆಲ್‌)ನ ಅಧಿಕೃತ ಈ ಮೇಲ್‌ ಖಾತೆಯನ್ನು ನಿರ್ವಹಿಸುತ್ತಿದ್ದ ಆ’ರೋ’ಪಿಯು, ಲಿಂಕ್‌ ಕಳುಹಿಸುವ ವೇಳೆ ಪ್ರ’ಚೋ’ದನಾತ್ಮಕ ಸ್ಥಿ’ತಿಯಲ್ಲಿದ್ದನು ಎನ್ನಲಾಗಿದೆ. ವಿಚಾರಣೆ ವೇಳೆ ಇನ್ನಷ್ಟು ಅಚ್ಚರಿಯ ವಿಷಯಗಳು ಹೊರಬಂದಿದ್ದು, ಎಸ್‌ವಿಬಿಸಿ ಚಾನೆಲ್‌ನ ಮೂವತ್ತಕ್ಕೂ ಹೆಚ್ಚು ಸಿಬ್ಬಂದಿ ಕಚೇರಿ ವೇಳೆ ಕಂಪ್ಯೂಟರ್‌ನಲ್ಲಿ ಅ’ಶ್ಲೀ’ಲ ವಿಡಿಯೋಗಳು, ಸಿನಿಮಾ, ಧಾರಾವಾಹಿಗಳನ್ನು ವೀಕ್ಷಿಸಿರುವುದು ಕಚೇರಿಯ ಐಟಿ ವಿಭಾಗ ಪರಿಶೀಲನೆ ನಡೆಸಿದ ವೇಳೆ ಬಹಿರಂಗಗೊಂಡಿದೆ. ಅಲ್ಲದೇ ಕಂಪ್ಯೂಟರ್‌ನ ಹಿಸ್ಟರಿ ಲಿಸ್ಟ್‌ ಪರಿಶೀಲಿಸಿದಾಗ ಹಲವಾರು ಪೋ’ರ್ನ್‌ ಸೈಟ್‌ಗಳನ್ನು ವೀಕ್ಷಣೆ ಮಾಡಿರುವುದು ತಿಳಿದುಬಂದಿದೆ.

ಇನ್ನು ಎಸ್‌ವಿಬಿಸಿ ಚಾನೆಲ್‌ನ ಮಹಿಳಾ ಸಿಬ್ಬಂದಿಯೊಬ್ಬರು ಆಫೀಸ್‌ನ ಕಂಪ್ಯೂಟರ್‌ ಬಳಸಿ ಲೈಂ’ಗಿ’ಕ ಆಟಿಕೆಗೆ(ಸೆ’ಕ್ಸ್‌ ಟಾ’ಯ್ಸ್‌) ಆರ್ಡರ್‌ ನೀಡಿದ್ದರು ಎಂದು ತಿಳಿದುಬಂದಿದೆ. ತ’ನಿ’ಖಾ ತಂಡ ಈಗಾಗಲೇ ಕಚೇರಿಯ ಕಂಪ್ಯೂಟರ್‌ಗಳನ್ನು ವ’ಶಪಡಿಸಿಕೊಂಡಿದ್ದು ಪ್ರಾಥಮಿಕ ತ’ನಿ’ಖೆಯ ವರದಿ ನೀಡುವ ನಿರೀಕ್ಷೆಯಲ್ಲಿದೆ.

ಇದೇ ವರ್ಷ ಜನವರಿಯಲ್ಲಿ ಶ್ರೀ ವೆಂಕಟರಮಣ ಭಕ್ತಿ ಚಾನೆಲ್‌ನ ಅಧ್ಯಕ್ಷರಾಗಿದ್ದ ರಾಜಕಾರಣಿ ಮತ್ತು ನಟರಾಗಿರೋ ಪೃಥ್ವಿರಾಜ್‌ ಅವರು ಚಾನೆಲ್‌ನ ಮಹಿಳಾ ಸಿಬ್ಬಂದಿಯೊಂದಿಗೆ ನಡೆಸಿದ್ದ ಸ’ರ’ಸ ಸ’ಲ್ಲಾಪದ ಮಾತುಕತೆ ಬಹಿರಂಗಗೊಂಡ ಹಿನ್ನೆಲೆ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು.

Comments are closed.