ಅಂತರಾಷ್ಟ್ರೀಯ

ರಾಹುಲ್ ಗಾಂಧಿ ಪುಕ್ಕಲ ಸ್ವಾಭಾವದ ವ್ಯಕ್ತಿ: ಬರಾಕ್ ಒಬಾಮಾ

Pinterest LinkedIn Tumblr


ನವದೆಹಲಿ: ರಾಹುಲ್ ಗಾಂಧಿ ಒಬ್ಬ ಪುಕ್ಕಲ ಸ್ವಾಭಾವದ ವ್ಯಕ್ತಿ, ಅವರಿಗೆ ಪಾಂಡಿತ್ಯದ ಕೊರತೆ ಇದೆ, ನರ್ವಸ್ ಆಗಿರುವ ಹಾಗೂ ರೂಪುಗೊಳ್ಳದ ವ್ಯಕ್ತಿಯ ಗುಣ ರಾಹುಲ್ ನಲ್ಲಿದೆ ಅಂತ ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ತಾನು ಬರೆದ A promised Land Barak Obama ಪುಸ್ತಕದಲ್ಲಿ ಹೇಳಿದ್ದಾರೆ.

2014ರಲ್ಲಿ ಭಾರತಕ್ಕೆ ಬಂದ ಒಬಾಮ ರಾಹುಲ್ ಗಾಂಧಿಯನ್ನು ಭೇಟಿಯಾಗಿದ್ದರು. ಈ ಭೆಟಿಯಾದ ನಂತರ ಒಬಾಮ ರಾಹುಲ್ ರ ಗುಣವನ್ನು ತನ್ನ ಪುಸ್ತಕದಲ್ಲಿ ಕಟುವಾಗಿ ವಿಶ್ಲೇಷಿಸಿದ್ದಾರೆ. ತಾನು ಬರೆದ ಪುಸ್ತಕದಲ್ಲಿ ವಿಶ್ವದ ಹಲವಾರು ನಾಯಕರನ್ನು ವಿಶ್ಲೇಷಿಸಿದ ಒಬಾಮ ರಾಹುಲ್ ಗಾಂಧಿ, ಮನಮೋಹನ್ ಸಿಂಗ್ ರ ಕುರಿತಾಗಿಯೂ ಬರೆದಿದ್ದಾರೆ. ಸದ್ಯ ರಾಹುಲ್ ಗಾಂಧಿಯವರ ಬಗ್ಗೆ ಬರೆದ ವಿಷಯ ಟ್ವಿಟರ್ ನಲ್ಲಿ ಟ್ರೆಂಡ್ ಆಗಿದೆ.

ಟ್ಯೂಶನ್ ಪಡೆದು ಶಿಕ್ಷಕರನ್ನು ಮೆಚ್ಚಿಸುವ ವಿದ್ಯಾರ್ಥಿಯಂತೆ ರಾಹುಲ್ ಇದ್ದಾರೆ. ಅಂತರಾಳದಲ್ಲಿ ಇವರಿಗೆ ಯಾವುದೇ ವಿಷಯದ ಬಗ್ಗೆ ಪರಿಣಿತಿ ಪಡೆಯುವ ಹಸಿವಾಗಲಿ ಅಥವಾ ಬದ್ಧತೆಯಾಗಲಿ ಇಲ್ಲ ಅಂತ ಬರಾಕ್ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ. ಇದು ಈಗ ಸದ್ಯ ಆಡಳಿತ ಪಕ್ದವರಿಗೆ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.

Comments are closed.