ಹೈದರಾಬಾದ್: ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ಮುತ್ತಂಗಿ ಬಳಿಯ ORR ರಿಂಗ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ಮುತ್ತಂಗಿ ಬಳಿಯ ಔಟರ್ ರಿಂಗ್ ರೋಡ್ ನಲ್ಲಿ ಈ ಅಪಘಾತ ಸಂಭವಿಸಿದ್ದು, ಹೈದರಾಬಾದ್ನ ಗಚ್ಚಿಬೌಲಿಯಿಂದ ಜಾರ್ಖಂಡ್ ಗೆ ಹೊರಟಿದ್ದಾಗ ಹೊರ ವಲಯದ ರಿಂಗ್ ರೋಡ ಬಳಿ ಅಪಘಾತ ಸಂಭವಿಸಿದೆ. ಪಾಟಿ ಗ್ರಾಮ ಸಮೀಪದಲ್ಲಿ ಕ್ಸೈಲೋ ವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿಯಿಂದಾಗಿ ವಾಹನದಲ್ಲಿದ್ದ 7ಜನ ಸಾವನ್ನಪ್ಪಿದ್ದಾರೆ.
ಒಟ್ಟು 10ಜನ ವಾಹನದಲ್ಲಿದ್ದರು ಎನ್ನಲಾಗಿದೆ. ಉಳಿದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತರೆಲ್ಲ ಜಾರ್ಖಂಡ(ಘೋರಖಪುರ, ರಾಂಘಡ)ಗೆ ಸೇರಿದವರೆಂದು ಗುರುತಿಸಲಾಗಿದೆ. ಮೃತರು ಕಾರ್ಪೆಂಟರ್ ವೃತ್ತಿ ಮಾಡುತ್ತಿದ್ದರು ಎನ್ನಲಾಗಿದೆ. ಹೈದರಾಬಾದ್ನ ಗಚ್ಚಿಬೌಲಿಯಿಂದ ಜಾರ್ಖಂಡಗೆ ಹೊರಟಿದ್ದಾಗ ಹೊರ ವಲಯದ ರಿಂಗ್ ರೋಡ ಬಳಿ ಅಪಘಾತ ಸಂಭವಿಸಿದೆ.