ರಾಷ್ಟ್ರೀಯ

ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮೌಲ್ಯ ಕುಸಿತ: ಅಂಬಾನಿಗೆ 7 ಶತಕೋಟಿ ಡಾಲರ್ ನಷ್ಟ

Pinterest LinkedIn Tumblr


ಮುಂಬಯಿ : ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮೌಲ್ಯ ಕುಸಿದಿರುವುದು ಮುಖೇಶ್ ಅಂಬಾನಿಗೆ (Mukesh Ambani) ದೊಡ್ಡ ಹೊಡೆತ ನೀಡಿದೆ. ಏಷ್ಯಾದ ಶ್ರೀಮಂತ ಉದ್ಯಮಿ 7 ಶತಕೋಟಿ ಡಾಲರ್ ನಷ್ಟ ಮಾಡಿಕೊಂಡಿದ್ದಾರೆ. ಮೂರನೇ ತ್ರೈಮಾಸಿಕ ವಹಿವಾಟು ವರದಿಯಲ್ಲಿ ರಿಲಯನ್ಸ್ ನಿವ್ವಳ ಲಾಭಾಂಶ ಕುಸಿದಿರುವುದೇ ರಿಲಯನ್ಸ್ (Reliance) ಷೇರುಗಳ ದಿಢೀರ್ ಕುಸಿತಕ್ಕೆ ಕಾರಣವಾಗಿದೆ. ಇದರಿಂದಾಗಿ ಸೋಮವಾರ ಆರ್‌ಐಎಲ್ ಷೇರುಗಳು ತೀವ್ರವಾಗಿ ಕುಸಿದಿದ್ದು, ಇದು ಮಂಗಳವಾರವೂ ಮುಂದುವರೆದಿದೆ.

ಸೋಮವಾರ ರಿಲಯನ್ಸ್ ಇಂಡಸ್ಟ್ರಿ ಷೇರುಗಳಲ್ಲಿ ಶೇ. 9ರಷ್ಟು ಕುಸಿತ ದಾಖಲಾಗಿತ್ತು. ಮಾರ್ಚ್ 23 ರ ನಂತರ ರಿಲಯನ್ಸ್ ಇಂಡಸ್ಟ್ರೀಸ್ನಲ್ಲಿ ಇದು ಅತಿದೊಡ್ಡ ಕುಸಿತವಾಗಿದೆ. ತೈಲ ರಿಫೈನರಿಯಿಂದ ಹಿಡಿದು ರಿಟೆಲ್ ವ್ಯವಹಾರದ ತನಕ ಉದ್ಯಮದಲ್ಲಿ ಪ್ರಭುತ್ವ ಸಾಧಿಸಿರುವ ರಿಲಯನ್ಸ್ ಕಳೆದ ತ್ರೈಮಾಸಿಕದ ಆದಾಯದಲ್ಲಿ 1.3 ಬಿಲಿಯನ್ ಡಾಲರ್ ಕುಸಿತ ದಾಖಲಾಗಿದೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ, ಆದಾಯದಲ್ಲಿ ಶೇಕಡಾ 15 ರಷ್ಟು ಕುಸಿತ ದಾಖಲಾಗಿದೆ.

ಈ ಕಾರಣದಿಂದಾಗಿ ಫೋರ್ಬ್ಸ್ (Frobes) ರಿಯಲ್ ಟೈಮ್ ಬಿಲಿಯನೇರ್ಸ್ ಪಟ್ಟಿಯ ಪ್ರಕಾರ ಮುಖೇಶ್ ಅಂಬಾನಿಯ ನಿವ್ವಳ ಮೌಲ್ಯವೂ 6.9 ಬಿಲಿಯನ್ ಕುಸಿದಿದೆ, ಈಗ ಮುಖೇಶ್ ಅಂಬಾನಿಯ ಸಂಪತ್ತು 71 ಬಿಲಿಯನ್ ತಲುಪಿದೆ. ಅವರು ಫೋರ್ಬ್ಸ್ ಟಾಪ್ 10 ಶ್ರೀಮಂತರ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದ್ದಾರೆ. ನಿನ್ನೆ ತನಕ ಅವರು 8 ನೇ ಸ್ಥಾನದಲ್ಲಿದ್ದರು ಮತ್ತು ಅದಕ್ಕೂ ಮೊದಲು ಅವರು 5 ನೇ ಸ್ಥಾನದಲ್ಲಿದ್ದರು.

ರಿಲಯನ್ಸ್ ಇಂಡಸ್ಟ್ರೀಸ್ ಲಾಭ ಕುಸಿಯಿತು
ರಿಲಯನ್ಸ್ ಇಂಡಸ್ಟ್ರೀಸ್ ಶುಕ್ರವಾರ ತನ್ನ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿತು. ಇದರಲ್ಲಿ ಆರ್‌ಐಎಲ್‌ನ ಲಾಭವು ಶೇಕಡಾ 15 ರಷ್ಟು ಕುಸಿದು 9,570 ಕೋಟಿ ರೂ. ತಲುಪಿತು. ಕರೋನಾ ಬಿಕ್ಕಟ್ಟಿನಿಂದಾಗಿ ಇಂಧನ ಬೇಡಿಕೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಆದಾಯ ಕೂಡ 24% ಕುಸಿದು 1.16 ಲಕ್ಷ ಕೋಟಿಗೆ ತಲುಪಿದೆ.

Comments are closed.