ರಾಷ್ಟ್ರೀಯ

ಶೀಘ್ರದಲ್ಲೇ ಮರಾಠಿ ಮಾತನಾಡುವ ಕರ್ನಾಟಕದ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರ್ಪಡೆ: ಸಚಿವ ಪಾಟೀಲ್

Pinterest LinkedIn Tumblr


ಔರಂಗಾಬಾದ್: ಮರಾಠಿ ಮಾತನಾಡುವ ಕರ್ನಾಟಕ ಗಡಿ ಪ್ರದೇಶಗಳು ಶೀಘ್ರದಲ್ಲೇ ಮಹಾರಾಷ್ಟ್ರಕ್ಕೆ ಸೇರಲಿವೆ ಎಂದು ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಹೇಳಿದ್ದಾರೆ.

ಭಾಷಾ ಸೂಕ್ಷ್ಮ ವಿಚಾರದ ಸಂಬಂಧ ಮಾತನಾಡಿದ ಮಹಾರಾಷ್ಟ್ರ ಎನ್‌ಸಿಪಿ ಅಧ್ಯಕ್ಷ ಪಾಟೀಲ್, “ಮರಾಠಿ ಸಹೋದರರನ್ನು ಬೆಂಬಲಿಸಿ ಎನ್‌ಸಿಪಿ ಇಂದು ಕರಾಳ ದಿನ ಆಚರಿಸುತ್ತಿದೆ. ಈ ವೇಳೆ ಪ್ರತಿಭಟನೆಯ ಕುರುಹಾಗಿ ಕಪ್ಪು ರಿಬ್ಬನ್‌ ಕಟ್ಟಿಕೊಳ್ಲಲಾಗಿದೆ” ಎಂದು ಹೇಳಿದರು.

“ಕರ್ನಾಟಕದ ಮರಾಠಿ ಗಡಿ ನಿವಾಸಿಗಳ ವಿರುದ್ಧದ ಅನ್ಯಾಯ, ದೌರ್ಜನ್ಯ ಮತ್ತು ದಬ್ಬಾಳಿಕೆ ಸಹಿಸಲಾಗದು ಈ ಸಂಬಂಧ ರಾಜ್ಯದ ಎನ್‌ಸಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಗಡಿ ಪ್ರದೇಶಗಳಲ್ಲಿ ಸಮಸ್ಯೆಯಲ್ಲಿರುವ ಜನರ ಬೆಂಬಲಕ್ಕೆ ಇಡೀ ಮಹಾರಾಷ್ಟ್ರ ಜನರಿದ್ದಾರೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Comments are closed.