ರಾಷ್ಟ್ರೀಯ

ಎರಡು ತಿಂಗಳ ಹಿಂದೆ ಲವ್ ಮ್ಯಾರೇಜ್ ಆಗಿದ್ದ ಹೆಂಡತಿಯನ್ನು ನಾಯಿ ಚೈನಿನಿಂದ ಹತ್ಯೆ ಮಾಡಿದ ಗಂಡ

Pinterest LinkedIn Tumblr


ಭೋಪಾಲ್: ಎರಡು ತಿಂಗಳ ಹಿಂದೆ ಪ್ರೀತಿಸಿದ್ದ ಯುವತಿಯನ್ನೇ ಮದುವೆಯಾಗಿದ್ದ ಯುವಕ ಇದೀಗ ಆಕೆಯನ್ನು ನಾಯಿ ಚೈನಿನಿಂದ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ವರದಿಯಾಗಿದೆ.

ಮೊದಲಿಗೆ ನಾಯಿ ಚೈನಿನಿಂದ ಕತ್ತು ಹಿಸುಕಿ ಕೊಂದ ಬಳಿಕ ಚೂರಿಯಿಂದ ಮನಸೋ ಇಚ್ಛೆ ಇರಿದಿದ್ದಾನೆ. ಇನ್ನು ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯ ಪಕ್ಕ ಕೆಲ ಸಮಯ ಕುಳಿತ ಆರೋಪಿ ನಂತರ ತಂದೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ.

ಪತಿ ಹರ್ಷ ತನ್ನ 22 ವರ್ಷದ ಪತ್ನಿ ಅಂಶು ಶರ್ಮಾಳನ್ನು ಅತೀ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಫ್ಲಾಟ್ ನಲ್ಲಿ ದಂಪತಿ ಇಬ್ಬರೇ ವಾಸವಾಗಿದ್ದು ಸಣ್ಣ ಸಣ್ಣ ವಿಚಾರಕ್ಕೂ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಇದೇ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿದ್ದಾನೆ. ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಕೊರೋನಾ ಲಾಕ್ ಡೌನ್ ನಿಂದಾಗಿ ಕಳೆದ ಆಗಸ್ಟ್ 8ರಂದು ಅಂಶು ಮತ್ತು ಹರ್ಷ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಇಬ್ಬರಿಗೂ ಪರಿಚಯವಾಗಿ ನಂತರ ಪ್ರೀತಿಯ ಬಲೆಗೆ ಬಿದ್ದಿದ್ದರು. ಆದರೆ ಇದೀಗ ಎರಡನೇ ತಿಂಗಳಿಗೆ ಹರ್ಷ ಪತ್ನಿಯನ್ನು ಕೊಲೆ ಮಾಡಿದ್ದಾನೆ.

Comments are closed.