ರಾಷ್ಟ್ರೀಯ

5 ಸ್ಟಾರ್ ಹೋಟೆಲ್‍ನಲ್ಲಿ ಹೈ ಟೆಕ್ ಸೆಕ್ಸ್ ದಂಧೆ- ಓರ್ವ ಸಿನಿಮಾ ನಟಿ ಬಂಧನ

Pinterest LinkedIn Tumblr


ಮುಂಬೈ: ಹೈ ಟೆಕ್ ಸೆಕ್ಸ್ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಓರ್ವ ನಟಿಯನ್ನು ಬಂಧಿಸಿ, ಮೂವರು ಧಾರಾವಾಹಿ ನಟಿಯರನ್ನು ರಕ್ಷಿಸಿದ್ದಾರೆ.

ಗ್ರಾಹಕರ ಸೋಗಿನಲ್ಲಿ ಹೋಗಿ ಮುಂಬೈನ ಹೈ ಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಅಪರಾಧ ವಿಭಾಗದ 11ನೇ ಯುನಿಟ್ ಪೊಲೀಸರು ದಾಳಿ ನಡೆಸಿದ್ದು, ಓರ್ವ ಸಿನಿಮಾ ನಟಿಯನ್ನು ಬಂಧಿಸಿದ್ದಾರೆ. ಅಲ್ಲದೆ ಮೂವರು ಧಾರಾವಾಹಿ ನಟಿಯರನ್ನು ರಕ್ಷಿಸಿದ್ದಾರೆ. ನಟಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿಲ್ಲ. ಉಳಿದ ಮೂವರು ನಟಿಯರು ವಿವಿಧ ಧಾರಾವಾಹಿಗಳಲ್ಲಿ ಪಾತ್ರಗಳನ್ನು ನಿರ್ವಹಿಸುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಟಿಯರು ಹಾಗೂ ಬೆಳ್ಳಿ ಡ್ಯಾನ್ಸ್ ಮಾಡುವ ಹುಡುಗಿಯರು ಸೆಕ್ಸ್ ದಂಧೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ನಕಲಿ ಗ್ರಾಹಕರನ್ನು ಕಳುಹಿಸಿದ್ದು, ಮೂವರು ಮಹಿಳೆಯರಿಗೆ 10.50 ಲಕ್ಷ ರೂ. ವ್ಯವಹಾರ ಕುದುರಿಸಿ ನಟಿ ಮಣಿಯರಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಬಳಿಕ ಹಿರಿಯ ಇನ್‍ಸ್ಪೆಕ್ಟರ್ ಮಹೇಶ್ ತವಾಡೆ ಅವರ ನೇತೃತ್ವದ ತಂಡ ಗೋರೆಗಾಂವ್‍ನ 5 ಸ್ಟಾರ್ ಹೋಟೆಲ್ ಮೇಲೆ ದಾಳಿ ನಡೆಸಿದ್ದು, ಈ ವೇಳೆ ನಟಿಯರನ್ನು ಬಂಧಿಸಿದ್ದಾರೆ. ಐಪಿಸಿ ಹಾಗೂ ಅನೈತಿಕ ಕಳ್ಳಸಾಗಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ವನ್ರಾಯ್ ಪೊಲೀಸ್ ಠಾಣೆಯ ಅಧಿಕಾರಿಗಳು ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

Comments are closed.