ರಾಷ್ಟ್ರೀಯ

ಮದುವೆಯಾಗಲು ಸುಂದರ ವಧು ಬೇಕು….ಆದರೆ ಆಕೆಗೆ ಆ ಅಭ್ಯಾಸ ಇರಬಾರದು..!

Pinterest LinkedIn Tumblr

ಕೊಲ್ಕತ್ತಾ: ಪಶ್ಚಿಮ ಬಂಗಾಳದ 37 ವರ್ಷದ ವ್ಯಕ್ತಿ ಪತ್ರಿಕೆಯೊಂದರ ‘ವಧು-ವರರ ವೇದಿಕೆ’ ಒಂದಕ್ಕೆ ‘ಸೋಷಿಯಲ್‌ ಮೀಡಿಯಾ ವ್ಯಸನವಿರದ ವಧು ಬೇಕು’ ಎಂದು ನೀಡಿದ ಜಾಹೀರಾತು ಈಗ ವೈರಲ್‌ ಆಗಿದೆ.

ಜಾಹೀರಾತಿನಲ್ಲಿ ವರನ ಬಗ್ಗೆಯೂ ಸಂಪೂರ್ಣ ವಿವರಗಳಿವೆ. ವಯಸ್ಸು-37 ವರ್ಷ, 5.7 ಅಡಿ ಎತ್ತರದ, ಸುಂದರ, ಶ್ವೇತವರ್ಣದ ಯೋಗಪಟು, ಸಂಶೋಧಕ, ವಕೀಲರಾಗಿ ಕೆಲಸ ಮಾಡುತ್ತಿರುವ ವರನಿಗೆ ವಧು ಬೇಕಾಗಿದ್ದಾಳೆ. ಸ್ವಂತ ಮನೆ ಹೊಂದಿರುವ ತನ್ನ ಬಳಿ ಕಾರು ಕೂಡ ಇದ್ದು, ವಾಸಿಸುತ್ತಿರುವುದಾಗಿ ವಿವರಗಳಿದೆ. ವಧು ಬೆಳ್ಳಗೆ, ತೆಳ್ಳಗೆ, ಸುಂದರವಾಗಿ ಇರಬೇಕು. ಅಲ್ಲದೇ ಸೋಷಿಯಲ್‌ ಮೀಡಿಯಾದ ವ್ಯಸನಿಯಾಗಿರಬಾರದು” ಎಂದುಈ ಜಾಹೀರಾತುವಿನಲ್ಲಿ ಉಲ್ಲೇಖಿಸಲಾಗಿದೆ.

ಈ ವಿಚಿತ್ರ ಬೇಡಿಕೆಯ ಜಾಹೀರಾತು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಐಎಎಸ್ ಅಧಿಕಾರಿಯೊಬ್ಬರು ಈ ಜಾಹಿರಾತನು ಟ್ವೀಟ್ ಮಾಡಿದ್ದಾರೆ.

(ಸಾಂದರ್ಭಿಕ ಚಿತ್ರಗಳು)

Comments are closed.