ರಾಷ್ಟ್ರೀಯ

ಜನವರಿಯಲ್ಲಿ ಪುಣೆ ಸಂಸ್ಥೆಯಿಂದ ಕರೊನಾ ಲಸಿಕೆ ದೊರಕುವ ಭರವಸೆಯ ಶುಭಸುದ್ದಿ!

Pinterest LinkedIn Tumblr
..

ಪುಣೆ: ಜಗತ್ತಿನಾದ್ಯಂತ ಕರೊನಾ ವೈರಸ್ ಗೆ ಲಸಿಕೆ ಕಂಡುಹಿಡಿಯಲು ಹಲವು ಪ್ರಯೋಗಗಳು ನಡೆಯುತ್ತಿವೆ. ಈಗ ಲಸಿಕೆಯ ಶುಭಸುದ್ದಿಯ ಭರವಸೆಯ ನಿರೀಕ್ಷೆಯೊಂದು ಹೊರಬಿದ್ದಿದೆ.

ಪುಣೆಯಲ್ಲಿರುವ ಸೀರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ (ಎಸ್​ಐಐ) ಕರೊನಾ ಲಸಿಕೆಯನ್ನು ಉತ್ಪಾದಿಸುವ ಪ್ರಕ್ರಿಯೆಯಲ್ಲಿದೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಎನ್​ಸಿಪಿ ಅಧ್ಯಕ್ಷ ಶರದ್​ ಪವಾರ್​ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬಿಸಿಜಿ ಲಸಿಕೆ ಪಡೆಯಲು ಎಸ್​​ಐಐಗೆ ಭೇಟಿ ಕೊಟ್ಟ ಬಳಿಕ, 2021ರ ಜನವರಿಯಲ್ಲಿ ಕರೊನಾ ಲಸಿಕೆ ಲಭ್ಯವಾಗಲಿದೆ ಎಂಬ ವಿಷಯ ಹೊರಗೆಡಹಿದ್ದಾರೆ.

ಆಗಸ್ಟ್​ ಬಳಿಕ ಪವಾರ್ ಇಲ್ಲಿಗೆ ಎರಡನೇ ಸಲ ಭೇಟಿ ಕೊಟ್ಟಿದ್ದು, ಕರೊನಾ ಲಸಿಕೆ ತಯಾರಿ ಕುರಿತು ಕುತೂಹಲ ಮೂಡಿದೆ. ಎಸ್​ಐಐ ಚೇರ್ಮನ್​ ಡಾ. ಸಿರಸ್​ ಎಸ್​. ಪೂನಾವಾಲಾ ಮತ್ತು ಅವರ ಪುತ್ರ, ಸಂಸ್ಥೆಯ ಸಿಇಒ ಅಡರ್​ ಪೂನಾವಾಲಾ ಅವರು ಪವಾರ್ ಜತೆ ಉತ್ತಮ ಸಂಬಂಧ ಹೊಂದಿರುವುದರಿಂದ ಪವಾರ್ ಅವರ ಹೇಳಿಕೆ ಭರವಸೆ ಮೂಡಿಸಿದೆ.

Comments are closed.