ರಾಷ್ಟ್ರೀಯ

ಕೃಷಿ ಮಸೂದೆ ವಿರೋಧಿಸಿ ಕೇಂದ್ರ ಸಚಿವ ಸ್ಥಾನ ತೊರೆದಿದ್ದ ಹರ್ಸಿಮ್ರತ್​ ಕೌರ್ ಬಾದಲ್​ ಅರೆಸ್ಟ್

Pinterest LinkedIn Tumblr


ಚಂಡೀಗಢ: ನೂತನ ಕೃಷಿ ಮಸೂದೆಗೆ ವಿರೋಧಿಸಿ ಕೇಂದ್ರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶಿರೋಮಣಿ ಅಕಾಲಿದಳದ ಸದಸ್ಯೆ ಹರ್ಸಿಮ್ರತ್​ ಕೌರ್​ ಬಾದಲ್​ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪಂಜಾಬ್​ನಲ್ಲಿ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಅವರು ಚಂಡೀಗಢ ಪ್ರವೇಶ ಮಾಡಲು ಮುಂದಾದರು. ಈ ವೇಳೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ರೈತರ ಪರ ಧ್ವನಿ ಎತ್ತಿದ್ದಕ್ಕಾಗಿ ನಮ್ಮನ್ನು ಬಂಧಿಸಲಾಗಿದೆ. ಅವರು ನಮ್ಮನ್ನು ಧ್ವನಿ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಕೌರ್​ ಟ್ವೀಟ್​ ಮಾಡಿದ್ದಾರೆ. ಕೃಷಿಕರ ಹಕ್ಕಿನ ಕುರಿತು ಮಾತನಾಡಿದ್ದಕ್ಕೆ ನಮ್ಮನ್ನು ಬಂಧಿಸಲಾಗುತ್ತಿದೆ. ಆದರೆ, ನಾವು ಸತ್ಯವನ್ನು ಅನುಸರಿಸುತ್ತೇವೆ.ನಮ್ಮ ಧ್ವನಿಯನ್ನು ಬಲಪ್ರಯೋಗದ ಮೂಲಕ ಧಮನ ಮಾಡಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ನೂತನ ಕೃಷಿ ಮಸೂದೆ ವಿರೋಧಿಸಿ ಅಕಾಲಿದಳ ಇಂದು ಕಿಸಾನ್​ ಮಾರ್ಚ್ ಎಂಬ ಹೆಸರಿನಲ್ಲಿ ಮೂರು ​ ಮೆರವಣಿಗೆ ನಡೆಸಿತ್ತು. ಅಕಾಲಿದಳ ಮುಖ್ಯಸ್ಥ ಸುಖ್ಭೀರ್​ ಸಿಂಗ್​ ಬಾದಲ್​ ನೇತೃತ್ವದ ತಂಡ ಅಮೃತ್​ಸರದಿಂದ ಈ ಮೆರವಣಿಗೆ ಆರಂಭಿಸಿತು. ಎರಡನೇ ಮೆರವಣಿಗೆಯನ್ನು, ಅಮೃತ್​ಸರದಿಂದ ಹರ್ಸೀಮ್ರತ್​ ಕೌರ್​ ನಡೆಸಿದರೆ ಮೂರನೇ ಮೆರವಣಿಗೆ ನೇತೃತ್ವವನ್ನು ಪ್ರೇಮ್​ ಸಿಂಗ್​ ವಹಿಸಿದ್ದರು. ವಿವಿಧ ಸ್ಥಳಗಳಿಂದ ಆರಂಭವಾದ ಈ ಮಸೂದೆ ಚಂಡೀಗಢದಲ್ಲಿ ಸೇರಬೇಕಿತ್ತು. ಬಳಿಕ ಮೂವರು ನಾಯಕರು ಪಂಜಾಬ್​ ರಾಜ್ಯಪಾಲರಿಗೆ ಕೃಷಿ ಮಸೂದೆ ವಿರೋಧಿಸಿ ಪತ್ರ ನೀಡಲು ತೀರ್ಮಾನಿಸಿದ್ದರು.ಇದನ್ನೂ ಓದಿ : ಹಬ್ಬದ ಸೀಸನ್​ನಲ್ಲಿ 200 ಹೆಚ್ಚುವರಿ ರೈಲುಗಳಿಗೆ ಚಾಲನೆ ಸಾಧ್ಯತೆ

ಈ ವೇಳೆ ಹರ್ಸಿಮ್ರತ್​ ಕೌರ್​ ಬಾದಲ್​ ಅವರನ್ನು ಸುತ್ತುವರೆದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಜೆಪಿಯ ಹಳೆ ಮೈತ್ರಿ ಪಕ್ಷವಾಗಿದ್ದ ಅಕಾಲಿದಳ ಕೃಷಿ ಮಸೂದೆ ವಿರೋಧಿಸಿ, ಎನ್​ಡಿಎ ಒಕ್ಕೂಟ ತೊರೆದು ಬಂದಿದೆ.

ಈ ಕೃಷಿ ಮಸೂದೆ ಪಂಜಾಬ್​ನಲ್ಲಿ ತೀವ್ರವಿರೋಧ ವ್ಯಕ್ತವಾಗಿದೆ. ಈ ಮಸೂಧೆ ರೈತರ ಕನಿಷ್ಠ ಬೆಂಬಲ ಬೆಲೆಯನ್ನು ಅಂತ್ಯಗೊಳಿಸುತ್ತದೆ. ಖಾಸಗಿ ಕರ್ಪೊರೇಟರ್​ ಪರವಾಗಿ ಈ ಮಸೂದೆ ಇದೆ ಎಂಬ ಆರೋಪ ಮಾಡಿದೆ.

Comments are closed.