
ಶಬರಿಮಲೆ: ಅಯ್ಯಪ್ಪನ ಸನ್ನಿಧಾನದಲ್ಲಿ ನವೆಂಬರ್ 15ರಿಂದ ವಾರ್ಷಿಕ ಮಂಡಲ ಪೂಜೆ ಆರಂಭವಾಗಲಿದ್ದು, ಜನವರಿ 14ರ ಮಕರ ಸಂಕ್ರಾಂತಿಗೆ ಷರತ್ತುಗಳೊಂದಿಗೆ ಅನುಮತಿ ನೀಡಲಾಗಿದೆ.
ಭಕ್ತರಿಗೆ ಕೆಲವು ಷರತ್ತುಗಳು ಅನ್ವಯವಾಗಲಿದ್ದು, ದರ್ಶನಕ್ಕೆ ಬರುವವರು ನೆಗೆಟೀವ್ ಸರ್ಟಿಫಿಕೇಟ್ ತರುವುದು ಕಡ್ಡಾಯ. ಬೇರೆ ಬೇರೆ ರಾಜ್ಯ ಮತ್ತು ಜಿಲ್ಲೆಗಳಿಂದ ಪಂಪಾಗೆ ಬಂದ ತಕ್ಷಣ ಭಕ್ತರಿಗೆ ಮತ್ತೆ ಕೋವಿಡ್ ಟೆಸ್ಟ್ ನಡೆಯಲಿದೆ.
65 ವರ್ಷ ಮೇಲ್ಪಟ್ಟವರು ಮತ್ತು 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಅವಕಾಶ ಇರಲ್ಲ. ದರ್ಶನಕ್ಕೆ ಇಂತಿಷ್ಟು ಭಕ್ತರು ಅಂತಾ ಮೊದಲೇ ನಿರ್ಧರಿಸಿ ನಿಗದಿಗೊಳಿಸಿದ ಸಮಯದಲ್ಲಿ ದೇಗುಲದ ಒಳಗೆ ಬಿಡಲಾಗುತ್ತದೆ.
ಆಂಧ್ರ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕ ಜಿಲ್ಲೆಗಳಿಂದ ಹೆಚ್ಚು ಭಕ್ತರು ಅಯ್ಯಪ್ಪನ ದರ್ಶನಕ್ಕೆ ಬರ್ತಾರೆ. ಓಣಂ ನಂತರ ಕೇರಳದಲ್ಲಿ ಕೊರೋನಾ ಹೆಚ್ಚಳವಾಗಿದೆ. ಹೀಗಾಗಿ ಮಕರ ಸಂಕ್ರಾಂತಿವರೆಗಿನ ಎರಡು ತಿಂಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿ ಕೊರೋನಾ ಕೇಸ್ ಏರಬಹುದು ಎನ್ನುವ ಆತಂಕ ಇದೆ. ಹೀಗಾಗಿ ಕಟ್ಟು ನಿಟ್ಟಿನ ಗೈಡ್ಲೈನ್ ಪಾಲಿಸಲು ಕೇರಳ ಸರ್ಕಾರ ನಿರ್ಧರಿಸಿದೆ.
Comments are closed.