ರಾಷ್ಟ್ರೀಯ

ಪ್ರಿಯತಮೆಯನ್ನು ನೋಡಲು ಹೋದ ಪ್ರಿಯಕರ ಹ#ತ್ಯೆಯಾಗಿದ್ದು ಯಾಕೆ ಗೊತ್ತಾ?

Pinterest LinkedIn Tumblr


ಮಥುರಾ:. ಎರಡು ಹಳ್ಳಿಗಳ ಮಧ್ಯದ ಉ#ದ್ವಿಘ್ನದ ಪರಿಸ್ಥತಿಯಿಂದ ಯುವಕನೊಬ್ಬ ಹ#ತ್ಯೆಯಾಗಿರುವ ಘಟನೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಭರ್ತಿಯಾ ಹಳ್ಳಿಯಿಂದ ವರದಿಯಾಗಿದೆ.

ಪರಖಮ್ ಗುರ್ಜರ್ ಹಳ್ಳಿಯ ಸಾಹೇಬ್ ಸಿಂಗ್ ಹ#ತ್ಯೆಯಾದ ಯುವಕ. ತನ್ನ ಸ್ನೇಹಿತ ಲಕ್ಷ್ಮಣ್ ಸಿಂಗ್ ನೊಂದಿಗೆ ರಾತ್ರಿ ಪಕ್ಕದೂರಿನಲ್ಲಿರುವ ಸ್ನೇಹಿತೆಯನ್ನ ಭೇಟಿಯಾಗಲು ಹೋಗಿದ್ದನು. ಈ ಸಂದರ್ಭದಲ್ಲಿ ಯುವತಿಯ ಮನೆಯವರು ಯುವಕರಿಬ್ಬರನ್ನು ಹಿಡಿದಿದ್ದಾರೆ.

ಹಳ್ಳಿಯವರೊಂದಿಗೆ ಕೂಡಿ ಯುವತಿ ಮನೆಯವರು ಯುವಕರಿಬ್ಬರ ಮೇಲೆ ಹ#ಲ್ಲೆ ನಡೆಸಿದ್ದರಿಂದ ಸಾಹೇಬ್ ಸಿಂಗ್ ಸ್ಥಳದಲ್ಲಿಯೇ ಸಾ#ವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಪೊಲೀಸರು ಹೋದಾಗ ಹಳ್ಳಿಯ ಜನ ಓರ್ವ ಯುವಕನನ್ನು ಹೊ#ಡೆಯುತ್ತಿದ್ದರು. ಮತ್ತೋರ್ವ ಸಾ#ವನ್ನಪ್ಪಿದ್ದ. ಘಟನೆ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ ಎಂದು ಎಸ್‍ಎಸ್‍ಪಿ ಡಾ.ಗೌರವ್ ಗ್ರೋವರ್ ತಿಳಿಸಿದ್ದಾರೆ.

ಯುವತಿ ಠಾಕೂರ್ ಸಮಾಜದವಳಾಗಿದ್ದು, ಯುವಕ ಗುರ್ಜರ್ ಸಮುದಾಯಕ್ಕೆ ಸೇರಿದ್ದರಿಂದ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Comments are closed.