ನವದೆಹಲಿ: ಮೆಸೆಂಜರ್ ಅಪ್ಲಿಕೇಶನ್ ವಾಟ್ಸಾಪ್ (WhatsApp) ಪೂರ್ವನಿರ್ಧರಿತ ಸಮಯದ ನಂತರ, ಚಿತ್ರಗಳು, ವೀಡಿಯೊಗಳು ಮತ್ತು ಜಿಐಎಫ್ ಚಿತ್ರಗಳು ಮುಂತಾದ ಸಂದೇಶದೊಂದಿಗೆ ಕಳುಹಿಸಲಾದ ಸಂದೇಶಗಳು ಇನ್ಮುಂದೆ ಸ್ವಯಂಚಾಲಿತವಾಗಿ ಡಿಲೀಟ್ ಆಗಲಿವೆ.
ಇತ್ತೀಚಿನ WABetaInfo ವರದಿಯ ಪ್ರಕಾರ, ವಾಟ್ಸಾಪ್ ಇದೀಗ 2.20.201.1 ಬೀಟಾ ಆವೃತ್ತಿಯನ್ನು ಆಂಡ್ರಾಯ್ಡ್‌ನಲ್ಲಿ ಬಿಡುಗಡೆ ಮಾಡಿದೆ ಹಾಗೂ ಈ ಆವೃತ್ತಿಯಲ್ಲಿ ಎಕ್ಸಪಾಯರಿಂಗ್ ಮೀಡಿಯಾ ಫೀಚರ್ ತಥ್ಯಗಳನ್ನೂ ಶಾಮೀಲುಗೊಳಿಸಿದೆ. ಎಕ್ಸಪೈರಿಂಗ್ ಮೆಸೇಜ್ ವೈಶಿಷ್ಟ್ಯದಂತೆಗೆ ಇದು ತನ್ನ ಬಳಕೆದಾರರಿಗೆ ಎಕ್ಸಪೈರಿಂಗ್ ಮೀಡಿಯಾ (ಚಿತ್ರ, ವಿಡಿಯೋ ಹಾಗೂ ಜಿಐಎಫ್) ಕಳುಹಿಸಲು ಅನುಮತಿ ನೀಡಲಿದೆ. ಈ ಮಿಡಿಯಾಗಳನ್ನೂ ಪಡೆದ ವ್ಯಕ್ತಿ ಚಾಟ್ ಮುಕ್ತಾಯಗೊಳಿಸಿದ ಬಳಿಕ ಈ ಸಂದೇಶಗಳು ಸ್ವಯಂ ಚಾಲಿತವಾಗಿ ಡಿಲೀಟ್ ಆಗಲಿವೆ.
ಆದರೆ ಇದರ ವಿಶೇಷತೆ ಎಂದರೆ, ಸಂದೇಶ ಒಂದು ಬಾರಿಗೆ ಕಣ್ಮರೆಯಾದ ಬಳಿಕ (ಟೈಮರ್ ಆಧರಿಸಿ ) ನಿಮ್ಮ ಸ್ಕ್ರೀನ್ ಮೇಲೆ ‘This media is expired’ಗಳಂತಹ ಸಂದೇಶಗಳು ಬರುವುದಿಲ್ಲ. ಏಕ್ಸ್ಪೈರಿಂಗ್ ಮಿಡಿಯಾ ಚ್ಯಾಟ್ ವೇಳೆ ಒಂದು ವಿಶಿಷ್ಠ ರೀತಿಯಲ್ಲಿ ಕಂಗೊಳಿಸಲಿದೆ. ಅದನ್ನು ನೋಡಿ ನೀವು ಮಿಡಿಯಾ ಡಿಲೀಟ್ ಆಗಿರುವ ಕುರಿತು ಸುಲಭವಾಗಿ ತಿಳಿದುಕೊಳ್ಳಬಹುದು.
Comments are closed.